ಚಿಕ್ಕಬಳ್ಳಾಪುರ, ಮಾ 18- ಕಳೆದ ಸಂಜೆ ಸುರಿದ ಅಕಾಲಿಕ ಮಳೆ ಮತ್ತು ಆಲಿಕಲ್ಲು ಮಳೆಯಿಂದಾಗಿ ತಾಲೂಕಿನ ಅಡಿವಿಗೊಲ್ಲವಾರಹಳ್ಳಿ ಮಂಚನಬಲೆ, ಅಜ್ಜಾವರ ಸೇರಿದಂತೆ ಮತ್ತಿತರ ಗ್ರಾಮಗಳ ದ್ರಾಕ್ಷಿ ಬೆಳೆಗಾರರು ಭಾರಿ ನಷ್ಟ ಅನುಭವಿಸಿದ್ದಾರೆ.
ತಾಲೂಕಿನ ಅಡವಿ ಗೊಲ್ಲವಾರಹಳ್ಳಿ ಗ್ರಾಮದ ದಯಾನಂದ ಎಂಬುವರಿಗೆ ಸೇರಿದ ಒಂದು ಎಕರೆ ಪ್ರದೇಶದಲ್ಲಿನ ಕೊಯ್ಲು ಹಂತದಲ್ಲಿದ್ದ ದ್ರಾಕ್ಷಿ ಕಾಯಿ ಮೇಲೆ ಬಿದ್ದ ಆಲಿಕಲ್ಲು ದ್ರಾಕ್ಷಿ ತೋಟದ ಕಾಯಿ ಎರಡು ಹೋಳು ಮಾಡಿದಂತೆ ಸೀಳುಬಿಟ್ಟಿದೆ. ತೋಟದ ಬೆಳೆಯಲ್ಲೆಲ್ಲ ಬೆಳೆ ಮಕಾಳಿ ಬಂದಿದ್ದು, ರೈತ ಆನಂದ ಕಂಗಲಾಗಿದ್ದಾರೆ. ದಯಾನಂದ ಎಂಬುವರಿಗೆ ಸೇರಿದ ದ್ರಾಕ್ಷಿ ಹಾಗೂ ರೋಜಾ ಹೂವಿನ ಗಿಡವೂ ಸಹಾ ಆಲಿಕಲ್ಲು ಸಹಿತ ಮಳೆಗಾಳಿಗೆ ಗಿಡ ಕಿತ್ತು ಬಂದಿದೆ ಇದರಿಂದ ರೈತ ಕಂಗಾಲಾಗಿದ್ದಾರೆ.
ಸಾಲ-ಸೋಲ ಮಾಡಿ ಇದ್ದ ಸ್ವಲ್ಪ ದರ ನೀರಿನಲ್ಲಿ ಬೆಳೆದ ಬೆಳೆ ರೈತನಿಗೆ ಕೈಗೆ ಬಂದ ತುತ್ತು ಬಾಯಿಗೆ ಬಾರದಂತಾಗಿದೆ.
ಬೆಳೆ ನಾಶ: ಮಳೆ ಹನಿಗಳು ಹಸಿ ದ್ರಾಕ್ಷಿಯ ಮೇಲೆ ಬಿದ್ದಾಗ ಸಕ್ಕರೆ ಅಂಶ ಕಡಿಮೆಯಾಗಿ ದ್ರಾಕ್ಷಿ ಹುಳಿಯಾಗುತ್ತದೆ, ಇದರಿಂದ ಮಾರುಕಟ್ಟೆ ಮೌಲ್ಯ ಕುಸಿಯುವುದು ಒಂದು ಕಡೆಯಾದರೆ ಬೆಳೆಯ ಮೇಲೆ ಆಲಿಕಲ್ಲು ಬಿದ್ದ ಕಾರಣ ಮಾರುಕಟ್ಟೆ ಮೌಲ್ಯ ಒಂದು ಕಡೆ ಇರಲಿ ದ್ರಾಕ್ಷಿ ಗಿಡದಲ್ಲಿಯೇ ಕೊಳೆತು ಹೋಗಲಿದೆ ಎಂಬುದು ದ್ರಾಕ್ಷಿ ಬೆಳೆಗಾರರ ಮಾತಾಗಿದೆ. ಆಲಿಕಲ್ಲಿನಿಂದಾಗಿ ಹಾಲಿಕಲ್ಲಿನ ಮಳೆಯಿಂದಾಗಿ ತೇವಾಂಶ, ದ್ರಾಕ್ಷಿಯಲ್ಲಿ ನೈಟ್ರೋಜನ್ ಪ್ರಮಾಣ ಹೆಚ್ಚಾಗಿ, ಬೇಗನೆ ಕೊಳೆತು ಹೋಗಲಿದೆ.
