ಕೆಜಿಎಫ್, ಫೆ.6- ಅಕ್ರಮ ಗ್ಯಾಸ್ ರೀಫಿಲ್ಲಿಂಗ್ ಅಡ್ಡೆ ಮೇಲೆ ಅಂಡ್ರಸನ್‌ಪೇಟೆ ಠಾಣೆ ಪೊಲೀಸರು ಹಾಗೂ ಆಹಾರ ನಿರೀಕ್ಷಕರು ಜಂಟಿ ಕಾರ್ಯಾಚರಣೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ.
ಅಂಡ್ರಸನ್‌ಪೇಟೆಯ ಚಾಮರಾಜಪೇಟೆಯ ಬಳಿ ಅಕ್ರಮವಾಗಿ ಗ್ಯಾಸ್ ಸಿಲಿಂಡರ್ ಭರ್ತಿ ಮಾಡುತ್ತಿದ್ದರ ಬಗ್ಗೆ ಬಂದ ಖಚಿತ ಮಾಹಿತಿಯನ್ವಯ ಅಂಡ್ರಸನ್‌ಪೇಟೆ ಪೊಲೀಸ್ ಠಾಣೆ ಪಿ.ಎಸ್.ಐ ಬಿ.ಮಂಜುನಾಥ ಮತ್ತು ಸಿಬ್ಬಂದಿಗಳು ಹಾಗೂ ಕೆ.ಜಿ.ಎಫ್ ತಾಲ್ಲೂಕಿನ ಆಹಾರ ನಿರೀಕ್ಷಕರು ರಘುರವರೊಂದಿಗೆ ಜಂಟಿ ಕಾರ್ಯಚರಣೆ ಮೂಲಕ ದಾಳಿ ನಡೆಸಿ ಅಕ್ರಮವಾಗಿ ಗ್ಯಾಸ್ ಭರ್ತಿ(ರೀಫಿಲ್ಲಿಂಗ್) ಮಾಡುತ್ತಿದ್ದ ಆರೋಪಿ ಸೈಯದ್ ಉಮರ್ ಅಹಮದ್‌ನನ್ನು ವಶಕ್ಕೆ ಪಡೆದುಕೊಂಡು ಅಲ್ಲಿದ್ದಂತಹ 20,000 ರೂ. ಮೌಲ್ಯದ ಇಂಡೇನ್ ಗ್ಯಾಸ್ ಕಂಪನಿಯ 2 ಸಿಲಿಂಡರ್, ಗ್ಯಾಸ್ ರೀಪ್ಲಿಂಗ್‌ಗೆ ಬಳಸುತ್ತಿದ್ದ ಸ್ಟ್ಯಾಂಡ್ ಸಮೇತ ಪಂಪ್ ಮತ್ತು ಪೈಪ್‌ಗಳು ಹಾಗೂ ವಿದ್ಯುತ್ ತೂಕದ ಯಂತ್ರವನ್ನು ವಶಪಡಿಸಿಕೊಂಡಿದ್ದಾರೆ.
ಡಿವೈಎಸ್‌ಪಿ ಲಕ್ಷ್ಮಯ್ಯ ಮತ್ತು ರಾಬರ್ಟ್‌ಸನ್‌ಪೇಟೆ ವೃತ್ತ ಇನ್‌ಸ್ಪೆಕ್ಟರ್ ಪಿ.ಎಂ.ನವೀನ್‌ರವರ ಮಾರ್ಗದರ್ಶನದಲ್ಲಿ ಅಕ್ರಮ ಸಿಲಿಂಡರ್ ಭರ್ತಿ ಜಾಲವನ್ನು ಪತ್ತೆ ಮಾಡುವಲ್ಲಿ ಯಶಸ್ವಿಯಾದ ಅಂಡ್ರಸನ್‌ಪೇಟೆ ಪಿ.ಎಸ್.ಐ ಬಿ.ಮಂಜುನಾಥ, ಚಂದ್ರಶೇಖರ್, ಎ.ಎಸ್.ಐ ವಸಂತ್‌ಕುಮಾರ್ ಮತ್ತು ಸಿಬ್ಬಂದಿಗಳಾದ ಲೊಕೇಶ್, ಗೋಪಿ, ರಮೇಶ್ ಜಂಬಗಿ ಜೀಪ್ ಚಾಲಕರಾದ ಮನೋಹರ್ ರವರುಗಳನ್ನೊಳಗೊಂಡ ತಂಡವು ಯಶಸ್ವಿಯಾಗಿದ್ದು ಇವರ ಉತ್ತಮ ಕೆಲಸವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಶಿವಾಂಶು ರಜಪೂತ್‌ರವರು ಪ್ರಶಂಶಿಸಿದ್ದಾರೆ.
