Thursday, April 16, 2026
Homeಮನರಂಜನೆಕನ್ನಡದಲ್ಲೂ ಹಾಡು ಹಾಡಿದ್ದ ಆಶಾ ಭೋಂಸ್ಲೆ

ಕನ್ನಡದಲ್ಲೂ ಹಾಡು ಹಾಡಿದ್ದ ಆಶಾ ಭೋಂಸ್ಲೆ

Asha Bhosle also sang in Kannada

ಮುಂಬೈ, ಏ.12- ಎಂಟು ದಶಕಕ್ಕೂ ಹೆಚ್ಚು ಕಾಲ ತಮ್ಮ ಸುಶ್ರಾವ್ಯ ಕಂಠದಿಂದ ಗಾನಪ್ರಿಯರ ಹೃದಯಗಳಲ್ಲಿ ನೆಲೆಸಿದ್ದ ಗಾನ ಸಾಮ್ರಾಜ್ಞೆ ಆಶಾ ಭೋಂಸ್ಲೆ ಅವರು ಇಂದು ಗಾನ ಲೋಕದಿಂದ ಬಾರದ ಲೋಕಕ್ಕೆ ತೆರಳುವ ಮೂಲಕ ಅಪಾರ ಸಂಗೀತಪ್ರಿಯರ ಮನಸ್ಸನ್ನು ಭಾರಗೊಳಿಸಿದ್ದಾರೆ.

ಸಂಗೀತ ಕುಟುಂಬದಲ್ಲಿ ಜನಿಸಿದ ಆಶಾಭೋಂಸ್ಲೆ ಅವರ ಅಕ್ಕ ಲತಾ ಮಂಗೇಶ್ಕರ್‌ ಅವರು ಎಲ್ಲಾ ಚಿತ್ರರಂಗದಲ್ಲಿ ಮೇರು ಶಿಖರದಲ್ಲಿದ್ದರೂ ಕೂಡ ತಮ ಗಾನ ಪಯಣದಲ್ಲಿ ಅವರ ನೆರಳಲ್ಲಿ ಬೆಳೆಯದೆ ತಮದೇ ಆದ ಅಭಿಮಾನಿಗಳ ಬಳಗವನ್ನೇ ಸೃಷ್ಟಿಸಿಕೊಂಡಿದ್ದ ಆಶಾಭೋಂಸ್ಲೆ ಅವರು ಪಂಚಭಾಷೆಗಳಲ್ಲಿ ತಮ ಗಾಯನದ ಕಂಪನ್ನು ಪಸರಿಸಿದ್ದರು.

ಮಾರಾಠಿ ಭಾಷಾ ಚಿತ್ರಗಳಲ್ಲೇ ಹೆಚ್ಚಾಗಿ ತಮ ಗಾನದ ಸಿರಿಯನ್ನು ಹರಿಸಿರುವ ಆಶಾಭೋಂಸ್ಲೆ ಅವರು 1951ರಲ್ಲಿ ಮರಾಠಿ ಸಿನಿಮಾವಾದ ಅಮರ್‌ ಭೋಪಾಲ್‌ ಚಿತ್ರದ ಸಾಗಾ ಮುಕುಂದ್‌ ಕುನಿ ಹೆ ಪಾಹೆಲಾ ಗೀತೆಯ ಮೂಲಕ ತಮ ಗಾಯನದ ಪಯಣ ಆರಂಭಿಸಿದ ಆಶಾ ಭೋಂಸ್ಲೆ ಅವರು 1950 ರಿಂದ 2000ರವರೆಗೆ ಹಲವಾರು ಸೂಪರ್‌ ಹಿಟ್‌ ಗೀತೆಗಳನ್ನು ಹಾಡುವ ಮೂಲಕ ಗಾನಪ್ರಿಯರನ್ನು ತಮತ್ತ ಸೆಳೆದುಕೊಂಡಿದ್ದರು.