ಬಿರುಗಾಳಿಗೆ ಬಿದ್ದ ಮರಕ್ಕೆ ಬೈಕ್ ಡಿಕ್ಕಿ: ವ್ಯಕ್ತಿ ಸಾವು
ಬಾಗೇಪಲ್ಲಿ(ಭಾಗ್ಯನಗರ),ಮಾ.18- ಕಳೆದ ರಾತ್ರಿ ಸುರಿದ ಭಾರೀ ಮಳೆ ಹಾಗೂ ಬಿರುಗಾಳಿಯಿಂದ ರಸ್ತೆಗೆ ಬಿದ್ದಿದ್ದ ಮರಕ್ಕೆ ದ್ವಿಚಕ್ರ ವಾಹನ ಡಿಕ್ಕಿ ಹೊಡೆದ ಪರಿಣಾಮ ವ್ಯಕ್ತಿಯೊಬ್ಬರು ಮೃತಪಟ್ಟ ದಾರುಣ ಘಟನೆ ತಾಲ್ಲೂಕಿನ ದೇವರೆಡ್ಡಿಪಲ್ಲಿ ಗ್ರಾಮದಲ್ಲಿ ನಡೆದಿದೆ.
ಮೃತರನ್ನು ದೇವರೆಡ್ಡಿಪಲ್ಲಿ ಗ್ರಾಮದ ಆನಂದ ಕುಮಾರ್ ಡಿ.ಎನ್ (43) ಎಂದು ಗುರುತಿಸಲಾಗಿದೆ.
ಕಳೆದ ರಾತ್ರಿ ಅವರು ತಮ ದ್ವಿಚಕ್ರ ವಾಹನದಲ್ಲಿ ದೇವರೆಡ್ಡಿಪಲ್ಲಿ ಗ್ರಾಮದತ್ತ ತೆರಳುತ್ತಿದ್ದ ವೇಳೆ, ಮಳೆ ಮತ್ತು ಬಿರುಗಾಳಿಯಿಂದ ರಸ್ತೆ ಮಧ್ಯೆ ಬಿದ್ದಿದ್ದ ಮರ ಕತ್ತಲಿನಲ್ಲಿ ಕಾಣದೆ, ಅದಕ್ಕೆ ಡಿಕ್ಕಿ ಹೊಡೆದಿದ್ದಾರೆ ಎಂದು ತಿಳಿದುಬಂದಿದೆ.
ಡಿಕ್ಕಿ ಹೊಡೆದ ಪರಿಣಾಮ ಗಂಭೀರವಾಗಿ ಗಾಯಗೊಂಡ ಆನಂದ ಕುಮಾರ್ ಅವರನ್ನು ಮೃತಪಟ್ಟಿದ್ದಾರೆ. ಈ ಘಟನೆ ಪ್ರಕೃತಿ ವಿಕೋಪದಿಂದ ಅಮಾಯಕ ವ್ಯಕ್ತಿಯೊಬ್ಬರು ಬಲಿಯಾಗಿರುವುದಾಗಿ ಗ್ರಾಮಸ್ಥರು ವಿಷಾದ ವ್ಯಕ್ತಪಡಿಸಿದ್ದಾರೆ.
ಘಟನೆ ಸಂಬಂಧ ಸ್ಥಳೀಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಬಿರುಗಾಳಿಯಿಂದ ರಸ್ತೆಗಳಲ್ಲಿ ಮರಗಳು ಬೀಳುವಂತಹ ಘಟನೆಗಳು ಸಂಭವಿಸುತ್ತಿರುವುದರಿಂದ, ರಾತ್ರಿ ವೇಳೆ ವಾಹನ ಸವಾರರು ಹೆಚ್ಚಿನ ಎಚ್ಚರಿಕೆ ವಹಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.
