Homeರಾಜ್ಯತೆಂಗಿನಕಾಯಿ ಬೆಲೆಯಲ್ಲಿ ಇಳಿಕೆ, ನಿಟ್ಟುಸಿರು ಬಿಟ್ಟ ಗ್ರಾಹಕರು

ತೆಂಗಿನಕಾಯಿ ಬೆಲೆಯಲ್ಲಿ ಇಳಿಕೆ, ನಿಟ್ಟುಸಿರು ಬಿಟ್ಟ ಗ್ರಾಹಕರು

Coconut prices drop

ತುಮಕೂರು, ಜು.6- ಕಳೆದ ಎರಡು ವರ್ಷಗಳಿಂದ ನಿರಂತರವಾಗಿ ಏರುತ್ತಲೇ ಇದ್ದ ತೆಂಗಿನಕಾಯಿ ಬೆಲೆ ಇಳಿಕೆಯತ್ತ ಸಾಗುತ್ತಿದ್ದು, ಗ್ರಾಹಕರಲ್ಲಿ ಸಂತಸ ತಂದಿದೆ.ತೆಂಗಿನಕಾಯಿ ಬೆಲೆ ಮಾತ್ರ ಕುಸಿದಿದ್ದು, ಕೊಬ್ಬರಿ ಬೆಲೆ ಮಾತ್ರ ಸ್ಥಿರವಾಗಿದೆ. ಈ ಬಾರಿ ರಾಜ್ಯದಲ್ಲಿ ತೆಂಗಿನ ಇಳುವರಿ ಉತ್ತಮವಾಗಿದ್ದು, ನೆರೆ ರಾಜ್ಯ ತಮಿಳುನಾಡಿನಿಂದಲೂ ರಾಜ್ಯಕ್ಕೆ ಅಪಾರ ಪ್ರಮಾಣದಲ್ಲಿ ಕಾಯಿ ಬರುತ್ತಿದ್ದು, ದರ ಇಳಿಕೆಗೆ ಕಾರಣವಾಗಿದೆ.

ಇದರ ಜೊತೆಗೆ ತೆಂಗಿನಕಾಯಿ ಪೌಡರ್‌ ಉತ್ಪಾದನಾ ಕೇಂದ್ರಗಳು ತೆಂಗು ಖರೀದಿಯನ್ನು ಮಿತಿಗೊಳಿಸಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಕುಸಿದಿದೆ. ಜೊತೆಗೆ ತೆಂಗಿನಪುಡಿ ಉತ್ಪಾದನಾ ಕೇಂದ್ರಗಳಲ್ಲಿ ಸಾಕಷ್ಟು ಪ್ರಮಾಣದಲ್ಲಿ ದಾಸ್ತಾನು ಇರುವುದರಿಂದ ಕಾಯಿ ಬೆಲೆ ಇಳಿಕೆಯಾಗಿದೆ. ಆದರೆ ಕೊಬ್ಬರಿ ಮತ್ತು ಎಳನೀರು ಬೆಲೆ ಮಾತ್ರ ಗಗನಕ್ಕೇರಿದೆ.

ಮೋಡ ಕವಿದ ವಾತಾವರಣವಿದ್ದರೂ ಸಹ ಎಳನೀರು ಬೆಲೆ ಇಳಿಕೆಯಾಗಿಲ್ಲ. ಗುಣಮಟ್ಟದ ಎಳನೀರು 60 ರೂ.ಗಳಿಂದ 70 ರೂ.ಗೆ ಮಾರಾಟವಾಗುತ್ತಿದೆ. ರಾಜ್ಯದಲ್ಲೇ ಅತೀ ದೊಡ್ಡ ಕೊಬ್ಬರಿ ಮಾರುಕಟ್ಟೆಯಾದ ತಿಪಟೂರು ಎಪಿಎಂಸಿಯಲ್ಲಿ ಕ್ವಿಂಟಾಲ್‌ಗೆ 28 ರಿಂದ 32 ಸಾವಿರ ರೂ.ಗೆ ಗುಣಮಟ್ಟದ ಕೊಬ್ಬರಿ ಮಾರಾಟವಾಗುತ್ತಿದೆ.

ಕಳೆದ ವರ್ಷದಿಂದ 50 ರೂ.ಗಳಿಂದ 60 ರೂ.ಗೆ ಮಾರಾಟವಾಗುತ್ತಾ ಸ್ಥಿರತೆ ಕಾಯ್ದುಕೊಂಡಿದ್ದ ತೆಂಗಿನಕಾಯಿ ಕಳೆದ ಕೆಲವು ತಿಂಗಳುಗಳಿಂದ ಇಳಿಕೆಯಾಗಿದ್ದು, 25 ರೂ.ಗಳಿಂದ 30 ರೂ.ಗೆ ಒಂದರಂತೆ ತೆಂಗಿನಕಾಯಿ ಮಾರಾಟವಾಗುತ್ತಿದೆ.ಗೌರಿ-ಗಣೇಶ ಹಬ್ಬಕ್ಕೆ ತೆಂಗಿನಕಾಯಿ ಬೆಲೆ ತುಸು ಏರಿಕೆಯಾಗುವ ಸಾಧ್ಯತೆಯಿದ್ದು, ಅಲ್ಲಿಯವರೆಗೂ ಇದೇ ಬೆಲೆ ಮುಂದುವರೆಯಲಿದೆ.

RELATED ARTICLES
spot_img

Latest News