Homeಅಂತಾರಾಷ್ಟ್ರೀಯಉಗ್ರರೊಂದಿಗೆ ವೇದಿಕೆ ಹಂಚಿಕೊಂಡ ಪಾಕ್ ಮಾಜಿ ಸಚಿವ

ಉಗ್ರರೊಂದಿಗೆ ವೇದಿಕೆ ಹಂಚಿಕೊಂಡ ಪಾಕ್ ಮಾಜಿ ಸಚಿವ

Ex-Pak Minister on stage with LeT terrorists, praises Hafiz Saeed, threatens India

ಇಸ್ಲಾಮಾಬಾದ್‌/ನವದೆಹಲಿ,ಆ.13- ಪಾಕಿಸ್ತಾನದ ಮಾಜಿ ಆಂತರಿಕ ಸಚಿವ ಶೇಖ್‌ ರಶೀದ್‌ ಅಹ್ಮದ್ , ನಿಷೇಧಿತ ಲಷ್ಕರ್‌-ಎ-ತೈಬಾ (ಎಲ್‌ಇಟಿ) ಉಗ್ರರೊಂದಿಗೆ ಸಾರ್ವಜನಿಕ ವೇದಿಕೆ ಹಂಚಿಕೊಂಡಿದ್ದಾರೆ.ಎಲ್‌ಇಟಿ ಹಿರಿಯ ಕಮಾಂಡರ್‌ ಖಾಲಿದ್‌ ಮಸೂದ್‌ ಸಂಧು ಮತ್ತು ಸಲಹಾ ಸಮಿತಿ ಸದಸ್ಯ ಖಾರಿ ಮುಹಮದ್‌ ಯಾಕೂಬ್‌ ಶೇಖ್‌ ಉಪಸ್ಥಿತರಿದ್ದರು.

ಭಾರತದ ವಿರುದ್ಧ ಯುದ್ಧಕ್ಕೆ ಪ್ರಚೋದನೆ ನೀಡಿ, ದೇವಸ್ಥಾನಗಳ ಗಂಟೆ ಬಾರಿಸುವುದಿಲ್ಲ ಎಂದು ದುರಹಂಕಾರದ ಬೆದರಿಕೆ ಹಾಕಿದ್ದಾರೆ.ಪಾಕಿಸ್ತಾನದ ಮಾಜಿ ಸಚಿವ ಹಾಗೂ ಅವಾಮಿ ಮುಸ್ಲಿಂ ಲೀಗ್‌ ನಾಯಕ ಶೇಖ್‌ ರಶೀದ್‌ ಅಹದ್‌, ಮತ್ತೊಮೆ ಭಾರತ ವಿರೋಧಿ ವಿಷಕಾರೀ ಹೇಳಿಕೆಗಳ ಮೂಲಕ ಸುದ್ದಿಯಲ್ಲಿದ್ದಾರೆ. ಲಷ್ಕರ್‌-ಎ-ತೊಯಿಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯ ಪ್ರಮುಖ ನಾಯಕರ ಜೊತೆಗೂಡಿ ಸಾರ್ವಜನಿಕ ಸಮಾರಂಭವೊಂದರಲ್ಲಿ ಪಾಲ್ಗೊಂಡಿರುವ ಅವರು, ಉಗ್ರ ಹಫೀಜ್‌ ಸಯೀದ್‌ನನ್ನು ಮುಕ್ತಕಂಠದಿಂದ ಕೊಂಡಾಡಿದ್ದಾರೆ.

ಎಲ್ಲೆಡೆ ಹರಡಿಕೊಂಡಿರುವ ವೀಡಿಯೊ ಹಾಗೂ ವರದಿಗಳ ಪ್ರಕಾರ, ಪಾಕಿಸ್ತಾನದ ಇಮ್ರಾನ್‌ ಖಾನ್‌ ಸರ್ಕಾರದಲ್ಲಿ 2020 ರಿಂದ 2022ರವರೆಗೆ ಆಂತರಿಕ ಸಚಿವರಾಗಿ ಸೇವೆ ಸಲ್ಲಿಸಿದ್ದ ಶೇಖ್‌ ರಶೀದ್‌, ಎಲ್‌ಇಟಿ ಕಮಾಂಡರ್‌ ಹಾಗೂ ಪಾಕಿಸ್ತಾನ್‌ ಮರ್ಕಜಿ ಮುಸ್ಲಿಂ ಲೀಗ್‌ (ಪಿಎಂಎಂಎಲ್‌) ಅಧ್ಯಕ್ಷ ಖಾಲಿದ್‌ ಮಸೂದ್‌ ಸಂಧು ಮತ್ತು ಉಗ್ರ ಗುಂಪಿನ ಕೇಂದ್ರ ಸಲಹಾ ಸಮಿತಿಯ ಸದಸ್ಯ ಖಾರಿ ಮುಹಮದ್‌ ಯಾಕೂಬ್‌ ಶೇಖ್‌ ಅವರೊಂದಿಗೆ ವೇದಿಕೆಯಲ್ಲಿ ಹೆಗಲಿಗೆ ಹೆಗಲು ಕೊಟ್ಟು ನಿಂತಿರುವುದು ಸ್ಪಷ್ಟವಾಗಿದೆ.

