ಬೆಂಗಳೂರು, ಜು.30- ಸ್ಯಾಂಡಲ್ ವುಡ್ ನ ಹಾಸ್ಯನಟ, ಉಪಾಧ್ಯಕ್ಷ ಚಿಕ್ಕಣ್ಣ ಹಾಗೂ ಪಾವನ ಅವರ ಮದುವೆಯು ಆಗಸ್ಟ್ 29 ಮತ್ತು 30 ರಂದು ಫಿಕ್ಸ್ ಆಗಿದೆ.ಮೈಸೂರಿನ ಸ್ಪೆಕ್ಟ್ರಮ್ ಹಾಲ್ ನಲ್ಲಿ ಚಿಕ್ಕಣ್ಣ ಹಾಗೂ ಪಾವನಾ ಅವರ ವಿವಾಹವು ನಡೆಯಲಿದ್ದು, ಕುಟುಂಬ ವರ್ಗದವರು, ಆಪ್ತೇಷ್ಟರು, ಚಿತ್ರರಂಗ ಹಾಗೂ ರಾಜಕೀಯ ಗಣ್ಯರು ವಿವಾಹದಲ್ಲಿ ಪಾಲ್ಗೊಳ್ಳಲಿದ್ದಾರೆ.
ಪಾವನಾ ಅವರು ಮೂಲತಃ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಮಹದೇವಪುರದವರಾಗಿದ್ದು ಎಂಜಿನಿಯರಿಂಗ್ ಪದವಿ ಪಡೆದಿದ್ದಾರೆ. ಕಿರಾತಕ ಸಿನಿಮಾ ಮೂಲಕ ಚಂದನವನಕ್ಕೆ ಎಂಟ್ರಿ ಕೊಟ್ಟ ಚಿಕ್ಕಣ್ಣ , ಸದ್ಯ ಲಕ್ಷ್ಮೀಪುತ್ರ ಹಾಗೂ ಜೋಡೆತ್ತು ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ.
