Wednesday, April 22, 2026
Homeಬೆಂಗಳೂರುಜ್ಯೋತಿಷಿ ಮಾತಿಗೆ ಹೆದರಿ ಖಾಸಗಿ ಕಂಪೆನಿ ಮಹಿಳಾ ಉದ್ಯೋಗಿ ಆತ್ಮಹತ್ಯೆ

ಜ್ಯೋತಿಷಿ ಮಾತಿಗೆ ಹೆದರಿ ಖಾಸಗಿ ಕಂಪೆನಿ ಮಹಿಳಾ ಉದ್ಯೋಗಿ ಆತ್ಮಹತ್ಯೆ

Private company employee commits suicide after being scared of astrologer's advice

ಬೆಂಗಳೂರು,ಫೆ.28- ಪ್ರೀತಿಸಿದ ಯುವಕನೊಂದಿಗೆ ಮದುವೆಯಾಗಬೇಕಿದ್ದ ಖಾಸಗಿ ಕಂಪನಿ ಉದ್ಯೋಗಿ ಆತಹತ್ಯೆಗೆ ಶರಣಾಗಿರುವ ಘಟನೆ ಬಾಗಲಗುಂಟೆ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.ಎಂಇಐ ಲೇಔಟ್‌ ನಿವಾಸಿ ವಿದ್ಯಾಜ್ಯೋತಿ (29) ಆತಹತ್ಯೆಗೆ ಶರಣಾದ ಉದ್ಯೋಗಿ.

ಈಕೆ ಎಂಬಿಎ ಪದವೀಧರೆ.ಖಾಸಗಿ ಕಂಪನಿಯೊಂದರ ಉದ್ಯೋಗಿಯಾಗಿದ್ದ ವಿದ್ಯಾಜ್ಯೋತಿ ವರ್ಕ್‌ಫ್ರಮ್‌ ಹೋಂ ಮಾಡುತ್ತಿದ್ದರು.ಯುವಕನನ್ನು ವಿದ್ಯಾಜ್ಯೋತಿ ಪ್ರೀತಿಸುತ್ತಿದ್ದರು. ಎರಡು ಕುಟುಂಬದವರ ಒಪ್ಪಿಗೆ ಪಡೆದು ಇವರಿಬ್ಬರು ಮದುವೆಯಾಗಲು ಸಿದ್ಧತೆ ನಡೆಸುತ್ತಿದ್ದರು.

ಈ ನಡುವೆ ಜ್ಯೋತಿಷಿಯೊಬ್ಬರು ವಿದ್ಯಾಜ್ಯೋತಿಗೆ ನೀನು ಮದುವೆಯಾದ ಎರಡೇ ವರ್ಷ ಸಂಸಾರ ಚೆನ್ನಾಗಿರುತ್ತದೆ. ನಂತರ ನಿನಗೆ ತೊಂದರೆಯಾಗಲಿದೆ ಅದಕ್ಕಾಗಿ ಪೂಜೆ ಮಾಡಿಸಿದರೆ ನಿನಗೆ ಒಳ್ಳೆಯದಾಗುತ್ತದೆ ಎಂದು ಹೇಳಿದ್ದರಂತೆ.

ಜ್ಯೋತಿಷಿ ಮಾತಿನಂತೆ ಒಂಬತ್ತು ದಿನಗಳ ಕಾಲ ಪೂಜೆ ಮಾಡಿ ಒಂಬತ್ತನೇ ದಿನ ಮಾರಮ ದೇವಿಗೆ ತಾಳಿ ಸಮರ್ಪಿಸುವಂತೆ ತಿಳಿಸಿದ್ದರಿಂದ ಆಕೆಯ ಕುಟುಂಬಸ್ಥರು ಪೂಜೆಗೆ ಸಿದ್ಧತೆ ಮಾಡಿಕೊಳ್ಳುತ್ತಿದ್ದರು.

ನಿನ್ನೆ ಮಧ್ಯಾಹ್ನ ತನ್ನ ರೂಮಿಗೆ ಹೋದ ವಿದ್ಯಾಜ್ಯೋತಿ ಸಂಜೆಯಾದರೂ ಹೊರಗೆ ಬಂದಿಲ್ಲ. ಸಂಜೆ ತಾಯಿ ಕರೆದರೂ ಆಕೆ ರೂಮಿನಿಂದ ಹೊರಗೆ ಬಂದಿಲ್ಲ. ವರ್ಕ್‌ಫ್ರಮ್‌ ಹೋಂ ಕೆಲಸ ಮಾಡುತ್ತಿರಬಹುದೆಂದು ತಾಯಿ ಸುಮನಾಗಿದ್ದಾರೆ.

ರಾತ್ರಿ 8 ಗಂಟೆ ಸುಮಾರಿಗೆ ದೇವಿಗೆ ತಾಳಿ ಸಮರ್ಪಿಸಲು ದೇವಸ್ಥಾನಕ್ಕೆ ಹೋಗಬೇಕಿದ್ದ ಹಿನ್ನಲೆಯಲ್ಲಿ ತಾಯಿ ಮತ್ತೆ ಕರೆದಿದ್ದಾರೆ. ಆದರೆ ಆಕೆ ರೂಮಿನ ಬಾಗಿಲು ತೆರೆದಿಲ್ಲ. ರೂಮಿನ ಬಳಿ ಹೋಗಿ ಬಾಗಿಲು ತಟ್ಟಿದರೂ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಾರದಿದ್ದಾಗ ಗಾಬರಿಗೊಂಡು ಕಿಟಕಿ ತಳ್ಳಿ ನೋಡಿದಾಗ ಮಗಳು ಫ್ಯಾನಿಗೆ ನೇಣು ಬಿಗಿದುಕೊಂಡು ಆತಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

ಜ್ಯೋತಿಷಿ ಹೇಳಿದ ಮಾತಿನಿಂದ ಹೆದರಿ ವಿದ್ಯಾಜ್ಯೋತಿ ಆತಹತ್ಯೆ ಮಾಡಿಕೊಂಡಿದ್ದಾಳೆಂದು ಕುಟುಂಬಸ್ಥರು ಆರೋಪಿಸಿದ್ದಾರೆ.ಸುದ್ದಿ ತಿಳಿದು ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಮೃತದೇಹವನ್ನು ವಿಕ್ಟೋರಿಯಾ ಆಸ್ಪತ್ರೆಗೆ ರವಾನಿಸಿದ್ದಾರೆ.ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News