Thursday, April 30, 2026
Homeಬೆಂಗಳೂರುವೇಶ್ಯಾವಾಟಿಕೆಗೆ ಪ್ರಚೋದನೆ : 6 ಮಂದಿ ವಿದೇಶಿ ಮಹಿಳೆಯರು ವಶಕ್ಕೆ

ವೇಶ್ಯಾವಾಟಿಕೆಗೆ ಪ್ರಚೋದನೆ : 6 ಮಂದಿ ವಿದೇಶಿ ಮಹಿಳೆಯರು ವಶಕ್ಕೆ

Prostitution: 6 foreign women detained

ಬೆಂಗಳೂರು, ಏ.28- ಪುಟ್‌ಪಾತ್‌ ಬಳಿ ನಿಂತುಕೊಂಡು ಕಾನೂನು ಬಾಹಿರ ಚಟುವಟಿಕೆಗಳಲ್ಲಿ ತೊಡಗಿದ್ದ 6 ಮಂದಿ ವಿದೇಶಿ ಮಹಿಳೆಯರನ್ನು ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿ ವಶಕ್ಕೆ ಪಡೆದಿದ್ದಾರೆ.

ಕೋರಮಂಗಲ ಪೊಲೀಸ್‌‍ ಠಾಣಾ ವ್ಯಾಪ್ತಿಯ ಮಡಿವಾಳ ಚೆಕ್‌ಪೋಸ್ಟ್‌ ಹತ್ತಿರದ ಬಸ್‌‍ ನಿಲ್ದಾಣದ ಪುಟ್‌ಪಾತ್‌ ಬಳಿ ವಿದೇಶಿ ಮಹಿಳೆಯರು ನಿಂತುಕೊಂಡು ರಸ್ತೆಯಲ್ಲಿ ಓಡಾಡುವ ಪುರುಷರನ್ನು ವೇಶ್ಯವಾಟಿಕೆಗೆ ಪ್ರಚೋದಿಸುತ್ತಿರುವ ಬಗ್ಗೆ ಸಿಸಿಬಿ ಪೊಲೀಸರಿಗೆ ಮಾಹಿತಿ ಲಭಿಸಿದೆ.

ಈ ಖಚಿತ ಮಾಹಿತಿ ಆಧಾರದ ಮೇಲೆ ಸಿಸಿಬಿ ಮಹಿಳಾ ಸಂರಕ್ಷಣಾ ದಳದ ಅಧಿಕಾರಿ ಮತ್ತು ಸಿಬ್ಬಂದಿ ಸ್ಥಳಕ್ಕಾಗಮಿಸಿ ಪರಿಶೀಲಿಸಿದಾಗ, ವಿದೇಶಿ ಮಹಿಳೆಯರು ಕಾನೂನು ಬಾಹಿರ ಚಟುವಟಕೆಯಲ್ಲಿ ತೊಡಗಿರುವುದು ಕಂಡು ಬಂದಿದೆ.

ಕೂಡಲೇ ಕಾರ್ಯ ಪ್ರವೃತ್ತರಾದ ಸಿಸಿಬಿ ಅಧಿಕಾರಿ ಮತ್ತು ಕೋರಮಂಗಲ ಠಾಣೆ ಪೊಲೀಸರು ಕಾರ್ಯಾಚರಣೆ ನಡೆಸಿ, 6 ಮಂದಿ ವಿದೇಶಿ ಮಹಿಳೆಯರನ್ನು ವಶಕ್ಕೆ ಪಡೆದು ಅವರುಗಳ ಪಾಸ್‌‍ಪೋರ್ಟ್‌ ಮತ್ತು ವೀಸಾದ ಬಗ್ಗೆ ವಿಚಾರಣೆ ಮಾಡಿದಾಗ ಸರಿಯಾದ ಮಾಹಿತಿ ನೀಡಿಲ್ಲ.

ಇವರನ್ನು ವಶಕ್ಕೆ ಪಡೆದು ವಿಚಾರಣೆಗೊಳಪಡಿಸಿದಾಗ ಇವರು ಪ್ರವಾಸ, ಶಿಕ್ಷಣ ವೀಸಾದಡಿ ಬಂದಿದ್ದರು ಎಂಬುವುದು ತಿಳಿದು ಬಂದಿದೆ. ಇವರುಗಳ ವೀಸಾ ಅವಧಿ ಮುಗಿದಿದೆಯೇ ಎಂಬುವುದನ್ನು ಪೊಲೀಸರು ಪರಿಶೀಲಿಸುತ್ತಿದ್ದಾರೆ.

ಈ ಹಿನ್ನೆಲೆಯಲ್ಲಿ 6 ಮಂದಿ ವಿದೇಶಿ ಮಹಿಳೆಯರನ್ನು ವಶಕ್ಕೆ ಪಡೆದು ಕೋರಮಂಗಲ ಪೊಲೀಸ್‌‍ ಠಾಣೆಗೆ ವರದಿಯೊಂದಿಗೆ ಹಾಜರು ಪಡಿಸಲಾಗಿದ್ದು ತನಿಖೆ ಮುಂದುವರೆದಿದೆೆ.

RELATED ARTICLES

Latest News