Homeಜಿಲ್ಲಾ ಸುದ್ದಿಗಳುಪತಿಯ ಸಾವಿನಿಂದ ಖಿನ್ನತೆಗೊಳಗಾಗಿ ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆಗೆ ಯತ್ನ

ಪತಿಯ ಸಾವಿನಿಂದ ಖಿನ್ನತೆಗೊಳಗಾಗಿ ಮಕ್ಕಳನ್ನು ಕೊಂದು ಮಹಿಳೆ ಆತ್ಮಹತ್ಯೆಗೆ ಯತ್ನ

Woman attempts suicide by killing children, depressed over husband's death

ಕೋಲಾರ,ಜೂ.4-ಪತಿಯ ಸಾವಿನಿಂದ ಖಿನ್ನತೆಗೆ ಒಳಗಾಗಿದ್ದ ಮಹಿಳೆ ತನ್ನಿಬ್ಬರು ಮಕ್ಕಳನ್ನು ಕತ್ತು ಹಿಸುಕಿ ಸಾಯಿಸಿ ನಂತರ ತಾನೂ ಆತಹತ್ಯೆಗೆ ಯತ್ನಿಸಿರುವ ಘಟನೆ ನಂಗಲಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಹೆತ್ತ ತಾಯಿಯ ಅಸಾಯಕತೆಗೆ ಸರಸ್ವತಿ (3) ಮತ್ತು ಹೇಮಾಶ್ರೀ (1) ಬಲಿಯಾದ ಮಕ್ಕಳು. ಮೂಲತಃ ಆಂಧ್ರಪ್ರದೇಶದ ವಿನಾಯಕಪುರಂನ ಬಾಬು ಹಾಗೂ ಬುಜ್ಜಮ(22) ದಂಪತಿ ಮುಳಬಾಗಿಲು ತಾಲ್ಲೂಕಿನ ಆಲಂಗೂರಿನ ಮಾವಿನ ತೋಪಿನಲ್ಲಿ ಕೆಲಸ ಮಾಡಿಕೊಂಡು ಇಬ್ಬರು ಮಕ್ಕಳೊಂದಿಗೆ ನೆಲೆಸಿದ್ದರು.

ದುರ್ದೈವವೆಂಬಂತೆ ಕಳೆದ 20 ದಿನಗಳ ಹಿಂದೆ ಬಾಬು ಅವರು ಅಪಘಾತದಲ್ಲಿ ಮೃತಪಟ್ಟಿದ್ದಾರೆ. ಅಂದಿನಿಂದ ಬುಜ್ಜಮ ಮುಂದೇನು ಮಾಡುವುದೆಂದು ತೋಚದೆ ಕಣ್ಣೀರಲ್ಲೇ ಜೀವನ ಸಾಗಿಸುತ್ತಾ ತನ್ನಿಬ್ಬರು ಪುಟ್ಟ ಪುಟ್ಟ ಮಕ್ಕಳನ್ನು ನೋಡಿಕೊಳ್ಳುತ್ತಿದ್ದರು.

ಪತಿಯ ಅಗಲಿಕೆಯ ನೋವಿನಿಂದ ಹೊರ ಬರಲಾಗದೇ ಮಾನಸಿಕ ಖಿನ್ನತೆಗೆ ಒಳಗಾಗಿ ಕಠಿಣ ನಿರ್ಧಾರ ತೆಗೆದುಕೊಂಡ ಬುಜ್ಜಮ ರಾತ್ರಿ ತನ್ನಿಬ್ಬರು ಮಕ್ಕಳನ್ನು ಕತ್ತು ಹಿಸುಕಿ ಸಾಯಿಸಿ ನಂತರ ಆತಹತ್ಯೆಗೆ ಯತ್ನಿಸಿದ್ದಾರೆ.

ತಕ್ಷಣ ನೆರೆಹೊರೆಯವರು ಬುಜ್ಜಮ ಅವರನ್ನು ರಕ್ಷಿಸಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಿದ್ದಾರೆ. ಸುದ್ದಿ ತಿಳಿದು ನಂಗಲಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡು, ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES
spot_img

Latest News