Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-02-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (09-02-2026)

Today's Horoscope

ನಿತ್ಯ ನೀತಿ :`ತನ್ನ ಕರ್ತವ್ಯವನ್ನು ಸರಿಯಾಗಿ ಮಾಡುತ್ತಿರುವವನಿಗೆ ಜಗತ್ತು ಎಂದಿಗೂ ಬೇಸರವಾಗಿ ಕಾಣುವುದಿಲ್ಲ’. – ಮಹಾತಗಾಂಧಿ

ಪಂಚಾಂಗ : ಸೋಮವಾರ, 09-02-2026

ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಮಾಘ / ಪಕ್ಷ: ಕೃಷ್ಣ / ತಿಥಿ: ಅಷ್ಟಮಿ / ನಕ್ಷತ್ರ: ವಿಶಾಖಾ ಪೂರ್ಣ / ಯೋಗ: ವೃದ್ಧಿ / ಕರಣ: ಬಾಲವ
ಸೂರ್ಯೋದಯ – 06.45
ಸೂರ್ಯಾಸ್ತ – 6.24
ರಾಹುಕಾಲ – 7.30-9.00
ಯಮಗಂಡ ಕಾಲ – 10.30- 12.00
ಗುಳಿಕ ಕಾಲ – 1.30-3.00

ರಾಶಿಭವಿಷ್ಯ :

ಮೇಷ: ನಿರೀಕ್ಷಿತ ಧನಾಗಮನವಾಗಲಿದೆ. ವಿದ್ಯಾರ್ಥಿಗಳಿಗೆ ಅನುಕೂಲಕರ ವಾತಾವರಣ.
ವೃಷಭ: ಭೂ ವ್ಯವಹಾರದಲ್ಲಿ ತೊಡಗಿಸಿಕೊಂಡ ನಿಮಗೆ ಹೆಚ್ಚಿನ ಲಾಭ ಸಿಗಲಿದೆ.
ಮಿಥುನ: ವ್ಯವಹಾರಕ್ಕೆ ಸಂಬಂಧಿಸಿದಂತೆ ಕಾನೂನು ವಿಷಯದಲ್ಲಿ ಸಲಹೆ ಪಡೆಯುವುದು ಅನಿವಾರ್ಯ.

ಕಟಕ: ಧಾರ್ಮಿಕ ಕಾರ್ಯಗಳಿಗೆ ಹಣ ವ್ಯಯ ಮಾಡುವಿರಿ. ಮಕ್ಕಳಿಂದ ಸಂತೋಷ ಸಿಗಲಿದೆ.
ಸಿಂಹ: ಅನಗತ್ಯ ಚರ್ಚೆಗಳಿಗೆ ಆಸ್ಪದ ನೀಡದಿರಿ. ಸಾಲ ಮಾಡುವ ಸ್ಥಿತಿ ತಂದುಕೊಳ್ಳಬೇಡಿ.
ಕನ್ಯಾ: ಕೆಲಸ-ಕಾರ್ಯಗಳಲ್ಲಿ ಜನಪ್ರಿಯತೆ ಗಳಿಸುವಿರಿ. ನಿರೀಕ್ಷಿತ ಸ್ಥಾನಮಾನ ಸಿಗಲಿದೆ.

ತುಲಾ: ಲೇವಾದೇವಿ ವ್ಯವ ಹಾರ ನಡೆಸುವುದು ಸರಿಯಲ್ಲ.
ವೃಶ್ಚಿಕ: ಮನೆಯಲ್ಲಿ ಸಂತಸದ ವಾತಾವರಣವಿರಲಿದೆ.
ಧನುಸ್ಸು: ವಿದ್ಯೆಯ ವಿಚಾರದಲ್ಲಿ ಪರಿಶ್ರಮಕ್ಕೆ ತಕ್ಕ ಪ್ರತಿಲ ದೊರೆಯಲಿದೆ. ಸಂತಸದ ದಿನ.

ಮಕರ: ಭೂಮಿ, ಆಸ್ತಿ ವಿಚಾರಗಳಲ್ಲಿ ಪ್ರಗತಿ ಕಾಣುವಿರಿ. ಮಕ್ಕಳಿಂದ ಶುಭವಾರ್ತೆ ಕೇಳುವಿರಿ.
ಕುಂಭ: ಪತ್ನಿಯ ಸಹಕಾರದಿಂದ ನಿಮ ಕೆಲಸ-ಕಾರ್ಯಗಳು ಸುಸೂತ್ರವಾಗಿ ನೆರವೇರಲಿವೆ.
ಮೀನ: ಕಹಿ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಿ. ಹಿರಿಯರ ಮಾತುಗಳನ್ನು ಗೌರವಿಸಿ.

RELATED ARTICLES

Latest News