Homeರಾಜಕೀಯಇಂಧನ ಬೆಲೆ ಏರಿಕೆ ಟೀಕಿಸುವ ಮುನ್ನ ನೀವು ಏರಿಸಿದ ದರ ಇಳಿಸಿ : ಆರ್‌.ಅಶೋಕ್‌

ಇಂಧನ ಬೆಲೆ ಏರಿಕೆ ಟೀಕಿಸುವ ಮುನ್ನ ನೀವು ಏರಿಸಿದ ದರ ಇಳಿಸಿ : ಆರ್‌.ಅಶೋಕ್‌

Before criticizing the fuel price hike, reduce the price you have increased

ಬೆಂಗಳೂರು,ಮೇ16- ಇಂಧನ ಬೆಲೆ ಏರಿಕೆ ಮಾಡಿರುವ ಕೇಂದ್ರ ಸರ್ಕಾರವನ್ನು ಟೀಕಿಸುವ ಮೊದಲು ನೀವು ಏರಿಸಿದ 3 ರೂ. ಪೆಟ್ರೋಲ್‌ ಮತ್ತು 5.5 ರೂ. ಡೀಸೆಲ್‌ ದರವನ್ನು ಕಡಿಮೆ ಮಾಡಿ. ಹಾಲಿನ ದರ ಇಳಿಸಿ ನಂತರರ ಮಾತಾಡಿ ಎಂದು ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ರಾಜ್ಯ ಸರ್ಕಾರಕ್ಕೆ ಬಹಿರಂಗ ಸವಾಲು ಹಾಕಿದ್ದಾರೆ.

ಈ ಕುರಿತು ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ಕೇಂದ್ರವನ್ನು ಟೀಕಿಸಲು ನಾಲಿಗೆ ಹರಿಬಿಡುವ ಕಾಂಗ್ರೆಸ್‌‍ ನಾಯಕರಿಗೆ ನನ್ನ ನೇರ ಪ್ರಶ್ನೆ, ಏನೆಂದರೆ, ಕಳೆದ 3 ವರ್ಷಗಳಲ್ಲಿ ಹಾಲಿನಿಂದ ನೀರಿನವರೆಗೆ, ಪೆಟ್ರೋಲ್‌ನಿಂದ ಮೆಟ್ರೋ ದರದವರೆಗೆ, ಎಲ್ಲವನ್ನೂ ದುಬಾರಿ ಮಾಡಿ ಜನ ಸಾಮಾನ್ಯರ ಜೇಬಿಗೆ ಕನ್ನ ಹಾಕಿದ 49 ತಿಂಗಳುಗಳ ಕಾಲ ಜಾಗತಿಕ ಬಿಕ್ಕಟ್ಟಿನ ನಡುವೆಯೂ ತೈಲ ಬೆಲೆ ಏರಿಸದ, ಮೋದಿ ಸರ್ಕಾರ ವಿರುದ್ಧ ಪ್ರತಿಭಟಿಸುವ ನೈತಿಕ ಹಕ್ಕು ಕಾಂಗ್ರೆಸ್‌‍ ಸರ್ಕಾರಕ್ಕೆ ಇಲ್ಲ ಎಂದು ತಿರುಗೇಟು ನೀಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಅವರ ನೇತೃತ್ವದ ಕೇಂದ್ರ ಸರ್ಕಾರ ಬರೋಬ್ಬರಿ 49 ತಿಂಗಳು, ಅಂದರೆ ಸತತ 4 ವರ್ಷ, ಯುದ್ಧಗಳು ಮತ್ತು ಜಾಗತಿಕ ತೈಲ ಬಿಕ್ಕಟ್ಟಿನ ಒತ್ತಡದ ನಡುವೆಯೂ ಸಾಮಾನ್ಯ ಭಾರತೀಯನ ಜೇಬಿಗೆ ಒಂದೇ ಒಂದು ಪೈಸೆ ಹೊರೆ ಹಾಕಲಿಲ್ಲ. ಇದು ಸ್ವತಂತ್ರ ಭಾರತದ ಇತಿಹಾಸದಲ್ಲೇ ದಾಖಲೆ ಎಂದು ಹೇಳಿದ್ದಾರೆ.

ಮಾಯನಾರ್‌ನಲ್ಲಿ ಶೇ.89.7ರಷ್ಟು ಪಾಕಿಸ್ತಾನದಲ್ಲಿ ಶೇ.54.9ರಷ್ಟು, ಅಮೇರಿಕದಲ್ಲಿ ಶೇ.44.5ರಷ್ಟು ತೈಲ ಬೆಲೆ ಏರಿಕೆ ಕಂಡಿರುವಾಗ, ಭಾರತದಲ್ಲಿ ಏರಿಕೆ ಆಗಿರುವುದು ಕೇವಲ ಶೇ.3.2 ಮಾತ್ರ. ಇದು ಮೋದಿಯವರ ದಕ್ಷ ಆಡಳಿತದ ಶಕ್ತಿ.ಆದರೆ ಕಳೆದ 3 ವರ್ಷಗಳಲ್ಲಿ ಸಿಎಂ ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್‌‍ ಸರ್ಕಾರ ಏನು ಮಾಡಿದೆ? ಎಂದು ಪ್ರಶ್ನೆಸಿದ್ದಾರೆ.

ಪೆಟ್ರೋಲ್‌ 3 ಏರಿಕೆ, ಡೀಸೆಲ್‌ಗೆ 5.5 ಏರಿಕೆ ( ಜೂನ್‌ 2024 ರಲ್ಲಿ 3.50 + ಏಪ್ರಿಲ್‌ 2025 ರಲ್ಲಿ 2), ಹಾಲಿಗೆ 9 ಏರಿಕೆ. ವಿದ್ಯುತ್‌ಗೆ 56 ಪೈಸೆ ಯೂನಿಟ್‌ ಏರಿಕೆ.ಬಸ್‌‍ ದರ ಶೇ.15ರಷ್ಟು ಏರಿಕೆ, ನೀರು, ಆಸ್ತಿ ತೆರಿಗೆ, ಮೆಟ್ರೋ ದರ ಎಲ್ಲವೂ ಏರಿಕೆಯಾಗಿದೆ ಎಂದು ಕಾಂಗ್ರೆಸ್‌‍ ನಾಯಕರ ಆರೋಪಕ್ಕೆ ವಾಗ್ದಳಿ ನಡೆಸಿದ್ದಾರೆ.

ಒಂದು ಕೈಯಲ್ಲಿ 2000 ರೂ. ಗ್ಯಾರಂಟಿ ತೋರಿಸಿ, ಇನ್ನೊಂದು ಕೈಯಲ್ಲಿ ತಿಂಗಳಿಗೆ 4000 ರೂ. ಮೀರಿ ಕಿತ್ತುಕೊಳ್ಳುತ್ತಿದೆ! ಇದನ್ನು ದರೋಡೆ ಅನ್ನದೆ ಬೇರೆ ಏನನ್ನಬೇಕು? ಎಂದು ಅಶೋಕ್‌ ಪ್ರಶ್ನೆ ಮಾಡಿದ್ದಾರೆ.

RELATED ARTICLES
spot_img

Latest News