Homeಜಿಲ್ಲಾ ಸುದ್ದಿಗಳುಕೋಲಾರ : ನೇಣು ಬಿಗಿದುಕೊಂಡು ಯುವಕ-ಮಹಿಳೆ ಆತಹತ್ಯೆ

ಕೋಲಾರ : ನೇಣು ಬಿಗಿದುಕೊಂಡು ಯುವಕ-ಮಹಿಳೆ ಆತಹತ್ಯೆ

Kolar: Youth and woman commit suicide by hanging themselves

ಕೋಲಾರ, ಜೂ.4- ಮರಕ್ಕೆ ನೇಣು ಬಿಗಿದುಕೊಂಡು ಯುವಕ ಹಾಗೂ ಮಹಿಳೆ ಆತಹತ್ಯೆ ಮಾಡಿಕೊಂಡಿರುವ ಘಟನೆ ಬೆಟ್ಟಬೆಣಜೇನಹಳ್ಳಿ ಗ್ರಾಮದಲ್ಲಿ ನಡೆದಿದೆ.ಹೊನ್ನೇನಹಳ್ಳಿ ಗ್ರಾಮದ ಸುಮಿತ್ರ ಹಾಗೂ ಆನಂದ್‌ ಆತಹತ್ಯೆಗೆ ಶರಣಾದವರು.

ಆನಂದ್‌ ಹಾಗೂ ಸುಮಿತ್ರ ನಡುವೆ ಅಕ್ರಮ ಸಂಬಂಧವಿತ್ತು ಎಂಬ ಆರೋಪಗಳು ಕೇಳಿಬಂದಿದ್ದು, ಈ ವಿಚಾರ ಮಹಿಳೆ ಮನೆಯಲ್ಲಿ ಪ್ರಸ್ತಾಪವಾದ ಹಿನ್ನೆಲೆಯಲ್ಲಿ ಕಳೆದ ಐದು ದಿನಗಳಿಂದ ಮಹಿಳೆ ನಾಪತ್ತೆಯಾಗಿದ್ದರು.

ಆದರೆ ಇಂದು ಬೆಳಿಗ್ಗೆ ಬೆಟ್ಟಬೆಣಜೇನಹಳ್ಳಿ ಗ್ರಾಮದ ಹೊರವಲಯದ ಹುಣಸೆಮರದಲ್ಲಿ ಇಬ್ಬರೂ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.ಸ್ಥಳೀಯರು ಗಮನಿಸಿ ಕೂಡಲೇ ಕೋಲಾರ ಗ್ರಾಮಾಂತರ ಠಾಣೆಗೆ ಮಾಹಿತಿ ನೀಡಿದ್ದು, ಸ್ಥಳಕ್ಕೆ ಆಗಮಿಸಿದ ಪೊಲೀಸರು ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News