ಬೆಂಗಳೂರು,ಅ.14-ಕಾಲುವೆಗೆ ಹಾರಿ ಇಬ್ಬರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ ಮಾಡಿಕೊಂಡಿರುವ ಘೋರ ಘಟನೆ ಬಳ್ಳಾರಿಯಲ್ಲಿ ನಡೆದಿದೆ.ಬಳ್ಳಾರಿ ನಗರದ ನಿವಾಸಿ ಲತಿಫಾ ಸಿಮ್ರಾನ್ (29) ಅವರ ಮೃತದೇಹವನ್ನು ನೀರಿನಿಂದ ಹೊರತೆಗೆಯಲಾಗಿದೆ.
ಪುಟ್ಟ ಮಕ್ಕಳಾದ ಮೊಹಮದ್ ಅಯಾನ್ (3) ಮತ್ತು ಆಯಿಷ ಫಾತಿಮಾ (2)ಗಾಗಿ ಹುಡುಕಾಟ ನಡೆಯುತ್ತಿದೆ.ಲತಿಫಾ ಸಿಮ್ರಾನ್ ಕೌಟುಂಬಿಕ ಕಲಹದಿಂದ ನೊಂದು ಇಬ್ಬರು ಕಂದಮಗಳನ್ನು ಎತ್ತಿಕೊಂಡು ನಿನ್ನೆ ಮನೆಯಿಂದ ಹೊರಗೆ ಹೋಗಿ ಬಳ್ಳಾರಿಯ ಮಿಲ್ಲರ್ಪೇಟೆ ಕಾಲುವೆಗೆ ಮಕ್ಕಳೊಂದಿಗೆ ಹಾರಿ ಆತಹತ್ಯೆ ಮಾಡಿಕೊಂಡಿದ್ದಾರೆ.
ರಾತ್ರಿಯಾದರೂ ಮನೆಗೆ ಪತ್ನಿ, ಮಕ್ಕಳು ಬಾರದಿದ್ದಾಗ ಎಲ್ಲಾಕಡೆ ಹುಡುಕಾಡಿದಾಗ ಕಾಲುವೆಗೆ ಹಾರಿ ಆತಹತ್ಯೆ ಮಾಡಿಕೊಂಡಿರುವುದು ಗೊತ್ತಾಗಿದೆ. ಇಂದು ಬೆಳಗ್ಗೆ ಕಾಲುವೆಯಲ್ಲಿ ಮಹಿಳೆಯ ಮೃತದೇಹ ತೇಲುತ್ತಿರು ವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ. ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಮಹಿಳೆಯ ಶವವನ್ನು ಹೊರ ತೆಗೆದಿದ್ದು, ಇಬ್ಬರು ಮಕ್ಕಳಿಗಾಗಿ ಶೋಧ ಮುಂದುವರೆಸಿದ್ದಾರೆ.
