Homeಜಿಲ್ಲಾ ಸುದ್ದಿಗಳುಮೂವರು ಆತ್ಮಹತ್ಯೆ ಪ್ರಕರಣ : ಹೆಚ್ಡಿಕೆ ಕೊಟ್ಟ ಪರಿಹಾರದ ಹಣಕ್ಕಾಗಿ ಕುಟುಂಬದಲ್ಲೇ ಕಿತ್ತಾಟ

ಮೂವರು ಆತ್ಮಹತ್ಯೆ ಪ್ರಕರಣ : ಹೆಚ್ಡಿಕೆ ಕೊಟ್ಟ ಪರಿಹಾರದ ಹಣಕ್ಕಾಗಿ ಕುಟುಂಬದಲ್ಲೇ ಕಿತ್ತಾಟ

Triple suicide case: Family fights over compensation money given by HDK

ಮೈಸೂರು,ಜು.7- ಒಂದೇ ಕುಟುಂಬದ ಮೂವರು ಆತಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸಚಿವರಾದ ಎಚ್‌.ಡಿ.ಕುಮಾರಸ್ವಾಮಿಯವರು ನೀಡಿದ ಪರಿಹಾರದ ಹಣದ ವಿಚಾರವಾಗಿ ಕುಟುಂಬದಲ್ಲೇ ಜಗಳ ನಡೆದ ಘಟನೆ ಕೆಂಪಯ್ಯನಹುಂಡಿಯಲ್ಲಿ ನಡೆದಿದೆ.

ಕಳೆದ ಕೆಲವು ದಿನಗಳ ಹಿಂದೆ ಕೆಂಪಯ್ಯನಹುಂಡಿ ಗ್ರಾಮದಲ್ಲಿ ಒಂದೇ ಕುಟುಂಬದ ಮೂವರು ಆತಹತ್ಯೆ ಮಾಡಿಕೊಂಡ ಹಿನ್ನೆಲೆಯಲ್ಲಿ ಕೇಂದ್ರ ಸಚಿವರು ಭೇಟಿ ನೀಡಿ ಮೃತಪಟ್ಟ ಮೂವರು ವ್ಯಕ್ತಿಗಳಿಗೆ ತಲಾ 5 ಲಕ್ಷ ಪರಿಹಾರದ ಚೆಕ್‌ ಅನ್ನು ಮೃತ ಶಿವಣ್ಣ ಅವರ ತಾಯಿಗೆ ನೀಡಿದರು.

ಆದರೆ ಶಿವಣ್ಣ ಅವರ ತಾಯಿಗೆ ಚೆಕ್‌ ನೀಡಿದ್ದನ್ನು ವಿರೋಧಿಸಿ ಶಿವಣ್ಣನ ಅಳಿಯ ಶಿವಕುಮಾರ್‌ ಕೋಪಗೊಂಡು ಜಗಳವಾಡಿದ್ದ. ಈ ವೇಳೆ ಮೃತ ಶಿವಣ್ಣನ ಸೋದರಮಾವ ಮಾಧವಶೆಟ್ಟಿ ಮೇಲೆ ಶಿವಕುಮಾರ್‌ ಹಲ್ಲೆ ನಡೆಸಿದ ಆರೋಪ ಕೇಳಿಬಂದಿದೆ.

ಹಲ್ಲೆಗೊಳಗಾದ ಮಾಧವಶೆಟ್ಟಿಯನ್ನು ಟಿ.ನರಸೀಪುರ ಆಸ್ಪತ್ರೆಗೆ ಚಿಕಿತ್ಸೆಗಾಗಿ ದಾಖಲಿಸಲಾಗಿದೆ.
ಪರಿಹಾರದ ಹಣದ ಹಂಚಿಕೆಯೇ ಗಲಾಟೆಗೆ ಕಾರಣ ಎಂದು ಸ್ಥಳೀಯರು ತಿಳಿಸಿದ್ದು, ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

RELATED ARTICLES

Latest News