Thursday, April 16, 2026
Homeಬೆಂಗಳೂರುಸಿಇಐಆರ್‌ ತಂತ್ರಾಂಶದಿಂದ 1.15 ಕೋಟಿ ಮೌಲ್ಯದ 385 ಮೊಬೈಲ್‌ಗಳ ವಶ

ಸಿಇಐಆರ್‌ ತಂತ್ರಾಂಶದಿಂದ 1.15 ಕೋಟಿ ಮೌಲ್ಯದ 385 ಮೊಬೈಲ್‌ಗಳ ವಶ

385 mobiles worth Rs 1.15 crore seized through CEIR software

ಬೆಂಗಳೂರು,ಏ.16-ಪೂರ್ವವಿಭಾಗದ ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸಿ ಸಿಇಐಆರ್‌ ತಂತ್ರಾಂಶದ ಮೂಲಕ ಹಲವು ಪ್ರಕರಣಗಳಲ್ಲಿ ಕಳುವಾಗಿದ್ದ 1.15 ಕೋಟಿ ಮೌಲ್ಯದ 385 ಮೊಬೈಲ್‌ಗಳನ್ನು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ.

ನಗರ ಪೂರ್ವವಿಭಾಗದ 14 ಪೊಲೀಸ್‌‍ ಠಾಣೆ ವ್ಯಾಪ್ತಿಗಳಲ್ಲಿ ಸಾರ್ವಜನಿಕರು ಕಳೆದುಕೊಂಡಿದ್ದ ಹಾಗೂ ಕಳುವಾಗಿದ್ದ ಮೊಬೈಲ್‌ಗಳನ್ನು ನಿರಂತರವಾಗಿ ಸಿಇಐಆರ್‌ ಪೋರ್ಟಲ್‌ ಸಹಾಯದಿಂದ ಪೊಲೀಸರು ಮೊಬೈಗಳನ್ನು ಪತ್ತೆ ಹಚ್ಚಿದ್ದಾರೆ. ಕಳೆದ ಮಾರ್ಚ್‌ ತಿಂಗಳಿನಲ್ಲಿ ವಿವಿಧ ಕಂಪನಿಯ 385 ಮೊಬೈಲ್‌ಗಳನ್ನು ವಶಪಡಿಸಿಕೊಂಡಿದ್ದು, ಒಟ್ಟು ಇವುಗಳ ಮೌಲ್ಯ 1.15 ಕೋಟಿ ರೂ.ಗಳೆಂದು ಅಂದಾಜಿಸಲಾಗಿದೆ.

ಬಾಣಸವಾಡಿ 87 ಮೊಬೈಲ್‌ಗಳು, ಜೆಬಿನಗರ 81, ಗೋವಿಂದಪುರ 35, ಕೆಜಿಹಳ್ಳಿ 30,ಹಲಸೂರು 30, ಡಿಜೆಹಳ್ಳಿ 29, ಹೆಣ್ಣೂರು 19, ಕಮರ್ಷಿಯಲ್‌ ಸ್ಟ್ರೀಟ್‌ 16, ಪುಲಕೇಶಿ ನಗರ 15, ಇಂದಿರಾನಗರ 12, ಆರ್‌ಎಂನಗರ 10, ಬೈಯಪ್ಪನಹಳ್ಳಿ 8, ಶಿವಾಜಿನಗರ 8 ಹಾಗೂ ಭಾರತಿನಗರ ಠಾಣೆ ಪೊಲೀಸರು 5 ಮೊಬೈಲ್‌ಗಳನ್ನು ವಶಕ್ಕೆ ಪಡೆದಿದ್ದಾರೆ.

ಸಾರ್ವಜನಿಕರು ಕಳೆದುಕೊಂಡ ಮೊಬೈಲ್‌ಗಳ ವಿವರವನ್ನು ಸಿಇಐಆರ್‌ ಪೋರ್ಟಲ್‌ನಲ್ಲಿ ದಾಖಲಿಸುವುದರಿಂದ ಅಥವಾ ಪೊಲೀಸ್‌‍ ಠಾಣೆಗಳಲ್ಲಿ ದೂರು ನೀಡುವುದರಿಂದ ಮೊಬೈಲ್‌ಗಳನ್ನು ಪತ್ತೆ ಮಾಡಲು ಅನುಕೂಲವಾಗುತ್ತದೆ.

ಈ ಕಾರ್ಯಾಚರಣೆಯನ್ನು ಪೂರ್ವವಿಭಾಗದ ಉಪ ಪೊಲೀಸ್‌‍ ಆಯುಕ್ತ ಡಾ. ವಿಕ್ರಮ್‌ ಅಮಟೆ, ಸೈಬರ್‌ ಕ್ರೈಂ ಪೊಲೀಸ್‌‍ ಠಾಣೆಯ ಸಹಾಯಕ ಪೊಲೀಸ್‌‍ ಆಯುಕ್ತರ ನೇತೃತ್ವದಲ್ಲಿ ಎಲ್ಲಾ ಅಧಿಕಾರಿ ಮತ್ತು ಸಿಬ್ಬಂದಿಗಳ ತಂಡ ಮೊಬೈಲ್‌ಗಳನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾಗಿದೆ.

RELATED ARTICLES

Latest News