ಪ್ರಯಾಗ್‌ರಾಜ್, ಜೂ. 16 (ಪಿಟಿಐ) ಉತ್ತರ ಪ್ರದೇಶದ ಯಮುನಾ ನಗರ ಪ್ರದೇಶದ ಕುಕುರ್ ಕಟ್ವಾ ಗ್ರಾಮದಲ್ಲಿ ಇಂದು ಒಂದೇ ಕುಟುಂಬದ ಮೂವರು ವೃದ್ಧರನ್ನು ಕೊಲೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಪೊಲೀಸ್ ಉಪ ಆಯುಕ್ತ (ಯಮುನಾ ನಗರ) ವಿವೇಕ್ ಚಂದ್ರ ಯಾದವ್ ಅವರು ಮೂವರ ತಲೆಯಲ್ಲಿ ಗಾಯದ ಗುರುತುಗಳಿವೆ ಎಂದು ಹೇಳಿದ್ದಾರೆ.ಕೊಲೆಯಾದವರನ್ನು ಶ್ಯಾಮ್ ಲಾಲ್ (65), ಅಮರಾವತಿ, (60) ಮತ್ತು ಇಂದ್ರಾವತಿ (60) ಎಂದು ಗುರುತಿಸಲಾಗಿದೆ.
ಅವರ ಶವಗಳನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.ಅಧಿಕಾರಿಯ ಪ್ರಕಾರ, ಕುಟುಂಬ ಸದಸ್ಯರು ನಿರ್ದಿಷ್ಟ ವ್ಯಕ್ತಿಯ ವಿರುದ್ಧ ಅನುಮಾನ ವ್ಯಕ್ತಪಡಿಸಿದ್ದಾರೆ. ಔಪಚಾರಿಕ ದೂರು ಸ್ವೀಕರಿಸಲಾಗಿದ್ದು, ಆ ವ್ಯಕ್ತಿಯ ವಿರುದ್ಧ ಪ್ರಕರಣ ದಾಖಲಿಸಲಾಗುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.
