Homeರಾಜ್ಯಮೆಟ್ರೋದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಯಾಣ

ಮೆಟ್ರೋದಲ್ಲಿ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ.ವಿಜಯೇಂದ್ರ ಪ್ರಯಾಣ

BJP State President B.Y. Vijayendra Travels in Metro

ಬೆಂಗಳೂರು,ಮೇ16- ದೇಶದ ಜನತೆ ಇಂಧನ ಮಿತ ಬಳಕೆ ಮಾಡಬೇಕು ಎಂದ ಪ್ರಧಾನಿ ನರೇಂದ್ರಮೋದಿ ಅವರ ಕರೆಗೆ ಸ್ಪಂಧಿಸಿರುವ ಬಿಜೆಪಿ ರಾಜ್ಯಧ್ಯಕ್ಷ ಬಿ.ವೈ ವಿಜಯೇಂದ್ರ, ತಮ್ಮ ಅಧಿಕೃತ ಕಾರು ಮತ್ತು ಬೆಂಗಾವಲು ವಾಹನಗಳನ್ನು ಕಡಿಮೆ ಮಾಡಿ, ಸಾರ್ವಜನಿಕ ಸಾರಿಗೆ ವ್ಯವಸ್ಥೆಯಾದ ಮೆಟ್ರೋ ರೈಲನ್ನು ಬಳಸುವ ನಿರ್ಧಾರ ಮಾಡಿದ್ದಾರೆ.

ಪಕ್ಷದ ಕಾರ್ಯಕ್ರಮದಲ್ಲಿ ಭಾಗಿಯಾಗುವ ಸಂಬಂಧ ಮೆಜೆಸ್ಟಿಕ್‌ ನಿಂದ ಕೆಂಗೇರಿವರೆಗೂ ಮೆಟ್ರೋದಲ್ಲಿ ಪ್ರಯಾಣ ಮಾಡಿ, ಸಾಮಾನ್ಯ ಜನರ ನಡುವೆ ನಿಂತು, ಕುಳಿತು ಪ್ರಯಾಣಿಸಿದ್ದಾರೆ. ಇದೇ ರೀತಿಯಾಗಿ ಕುಂಬಳಗೂಡಿನ ಕಾರ್ಯಕ್ರಮಕ್ಕೂ ಮೆಟ್ರೋ ಮೂಲಕವೇ ತೆರಳಿದರು.

ಇನ್ನು ಮುಂದೆ ಪಕ್ಷದ ಸಭೆ, ಕಾರ್ಯಕ್ರಮಗಳಿಗೆ ಹೋಗುವಾಗ ಸಾರ್ವಜನಕ ವಾಹನಗಳಲ್ಲಿ ಪ್ರಯಾಣ ಮಾಡುವ ಬಗ್ಗೆಯೂ ಚಿಂತನೆ ನಡೆಸಿದ್ದಾರೆ. ಸಾರ್ವಜನಿಕ ಸಾರಿಗೆಯನ್ನು ಬಳಸುವ ಮೂಲಕ ಇಂಧನ ಉಳಿಸುವುದಷ್ಟೇ ಅಲ್ಲ, ಟ್ರಾಫಿಕ್‌ ದಟ್ಟಣೆ ಕಡಿಮೆ ಮಾಡುವಲ್ಲಿ ಸಹ ಸಹಾಯವಾಗುತ್ತದೆ ಎಂಬ ಸಂದೇಶವನ್ನು ಅವರು ತಮ ನಡೆ ಮೂಲಕ ನೀಡಲು ಯತ್ನಿಸುತ್ತಿದ್ದಾರೆ.

ಈ ಸಂದರ್ಭದಲ್ಲಿ ಸುದ್ದಿಗಾರರ ಜೊತೆ ಮಾತನಾಡಿದ ಅವರು, ನಮ ಹೆಮೆಯ ಪ್ರಧಾನಿ ಪೆಟ್ರೋಲ್‌, ಡೀಸಲ್‌ ಮಿತವ್ಯಯಕ್ಕೆ ಸಲಹೆ ಕೊಟ್ಟಿದ್ದಾರೆ. ಅವರು ಸ್ವತಃ ತಮ ಬೆಂಗಾವಲು ವಾಹನಗಳ ಸಂಖ್ಯೆಯನ್ನು ಕಡಿಮೆ ಮಾಡಿಕೊಂಡಿದ್ದಾರೆ. ಹಾಗಾಗಿ ನಾನು ಕೂಡ ಅವರ ಮಾತಿಗೆ ಸ್ಪಂದಿಸಿ ಮೆಟ್ರೋದಲ್ಲಿ ಪ್ರಯಾಣ ಮಾಡುತ್ತಿದ್ದೇನೆ. ಕುಂಬಳಗೋಡಿನಲ್ಲಿ ನಡೆಯುತ್ತಿರುವ ಸಭೆಯಲ್ಲಿ ಭಾಗವಹಿಸಿ, ಬಳಿಕ ರವಿಶಂಕರ್‌ ಗುರುಜಿಗಳ ಆಶೀರ್ವಾದ ಪಡೆಯುತ್ತೇನೆ ಎಂದರು.

ಪೆಟ್ರೋಲ್‌, ಡೀಸಲ್‌ ಬೆಲೆ ಏರಿಕೆ ಕುರಿತು ವಿರೋಧ ಪಕ್ಷಗಳ ಟೀಕೆಗಳ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಲವರು ಇಂಧನ ಬೆಲೆ ಏರಿಕೆ ಕಾರಣಕ್ಕೆ ಪ್ರಧಾನಿಯೇ ರಾಜೀನಾಮೆ ಕೊಡಬೇಕು ಎಂದು ಆಗ್ರಹಿಸುತ್ತಿರುವ ವಿಚಾರವನ್ನು ತೀವ್ರವಾಗಿ ವಿರೋಧಿಸಿದರಿ/
ಪೆಟ್ರೋಲ್‌, ಡೀಸಲ್‌ ಬೆಲೆ ಏರಿಕೆಗಾಗಿ ಪ್ರಧಾನಿ ರಾಜೀನಾಮೆ ಕೇಳುವ ಹಾಗಿದ್ದರೆ, ಕರ್ನಾಟಕದಲ್ಲಿ ಸಿದ್ದರಾಮಯ್ಯ ಮತ್ತು ಡಿ.ಕೆ. ಶಿವಕುಮಾರ್‌ ಅವರು ಎರಡು ವರ್ಷದ ಹಿಂದೇ ರಾಜೀನಾಮೆ ಕೊಡಬೇಕಿತ್ತು ಎಂದು ತಿರುಗೇಟು ನೀಡಿದರು.

ಚಟಕ್ಕೆ ಮಾತನಾಡುವುದು ಸುಲಭ. ಜಗತ್ತಿನ ಪರಿಸ್ಥಿತಿಗೆ ಅನುಗುಣವಾಗಿ ಬೆಲೆ ನಿಗದಿಯಾಗುತ್ತದೆ, ಕೆಲವೊಮೆ ಬೆಲೆ ಏರಿಕೆಯಾಗುತ್ತದೆ. ಇದು ಕೇವಲ ಭಾರತದಷ್ಟೇ ಅಲ್ಲ, ಜಾಗತಿಕ ಅಂಶಗಳಿಂದ ಪ್ರಭಾವಿತವಾಗಿರುವ ವಿಷಯ ಎಂದು ತೈಲ ಬೆಲೆ ಏರಿಕೆಯನ್ನು ಪರೋಕ್ಷವಾಗಿ ಸಮರ್ಥನೆ ಮಾಡಿಕೊಂಡರು.

RELATED ARTICLES

Latest News