Friday, April 17, 2026
Homeಜಿಲ್ಲಾ ಸುದ್ದಿಗಳುಆರು ಮರಿಗಳಿಗೆ ಜನ್ಮ ನೀಡಿದ ದೇವರಿಗೆ ಬಲಿ ಕೊಡಲು ತಂದಿದ್ದ ಕುರಿ

ಆರು ಮರಿಗಳಿಗೆ ಜನ್ಮ ನೀಡಿದ ದೇವರಿಗೆ ಬಲಿ ಕೊಡಲು ತಂದಿದ್ದ ಕುರಿ

sheep brought to be sacrificed to God gave birth to six lambs.

ಚಿಕ್ಕಮಗಳೂರು,ಫೆ.9-ಜಿಲ್ಲೆಯ ಇತಿಹಾಸದಲ್ಲೇ ಅತ್ಯಂತ ಅಪರೂಪದ ಘಟನೆಯೊಂದು ನಡೆದಿದ್ದು, ದೇವರಿಗೆ ಬಲಿ ಕೊಡಲು ತಂದಿದ್ದ ಕುರಿಯೊಂದು ಏಕಕಾಲಕ್ಕೆ ಆರು ಮರಿಗಳಿಗೆ ಜನ ನೀಡುವ ಮೂಲಕ ರೈತನ ಪಾಲಿಗೆ ವರವಾಗಿ ಪರಿಣಮಿಸಿದೆ.

ನಗರದ ಹೊರವಲಯದ ಚಂದ್ರಕಟ್ಟೆ ನಿವಾಸಿ, ಯುವ ರೈತ ಸಂತೋಷ್‌ ಅವರು ಇತ್ತೀಚೆಗೆ ನಡೆದ ದೇವಸ್ಥಾನದ ಜಾತ್ರೆಯ ಸಂದರ್ಭದಲ್ಲಿ ದೇವರಿಗೆ ಬಲಿ ನೀಡಲು ಮಾರುಕಟ್ಟೆಯಿಂದ ಎರಡು ಕುರಿಗಳನ್ನು ತಂದಿದ್ದರು.

ಇದರಲ್ಲಿ ಒಂದು ಕುರಿಯನ್ನು ಜಾತ್ರೆಯ ದಿನದಂದು ಕಡಿಯಲಾಗಿತ್ತು. ಆದರೆ, ಮತ್ತೊಂದು ಕುರಿಯು ಗರ್ಭಿಣಿಯಾಗಿರಬಹುದು ಎಂಬ ಸಂಶಯದಿಂದ ಸಂತೋಷ್‌ ಅದನ್ನು ಕಡಿಯದೆ ಹಾಗೆಯೇ ಉಳಿಸಿಕೊಂಡಿದ್ದರು.

ಒಂದೇ ಬಾರಿಗೆ ಆರು ಮರಿಗಳ ಜನನ: ರೈತನ ಈ ನಿರ್ಧಾರ ಇಂದು ದೊಡ್ಡ ಮಟ್ಟದ ಫಲ ನೀಡಿದೆ. ಆ ಕುರಿಯು ಬರೋಬ್ಬರಿ 6 ಮರಿಗಳಿಗೆ ಜನ ನೀಡಿದ್ದು ಅದರಲ್ಲಿ 4 ಹೆಣ್ಣು ಹಾಗೂ 2 ಗಂಡು ಮರಿಗಳಿವೆ.

ಸಾಮಾನ್ಯವಾಗಿ ಕುರಿಗಳು ಒಂದೆರಡು ಮರಿ ಹಾಕುವುದನ್ನು ನೋಡಿದ್ದೇವೆ, ಆದರೆ ಏಕಕಾಲಕ್ಕೆ ಆರು ಮರಿಗಳನ್ನು ಹಾಕಿರುವುದು ಎಲ್ಲರ ಅಚ್ಚರಿಗೆ ಕಾರಣವಾಗಿದೆ.ತಾಯಿ ಕುರಿ ಸೇರಿದಂತೆ ಎಲ್ಲಾ ಆರು ಮರಿಗಳು ಸಂಪೂರ್ಣವಾಗಿ ಆರೋಗ್ಯವಾಗಿವೆ ಎಂದು ತಿಳಿದು ಬಂದಿದೆ. ಈ ಅಪರೂಪದ ವಿದ್ಯಮಾನದ ವಿಷಯ ತಿಳಿಯುತ್ತಿದ್ದಂತೆಯೇ ಚಂದ್ರಕಟ್ಟೆ ಗ್ರಾಮದ ಸುತ್ತಮುತ್ತಲಿನ ಜನರು ಕುರಿ ಹಾಗೂ ಮರಿಗಳನ್ನು ನೋಡಲು ಸಂತೋಷ್‌ ಅವರ ಮನೆಯತ್ತ ಬರುತ್ತಿದ್ದಾರೆ.

RELATED ARTICLES

Latest News