ನವದೆಹಲಿ, ಫೆ.1- ಈ ಬಾರಿಯ ಕೇಂದ್ರ ಬಜೆಟ್‌ನಲ್ಲಿ ರಕ್ಷಣಾ ಕ್ಷೇತ್ರಕ್ಕಿಂತ ಹೆಚ್ಚು ಅನುದಾನವನ್ನು ಸಾರಿಗೆ ವಿಭಾಗಕ್ಕೆ ಹಂಚಿಕೆ ಮಾಡಲಾಗಿದೆ. ಈ ಬಾರಿ ಸಾರಿಗೆಗೆ 5,98,520 ಕೋಟಿ ರೂ. ಹಂಚಿಕೆ ಮಾಡಿದರೆ ರಕ್ಷಣೆಗೆ 5,94,585 ಕೋಟಿ ರೂ. ಹಂಚಿಕೆ ಮಾಡಲಾಗಿದೆ.
ಕಳೆದ ಬಜೆಟ್‌ನಲ್ಲಿ ರಕ್ಷಣೆಗೆ 4,91,732 ಕೋಟಿ ರೂ. ಮೀಸಲಿಡಲಾಗಿತ್ತು. ಆದರೆ, ಈ ಬಾರಿ ರಕ್ಷಣೆಗಿಂತ ಸಾರಿಗೆಗೆ ಹೆಚ್ಚು ನಿರ್ಮಲಾ ಸೀತಾರಾಮನ್ ಹೆಚ್ಚು ಒತ್ತು ನೀಡಿದ್ದಾರೆ.
ಯಾವ ಕ್ಷೇತ್ರಕ್ಕೆ ಎಷ್ಟು?
ಸಾರಿಗೆ 5,98,520
ರಕ್ಷಣೆ 5,94,585
ಗ್ರಾಮೀಣಾಭಿವೃದ್ಧಿ 2,73,108
ಗೃಹ ವ್ಯವಹಾರ 2,55,234
ಕೃಷಿ ಮತ್ತು ಸಂಬಂಧಿತ ಚಟುವಟಿಕೆಗಳು 1,62,671
ಶಿಕ್ಷಣ 1,39,289
ಇಂಧನ 1,09,029
ಆರೋಗ್ಯ 1,04,599
ನಗರಾಭಿವೃದ್ಧಿ 85,522
ಐಟಿ ಮತ್ತು ಟೆಲಿಕಾಂ -74,560
ವಾಣಿಜ್ಯ ಮತ್ತು ಕೈಗಾರಿಕೆ 70,296
ಸಮಾಜ ಕಲ್ಯಾಣ 62,362
ವೈಜ್ಞಾನಿಕ ಇಲಾಖೆಗಳು 55,756
ತೆರಿಗೆ ಆಡಳಿತ 45,500
ಬಾಹ್ಯ ವ್ಯವಹಾರಗಳು 22,119
ಹಣಕಾಸು 20,649
ಈಶಾನ್ಯ ಭಾಗದ ಅಭಿವೃದ್ಧಿ 6,812ಕೋಟಿ ರೂ.ಗಳನ್ನು ಹಂಚಿಕೆ ಮಾಡಲಾಗಿದೆ.