ಸಭೆಯನ್ನು ಉದ್ದೇಶಿಸಿ ಮಾತನಾಡಿದ ಶೇಖ್‌ ರಶೀದ್‌, ಮೈ ಹಫೀಜ್‌ ಸಹಾಬ್‌ ಕಾ ಗುಲಾಮ್‌ ಹು (ನಾನು ಹಫೀಜ್‌ ಸಯೀದ್‌ನ ಗುಲಾಮ) ಎಂದು ಬಹಿರಂಗವಾಗಿ ಘೋಷಿಸಿಕೊಂಡಿದ್ದಾರೆ. ಮುಂದುವರಿದು, ಸಯೀದ್‌ ಅಮೆರಿಕದಲ್ಲಿದ್ದಾಗ ತನ್ನ ಫೋನ್‌ನಲ್ಲಿ ಆತನ ನಂಬರ್‌ ಕಾಣಿಸಿಕೊಂಡಿತ್ತು ಎಂಬ ಅಸಂಬದ್ಧ ಹೇಳಿಕೆಗಳನ್ನೂ ನೀಡಿದ್ದಾರೆ. ನಾವು ಪಾಕಿಸ್ತಾನದೊಂದಿಗೆ ಮತ್ತು ಹಫೀಜ್‌ ಸಯೀದ್‌ ಜೊತೆ ಇದ್ದೇವೆ ಎಂದು ಪುನರುಚ್ಚರಿಸಿದ್ದಾರೆ.

ವೇದಿಕೆಯಲ್ಲಿ ಉದ್ರೇಕಕಾರಿ ಭಾಷಣ ಮಾಡಿದ ಶೇಖ್‌ ರಶೀದ್‌, ಭಾರತದ ವಿರುದ್ಧ ತೀವ್ರ ಪ್ರಚೋದನಕಾರಿ ಮಾತುಗಳನ್ನು ಆಡಿದ್ದಾರೆ. ಪಾಕಿಸ್ತಾನದ ಕಡೆಗೆ ಕಣ್ಣೆತ್ತಿ ನೋಡಿದರೆ ಅಲ್ಲಾಹನು ಭಾರತವನ್ನು ನಾಶಪಡಿಸುತ್ತಾನೆ ಎಂದು ಕಪೋಲಕಲ್ಪಿತ ಮಾತುಗಳನ್ನಾಡಿದ ಅವರು, ಭಾರತದಲ್ಲಿ ಯಾವ ಪಕ್ಷಿಗಳು ಚಿಲಿಪಿಲಿ ಮಾಡುವುದಿಲ್ಲ, ದೇವಾಲಯಗಳಲ್ಲಿ ಗಂಟೆಗಳು ಬಾರಿಸುವುದಿಲ್ಲ ಎಂದು ದುರಾಹಂಕಾರದಿಂದ ಎಚ್ಚರಿಕೆ ನೀಡಿದ್ದಾರೆ.

ಹಿನ್ನೆಲೆ: ಪಾಕಿಸ್ತಾನವು ಜಾಗತಿಕ ವೇದಿಕೆಯಲ್ಲಿ ಭಯೋತ್ಪಾದನೆ ವಿರುದ್ಧ ಕ್ರಮ ಕೈಗೊಳ್ಳುವುದಾಗಿ ಬಡಾಯಿ ಕೊಚ್ಚಿಕೊಳ್ಳುತ್ತಿದ್ದರೂ, ಅದರ ಮಾಜಿ ಸಚಿವರು ಹಾಗೂ ರಾಜಕೀಯ ನಾಯಕರು ಉಗ್ರರ ಜೊತೆ ಕೈಜೋಡಿಸುತ್ತಿರುವುದು ಮತ್ತು ಮುಕ್ತವಾಗಿ ಬೆಂಬಲಿಸುತ್ತಿರುವುದು ಅಲ್ಲಿನ ಆಡಳಿತ ವ್ಯವಸ್ಥೆಯ ಭಯೋತ್ಪಾದನಾಪರ ಮುಖವಾಡವನ್ನು ಮತ್ತೊಮೆ ಜಗತ್ತಿನ ಮುಂದೆ ಬೆತ್ತಲೆಗೊಳಿಸಿದೆ.

ಶೇಖ್‌ ರಶೀದ್‌ ಅಹದ್‌ ಅವರಿಗೆ ಭಾರತ ವಿರೋಧಿ ಪ್ರಚೋದನಕಾರಿ ಹೇಳಿಕೆಗಳ ಹಿನ್ನೆಲೆಯೂ ಇದೆ. 2019ರ ಪುಲ್ವಾಮಾ ದಾಳಿಯ ನಂತರ ಅವರು ಭಾರತಕ್ಕೆ ಬೆದರಿಕೆಯ ರೀತಿಯಲ್ಲಿ ಮಾತನಾಡಿ, ಪಕ್ಷಿಗಳು ಚಿಲಿಪಿಲಿ ಮಾಡುವುದಿಲ್ಲ, ದೇವಾಲಯಗಳಲ್ಲಿ ಗಂಟೆಗಳು ಮೊಳಗುವುದಿಲ್ಲ ಎಂಬ ಹೇಳಿಕೆ ನೀಡಿದ್ದರು ಎಂದು ಆ ಸಮಯದ ವರದಿಗಳು ದಾಖಲಿಸಿದ್ದವು.

