Homeಬೆಂಗಳೂರುಸ್ಯಾಂಕಿ ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

ಸ್ಯಾಂಕಿ ಕೆರೆಗೆ ಹಾರಿ ವಿದ್ಯಾರ್ಥಿನಿ ಆತ್ಮಹತ್ಯೆ

Student commits suicide by jumping into Sankey Lake

ಬೆಂಗಳೂರು,ಜು.7- ಜೀವನದಲ್ಲಿ ಜಿಗುಪ್ಸೆಗೊಂಡು ವಿದ್ಯಾರ್ಥಿನಿ ಸ್ಯಾಂಕಿ ಕೆರೆಗೆ ಹಾರಿ ಆತಹತ್ಯೆ ಮಾಡಿಕೊಂಡಿರುವ ಘಟನೆ ಸದಾಶಿವನಗರ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿಕ್ಕಬಾಣವರ ಮೂಲದ ತೇಜು (20) ಆತಹತ್ಯೆ ಮಾಡಿಕೊಂಡ ವಿದ್ಯಾರ್ಥಿನಿ. ಮೇಲ್ನೋಟಕ್ಕೆ, ಪ್ರೆತಿ ವಿಚಾರಕ್ಕೆ ತೇಜು ಆತಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಖಾಸಗಿ ಕಾಲೇಜೊಂದರಲ್ಲಿ ತೇಜು ಪದವಿ ವ್ಯಾಸಂಗ ಮಾಡುತ್ತಿದ್ದಳು. ಈಕೆಯ ತಾಯಿ ಮೆಟ್ರೋದಲ್ಲಿ ಕೆಲಸ ಮಾಡುತ್ತಿದ್ದಾರೆ.ನಿನ್ನೆ ಸಂಜೆ ಸ್ಯಾಂಕಿ ಕೆರೆ ಬಳಿ ಬಂದಿದ್ದ ತೇಜು ವಾಪಸ್‌‍ ಹೊರಗೆ ಹೋಗಿಲ್ಲ. ಯಾರಿಗೂ ಅನುಮಾನ ಬಾರದಂತೆ ಅಲ್ಲೇ ಎಲ್ಲೋ ಮರೆಯಲ್ಲಿ ಕುಳಿತು ರಾತ್ರಿ ಕೆರೆಗೆ ಹಾರಿ ಆತಹತ್ಯೆ ಮಾಡಿಕೊಂಡಿರುವ ಶಂಕೆ ವ್ಯಕ್ತವಾಗಿದೆ.

ಆತಹತ್ಯೆಗೂ ಮುನ್ನ ಆಕೆ ನನಗೆ ಜೀವನ ಸಾಕಾಗಿದೆ ನಾನು ಆತಹತ್ಯೆ ಮಾಡಿಕೊಳ್ಳುತ್ತದ್ದೇನೆ ಎಂದು ಗೆಳೆಯನಿಗೆ ಮೆಸೇಜ್‌ ಮಾಡಿ ಬಳಿಕ ೇನ್‌ಸ್ವಿಚ್‌ಆ್‌‍ಮಾಡಿಕೊಂಡಿದ್ದಾಳೆ. ಈ ಮೆಸೇಜ್‌ ನೋಡಿದ ಗೆಳೆಯ ಆತಂಕಗೊಂಡು ತಕ್ಷಣ ಆ ಮೆಸೇಜ್‌ನ್ನು ತೇಜು ತಾಯಿಗೆ ಕಳುಹಿಸಿದ್ದಾನೆ. ಅವರ ತಾಯಿ ಮೆಸೇಜ್‌ ನೋಡಿ ಗಾಬರಿಯಾಗಿ ಎಲ್ಲಾ ಕಡೆ ವಿಚಾರಿಸಿದರೂ ಆಕೆಯ ಸುಳಿವು ಸಿಕ್ಕಿರಲಿಲ್ಲ.

ರಾತ್ರಿ ಸೆಕ್ಯೂರಿಟಿ ಗಾರ್ಡ್‌ ಎಂದಿನಂತೆ ಕೆರೆ ಸುತ್ತಾ ಪರಿಶೀಲನೆ ನಡೆಸಿ ಯಾರೂ ಇಲ್ಲದಿರುವುದು ಕಂಡು ಬಂದಾಗ ಗೇಟ್‌ಗೆ ಬೀಗ ಹಾಕಿ ತೆರಳಿದ್ದು, ಇಂದು ಬೆಳಗಿನ ಜಾವ ಬಂದು ಬೀಗ ತೆಗೆದಿದ್ದಾರೆ. ಇಲ್ಲಿಗೆ ಬಂದಂತಹ ವಾಯುವಿಹಾರಿಗಳು ಸ್ಯಾಂಕಿ ಕೆರೆಯಲ್ಲಿ ಯುವತಿಯ ಮೃತದೇಹ ಕಂಡು ತಕ್ಷಣ ಸೆಕ್ಯೂರಿಟಿ ಗಾರ್ಡ್‌ಗೆ ತಿಳಿಸಿದ್ದಾರೆ.

ಸೆಕ್ಯೂರಿಟಿ ಗಾರ್ಡ್‌ ಗಮನಿಸಿ ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಸುದ್ದಿ ತಿಳಿದು ಸದಾಶಿವನಗರ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿದ್ದಾರೆ.

ಸ್ಥಳದಲ್ಲಿದ್ದ ವಿದ್ಯಾರ್ಥಿನಿಯ ಮೊಬೈಲ್‌ನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಯುವತಿ ಯಾರ ಜೊತೆ ಈ ಸ್ಥಳಕ್ಕೆ ಬಂದಿದ್ದರು, ಎಷ್ಟು ಗಂಟೆಗೆ ಬಂದಿದ್ದರು, ಯಾವಾಗ ಆತಹತ್ಯೆ ಮಾಡಿಕೊಂಡಿದ್ದಾಳೆ,ಘಟನೆಗೆ ನಿಖರ ಕಾರಣವೇನು ಎಂಬಿತ್ಯಾದಿ ಆಯಾಮಗಳಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.

RELATED ARTICLES

Latest News