Homeಬೆಂಗಳೂರುರಾಜಾನುಕುಂಟೆ ರೈಲ್ವೆ ಯಾರ್ಡ್‌ನಲ್ಲಿ ಅಗ್ನಿ ಅವಘಡ : ಎರಡು ಬೋಗಿಗಳಿಗೆ ಹಾನಿ

ರಾಜಾನುಕುಂಟೆ ರೈಲ್ವೆ ಯಾರ್ಡ್‌ನಲ್ಲಿ ಅಗ್ನಿ ಅವಘಡ : ಎರಡು ಬೋಗಿಗಳಿಗೆ ಹಾನಿ

ಬೆಂಗಳೂರು,ಅ.14-ನಗರ ಹೊರವಲಯದ ರಾಜಾನುಕುಂಟೆ ರೈಲ್ವೆ ಯಾರ್ಡ್‌ನಲ್ಲಿ ಇಂದು ಬೆಳಗ್ಗೆ ಬೆಂಕಿ ಅವಘಡ ಸಂಭವಿಸಿ ಎರಡು ಬೋಗಿಗಳು ತೀವ್ರ ಹಾನಿಗೀಡಾಗಿವೆ.ಈ ಯಾರ್ಡ್‌ನಲ್ಲಿ ನಿಲ್ಲಿಸಿದ್ದ ರೈಲ್ವೆ ಬೋಗಿಗಳಲ್ಲಿ ಬೆಳಗ್ಗೆ 10.30 ರ ಸುಮಾರಿನಲ್ಲಿ ಬೆಂಕಿ ಕಾಣಿಸಿಕೊಂಡಿದ್ದು, ಅಗ್ನಿ ಶಾಮಕ ಸಿಬ್ಬಂದಿ ಮೂರು ವಾಹನಗಳೊಂದಿಗೆ ಕೂಡಲೇ ಸ್ಥಳಕ್ಕೆ ದಾವಿಸಿ ಬೆಂಕಿಯನ್ನು ನಂದಿಸಿ ಭಾರೀ ಅನಾಹುತ ತಪ್ಪಿಸಿದ್ದಾರೆ.

ಹಲವು ದಿನಗಳಿಂದ ಮೂರು ಬೋಗಿಗಳನ್ನು ಯಾರ್ಡ್‌ನಲ್ಲಿ ನಿಲ್ಲಿಸಲಾಗಿದೆ. ಈ ಬೋಗಿಗಳನ್ನು ಮಾಕ್‌ ಡ್ರಿಲ್‌ಗಾಗಿ ಬಳಸಲಾಗುತ್ತಿದೆ. ಅದೃಷ್ಟವಶಾತ್‌ ಈ ಬೋಗಿಗಳಲ್ಲಿ ಯಾರೂ ಇರಲಿಲ್ಲ. ರೈಲ್ವೆ ಹಳಿಯ ಮೇಲೆ ಈ ಬೋಗಿಗಳನ್ನು ನಿಲ್ಲಿಸಿರಲಿಲ್ಲ. ಬೆಂಕಿಯ ತೀವ್ರತೆಯಿಂದಾಗಿ ಎರಡು ಕೋಚ್‌ಗಳಿಗೆ ಹಾನಿಯಾಗಿವೆ. ಈ ಬೋಗಿಗಳಲ್ಲಿ ಬೆಂಕಿ ಹೇಗೆ ಕಾಣಿಸಿಕೊಂಡಿತು ಎಂಬುವುದು ತಿಳಿದು ಬಂದಿಲ್ಲ. ಬೆಂಕಿ ಅವಘಡಕ್ಕೆ ನಿಖರ ಕಾರಣವೇನು ಎಂಬುವುದನ್ನು ರೈಲ್ವೆ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ.

RELATED ARTICLES
spot_img

Latest News