ಅವರು ಇಮ್ರಾನ್‌ ಖಾನ್‌ ನೇತೃತ್ವದ ಸರ್ಕಾರದಲ್ಲಿ 2020ರಿಂದ 2022ರವರೆಗೆ ಪಾಕಿಸ್ತಾನದ ಆಂತರಿಕ ಸಚಿವರಾಗಿದ್ದರು. ಆ ಅವಧಿಯಲ್ಲಿ ಭಾರತ-ಪಾಕಿಸ್ತಾನ ಸಂಬಂಧಗಳು, ಕಾಶೀರ ಮತ್ತು ಭಯೋತ್ಪಾದನೆ ಕುರಿತಂತೆ ಅವರ ಹಲವು ಕಠಿಣ ಹೇಳಿಕೆಗಳು ಸುದ್ದಿಯಾಗಿದ್ದವು. ಪ್ರಸ್ತುತ ಘಟನೆಯಲ್ಲಿ ಪ್ರಮುಖ ಪ್ರಶ್ನೆ ರಶೀದ್‌ ಅವರ ಮಾತುಗಳಷ್ಟೇ ಅಲ್ಲ, ಅವರು ಯಾರೊಂದಿಗೆ ವೇದಿಕೆ ಹಂಚಿಕೊಂಡಿದ್ದಾರೆ ಎಂಬುದೂ ಆಗಿದೆ. ವರದಿಯಲ್ಲಿ ಉಲ್ಲೇಖವಾಗಿರುವ ಖಾಲಿದ್‌ ಮಸೂದ್‌ ಸಂಧು ಪಾಕಿಸ್ತಾನದ Pakistan Markazi Muslim League (PMML) ಅಧ್ಯಕ್ಷರಾಗಿ ದಾಖಲಾಗಿದ್ದಾರೆ.

ಇಂತಹ ರಾಜಕೀಯ ವೇದಿಕೆಗಳಲ್ಲಿ ಮಾಜಿ ಸಚಿವರೊಬ್ಬರು ಐಖಿಗೆ ಸಂಬಂಧಿಸಿದಂತೆ ಗುರುತಿಸಲ್ಪಟ್ಟ ವ್ಯಕ್ತಿಗಳೊಂದಿಗೆ ಕಾಣಿಸಿಕೊಂಡು, ಹಫೀಜ್‌ ಸಯೀದ್‌ ಪರ ಘೋಷಣೆ ಮಾಡಿರುವುದು ಪಾಕಿಸ್ತಾನದಲ್ಲಿ ಭಯೋತ್ಪಾದಕ ಜಾಲಗಳು ಮತ್ತು ರಾಜಕೀಯ ವಲಯಗಳ ನಡುವಿನ ಸಂಬಂಧದ ಕುರಿತು ಮತ್ತೆ ಪ್ರಶ್ನೆಗಳನ್ನು ಎಬ್ಬಿಸಬಹುದು.

ಹಫೀಜ್‌ ಸಯೀದ್‌ ಮತ್ತು ಐಖಿ ವಿರುದ್ಧ ವಿಶ್ವಸಂಸ್ಥೆಯ ನಿರ್ಬಂಧಗಳು ಜಾರಿಯಲ್ಲಿರುವುದು, 2008ರ ಮುಂಬೈ ದಾಳಿಯ ಹಿನ್ನೆಲೆ, ಪಹಲ್ಗಾಮ್‌ ದಾಳಿ ಪ್ರಕರಣದಲ್ಲಿ 2026ರಲ್ಲಿ ಎನ್‌ಐಎ ದಾಖಲಿಸಿರುವ ಆರೋಪಗಳು ಮತ್ತು ಈಗ ರಶೀದ್‌ ಅವರಿಂದ ಸಯೀದ್‌ ಪರ ಸಾರ್ವಜನಿಕ ಮೆಚ್ಚುಗೆ ಈ ಎಲ್ಲಾ ಬೆಳವಣಿಗೆಗಳನ್ನು ಒಟ್ಟಾಗಿ ನೋಡಿದಾಗ, ಭಾರತಕ್ಕೆ ಸಂಬಂಧಿಸಿದ ಪಾಕಿಸ್ತಾನ ಮೂಲದ ಭಯೋತ್ಪಾದಕ ಜಾಲದ ವಿಚಾರ ಇನ್ನೂ ಸಂಪೂರ್ಣವಾಗಿ ಭೂತಕಾಲದ ವಿಷಯವಾಗಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

RELATED ARTICLES
spot_img

Latest News