ನಿತ್ಯ ನೀತಿ : ಸತ್ತ ಮೀನನ್ನು ನೀರು ದಡಕ್ಕೆ ತಳ್ಳುತ್ತದೆ, ಹಣವಿಲ್ಲದ ಮನುಷ್ಯನನ್ನು ಸಮಾಜ ಮತ್ತು ಕುಟುಂಬ ಮೂಲೆಗೆ ತಳ್ಳುತ್ತದೆ. ಈಜಿದರೆ ಮೀನಿಗೆ ಬೆಲೆ, ದುಡಿದರೆ ಮನುಷ್ಯನಿಗೆ ಬೆಲೆ.
ಪಂಚಾಂಗ : ಶುಕ್ರವಾರ, 15-05-2026
ಪರಾಭವ ನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರಗ್ರೀಷ್ಮ / ಮಾಸ: ವೈಶಾಖ / ಪಕ್ಷ: ಕೃಷ್ಣ / ತಿಥಿ: ತ್ರಯೋದಶಿ / ನಕ್ಷತ್ರ: ಅಶ್ವಿನಿ / ಯೋಗ: ಆಯುಷ್ಮಾನ / ಕರಣ: ವಿಷ್ಟಿ
ಸೂರ್ಯೋದಯ – ಬೆ.5.55
ಸೂರ್ಯಾಸ್ತ – 06.38
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00
ರಾಶಿಭವಿಷ್ಯ :
ಮೇಷ: ಅಧ್ಯಾಪಕ ವೃತ್ತಿಯವರಿಗೆ ಶುಭದಾಯಕ, ಜವಾಬ್ದಾರಿಗಳನ್ನು ಜಾಣೆಯಿಂದ ನಿಭಾಯಿಸಿ.
ವೃಷಭ: ಆರ್ಥಿಕ ನಷ್ಟ ಉಂಟಾಗಬಹುದು, ಅತಿಯಾದ ಆತವಿಶ್ವಾಸ ಒಳ್ಳೆಯದಲ್ಲ.
ಮಿಥುನ: ಸಹಾಯ ಮಾಡಿದ ಸ್ನೇಹಿತನನ್ನು ಅವ ಮಾನಿಸಬೇಡಿ, ಅನಿವಾರ್ಯ ಕಾರಣಗಳಿಂದ ಖರ್ಚು.
ಕಟಕ: ಕಟ್ಟಡ ನಿರ್ಮಾಣದಲ್ಲಿ ಅಡೆತಡೆ, ಸಹವರ್ತಿಗಳಿಂದ ಉತ್ತಮ ಸಲಹೆ.
ಸಿಂಹ: ಒಡಹುಟ್ಟಿದವರಲ್ಲಿ ಭಿನ್ನಾಭಿಪ್ರಾಯ, ಹಣಕಾಸಿನ ಸ್ಥಿತಿ ಉತ್ತಮ.
ಕನ್ಯಾ: ಅಮೂಲ್ಯ ವಸ್ತು ವನ್ನು ಕಳೆದುಕೊಳ್ಳುವ ಸಾಧ್ಯತೆ ಹೆಚ್ಚಾಗಿದೆ.
ತುಲಾ: ಶ್ರಮಪಟ್ಟರೂ ಕಾರ್ಯ ಲಿಸುವುದಿಲ್ಲ, ಸ್ಪರ್ಧಾತಕ ಪರೀಕ್ಷೆಗಳಿಗೆ ಹೆಚ್ಚಿನ ಶ್ರಮವಹಿಸಬೇಕು.
ವೃಶ್ಚಿಕ: ದಿನಸಿ ವ್ಯಾಪಾರಿಗಳಿಗೆ ಲಾಭ,ತೊಂದರೆಗಳೇನಿದ್ದರೂ ತಾತ್ಕಾಲಿಕ.
ಧನುಸ್ಸು: ಸಮಸ್ಯೆಗಳನ್ನು ಜಾಣೆಯಿಂದ ಬಗೆಹರಿಸಿ, ಸಮಾಧಾನದಿಂದ ಕಾರ್ಯ ನಿರ್ವಹಿಸಿ.
ಮಕರ: ಕನಸು ನನಸಾಗುವ ಕಾಲ, ಸಂಬಂಧಿಕರಲ್ಲಿ ಯಾವುದೇ ಹಣಕಾಸಿನ ವ್ಯವಹಾರ ಬೇಡ.
ಕುಂಭ: ಸ್ನೇಹಿತರ ಕಷ್ಟಕಾಲಕ್ಕೆ ಸ್ಪಂದಿಸುವ ಸಾಧ್ಯತೆ, ಅತಿಥಿಗಳ ಆಗಮನದಿಂದ ಸಂತೋಷ.
ಮೀನ: ಆಗದ ಕೆಲಸಕ್ಕೆ ವ್ಯರ್ಥ ಪ್ರಯತ್ನ ಬೇಡ, ಮಾತಿನ ಮೇಲೆ ಹಿಡಿತವಿರಲಿ.