ಬಾಲಿವುಡ್‌ ಹೇ ಮೇರಾ ದಿಲ್‌ ಗೀತೆಯು ಇಂದಿಗೂ ಹೆಚ್ಚು ಜನಪ್ರಿಯವಾಗಿರುವುದು ಆ ಸಿನಿಮಾದ ಸಾಹಿತ್ಯ, ಸಂಗೀತದಷ್ಟೇ ಆಶಾ ಭೋಂಸ್ಲೆ ಅವರ ಗಾಯನ ಸಿರಿಯು ಅಷ್ಟೇ ಪ್ರಮುಖ್ಯತೆ ಪಡೆದಿದೆ.

ಮರಾಠಿ, ಬಾಲಿವುಡ್‌ ಅಲ್ಲದೆ ತೆಲುಗು, ತಮಿಳು ಹಾಗೂ ಕನ್ನಡದ ನಂಟನ್ನು ಬೆಳೆಸಿಕೊಂಡ ಆಶಾಭೋಂಸ್ಲೆ ಅವರು ಆಗಿನ ಕಾಲದ ಸ್ಟಾರ್‌ ನಟರುಗಳಾದ ಡಾ.ರಾಜ್‌ಕುಮಾರ್‌, ಎನ್‌.ಟಿ.ರಾಮರಾವ್‌, ಅಕ್ಕಿನೇನಿ ನಾಗೇಶ್ವರ್‌, ಎಂ.ಜಿ.ರಾಮಚಂದ್ರ, ಶಿವಾಜಿ ಗಣೇಶನ್‌ ಅವರ ಸಿನಿಮಾಗಳಲ್ಲೂ ಹಲವು ಗೀತೆಯನ್ನು ಆಶಾಭೋಂಸ್ಲೆ ಹಾಡುವ ಮೂಲಕ ಗಮನ ಸೆಳೆದಿದ್ದಾರೆ.

ಕನ್ನಡದ ನಂಟು:
1967ರಲ್ಲಿ ತೆರೆಕಂಡಿದ್ದ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಸಿನಿಮಾದ `ಯಾಕೋ ಏನೋ ಸೆರಗು’ ಎಂಬ ಗೀತೆಯ ಮೂಲಕ ಕನ್ನಡ ಚಿತ್ರರಂಗಕ್ಕೂ ಆಗಮಿಸಿದ ಆಶಾಭೋಂಸ್ಲೆ ನಂತರ ಡಾ.ರಾಜ್‌ಕುಮಾರ್‌ ಹಾಗೂ ಭಾರತಿ ಅಭಿನಯದ ದೂರದ ಬೆಟ್ಟ ಸಿನಿಮಾದ ಸವಾಲು ಹಾಕಿ ಸೋಲಿಸಿ ಎಲ್ಲರ… ಗೀತೆಯನ್ನು ಹಾಡಿದ ನಂತರ 2010ರಲ್ಲಿ ಶ್ರೀನಗರ ಕಿಟ್ಟಿ ಅಭಿನಯದ ಮತ್ತೆ ಮುಂಗಾರು ಸಿನಿಮಾದ ಹೇಳದೆ ಕಾರಣ ಹೋದೆಯಾ’ ಗೀತೆಯನ್ನು ಹಾಡಿದ್ದರು.

ಆಗಿನ ಕಾಲದ ಖ್ಯಾತ ಸಂಗೀತ ನಿರ್ದೇಶಕರಾದ ಒ.ಪಿ.ನಯ್ಯರ್‌, ಖಯ್ಯಮ್‌, ರವಿ, ಇಳಯರಾಜಾ, ಎಸ್‌‍.ಡಿ.ಬರ್ಮನ್‌, ಆರ್‌.ಡಿ.ಬರ್ಮನ್‌ , ಇಳಯರಾಜರ ಬಹುತೇಕ ಚಿತ್ರಗಳಲ್ಲಿ ಆಶಾ ಭೋಂಸ್ಲೆ ಅವರು ತಮ ಗಾನಸುಧೆ ಹರಿಸಿದ್ದಾರೆ.

RELATED ARTICLES

Latest News