Homeಬೆಂಗಳೂರುಸಾವಿನ ಜಾಲಿ ರೈಡ್‌ : ಬೈಕ್‌ನಿಂದ ಬಿದ್ದು ಯುವಕ ಸಾವು

ಸಾವಿನ ಜಾಲಿ ರೈಡ್‌ : ಬೈಕ್‌ನಿಂದ ಬಿದ್ದು ಯುವಕ ಸಾವು

Jolly ride of death: Young man dies after falling off bike

ಬೆಂಗಳೂರು, ಮೇ 11- ಬೈಕ್‌ನಲ್ಲಿ ಸ್ನೇಹಿತರಿಬ್ಬರು ಜಾಲಿ ರೈಡ್‌ಗೆ ಹೋಗಿದ್ದ ವೇಳೆ ಅತೀ ವೇಗದಿಂದಾಗಿ ನಿಯಂತ್ರಣ ತಪ್ಪಿ ಬಿದ್ದ ಪರಿಣಾಮ ಸವಾರ ಮೃತಪಟ್ಟಿರುವ ಘಟನೆ ಚಿಕ್ಕಜಾಲ ಸಂಚಾರಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ಇಂದು ಬೆಳಗಿನ ಜಾವ ನಡೆದಿದೆ.

ಬಾಣಸವಾಡಿಯ ಹೆಚ್‌ಆರ್‌ಬಿಆರ್‌ ಲೇಔಟ್‌ ನಿವಾಸಿ ಲಕ್ಷಯ್‌ ಕುಮಾರ್‌ (19) ಮೃತಪಟ್ಟ ಬೈಕ್‌ ಸವಾರ.ಬಿರಿಯಾನಿ ಹೋಟೇಲ್‌ವೊಂದರಲ್ಲಿ ಕೆಲಸ ಮಾಡುತ್ತಿದ್ದ ಈತ ಇಂದು ಬೆಳಗಿನ ಜಾವ 4 ಗಂಟೆ ಸುಮಾರಿನಲ್ಲಿ ತನ್ನ ಸ್ನೇಹಿತನನ್ನು ಕರೆದುಕೊಂಡು ಬೈಕ್‌ನಲ್ಲಿ ಜಾಲಿ ರೈಡ್‌ಗೆ ಏರ್‌ಪೋರ್ಟ್‌ ಕಡೆಗೆ ಹೋಗುತ್ತಿದ್ದರು.

ಬೆಂಗಳೂರು-ಬಳ್ಳಾರಿ ರಸ್ತೆಯ ವಿದ್ಯಾನಗರ ಬ್ರಿಡ್‌್ಜ ಬಳಿ ಅತೀ ವೇಗದಿಂದಾಗಿ ಬೈಕ್‌ ನಿಯಂತ್ರಣ ತಪ್ಪಿ ಉರುಳಿದ ಪರಿಣಾಮ ಲಕ್ಷಯ್‌ ಕುಮಾರ್‌ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾನೆ.

ಹಿಂಬದಿ ಸವಾರ ಗಾಯಗೊಂಡಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.ಸುದ್ದಿ ತಿಳಿದು ಚಿಕ್ಕಜಾಲ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News