ಜ್ಯೋತಿಷ್ಯ ಆಚಾರ್ಯ ಬಾಲಸುಬ್ರಹಣ್ಯಂ. ಎನ್
9743200034
ಮೇಷ ರಾಶಿ :
ಪ್ರಸ್ತುತ ಸಾಡೇಸಾತಿ ನಡೆಯುತ್ತಿದ್ದು, ಶನಿಯು ವ್‌ಯಯಭಾವದಲ್ಲಿ ಸಂಚಾರ ಮಾಡುತ್ತಿರುವುದರಿಂದ ಅಪವಾದಗಳು ಅಥವಾ ನಿಂದನೆಗಳು ಎದುರಾಗುವ ಸಾಧ್ಯತೆ ಇದೆ. ಜೂನ್ ನಂತರ ಗುರುವು ಮಿಥುನ ರಾಶಿಯಿಂದ ಕರ್ಕಾಟಕ ರಾಶಿಗೆ ಪ್ರವೇಶಿಸುತ್ತಾನೆ. ಇದರ ನಂತರ ಪರಿಸ್ಥಿತಿಯಲ್ಲಿ ಸುಧಾರಣೆ ಕಂಡುಬರಲಿದೆ. ಜೂನ್ ನಂತರ ಹಣಕಾಸಿನ ವಿಚಾರದಲ್ಲಿ ಸಮಾಧಾನ ಮತ್ತು ಪ್ರಗತಿ ಇರುತ್ತದೆ. ಲಾಭ ಭಾವದಲ್ಲಿರುವ ರಾಹು ಅನಿರೀಕ್ಷಿತ ಲಾಭಗಳನ್ನು ತಂದುಕೊಡಬಹುದು. ಡಿಸೆಂಬರ್‌ನಲ್ಲಿ ನಡೆಯುವ ರಾಹು-ಕೇತುಗಳ ಪಲ್ಲಟದ ನಂತರ ವಿದ್ಯಾರ್ಥಿಗಳಲ್ಲಿ ಜ್ಞಾನಾರ್ಜನೆ ಮತ್ತು ಓದಿನಲ್ಲಿ ಆಸಕ್ತಿ ಹೆಚ್ಚಾಗಲಿದೆ. ಮದುವೆ ಅಥವಾ ಮನೆ ಕಟ್ಟುವಂತಹ ಶುಭ ಕಾರ್ಯಗಳಿಗೆ ಪ್ರಯತ್ನಿಸಿದರೆ ಈ ವರ್ಷ ಯಶಸ್ಸು ಸಿಗುತ್ತೆದೆ. ಉದ್ಯೋಗ ಅಥವಾ ಶಿಕ್ಷಣಕ್ಕಾಗಿ ವಿದೇಶಕ್ಕೆ ಹೋಗುವ ಸಾಧ್ಯತೆಗಳು ದಟ್ಟವಾಗಿವೆ. ಮಾನಸಿಕ ಗೊಂದಲಗಳು ಮತ್ತು ಮೂರನೇ ವ್‌ಯಕ್ತಿಗಳಿಂದ ಬರುವ ಸಮಸ್ಯೆಗಳ ಬಗ್ಗೆ ಎಚ್ಚರಿಕೆ ವಹಿಸುವುದು ಅಗತ್ಯ. ಸಾಡೆಸಾತಿಯ ಪ್ರಭಾವ ತಗ್ಗಿಸಲು ಮತ್ತು ಆರೋಗ್ಯ ವೃದ್ಧಿಗಾಗಿ ಹನುಮಂತ ಮತ್ತು ಸುಬ್ರಹ್ಮಣ್ಯ ಸ್ವಾಮಿಯ ಪ್ರಾರ್ಥನೆ ಮಾಡಿ.
ವೃಷಭ ರಾಶಿ :
ಸೈಟು ಖರೀದಿ, ಮನೆ ನಿರ್ಮಾಣ, ಮದುವೆ ಅಥವಾ ಯಾವುದೇ ಶುಭ ಕಾರ್ಯಗಳನ್ನೂ ಜೂನ್ ಒಳಗಾಗಿ ಮಾಡಿಕೊಳ್ಳುವುದು ಉತ್ತಮ. ದ್ವಿತೀಯ ಭಾವದಲ್ಲಿ ಗುರುವಿನ ಸಂಚಾರ ಇರುವುದರಿಂದ ಗುರುಬಲ ಚೆನ್ನಾಗಿದೆ. ಆದರೆ ಮುಂಬರುವ ಗ್ರಹಗಳ ಸಂಚಾರದಿಂದಾಗಿ ಆರೋಗ್ಯ ಮತ್ತು ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಜಾಗರೂಕತೆ ಅಗತ್ಯ. ಹಣಕಾಸಿನ ವಿಚಾರದಲ್ಲಿ ಶುಭ ಫಲಗಳಿದ್ದರೂ, ಬೇರೆಯವರಿಗೆ ಹಣ ಕೊಟ್ಟು ಕಳೆದುಕೊಳ್ಳುವ ಅಥವಾ ಮೋಸ ಹೋಗುವ ಸಾಧ್ಯತೆ ಇರುವುದರಿಂದ ಎಚ್ಚರಿಕೆ ವಹಿಸಿ. ಕರ್ಮಭಾವದಲ್ಲಿ ರಾಹುವಿನ ಸಂಚಾರವಿರುವುದರಿಂದ ಕೆಲಸದಲ್ಲಿ ವ್ಯತ್ಯಾಸಗಳು ಅಥವಾ ನಂಬಿದವರಿಂದಲೇ ಮನಸ್ತಾಪ ಆಗುವ ಸಾಧ್ಯತೆ ಇದೆ. ಹೆಣ್ಣು ದೇವತೆಗಳಾದ ದುರ್ಗಾ ಪರಮೇಶ್ವರಿ, ಅಂಬಾಭವಾನಿ, ರಾಜರಾಜೇಶ್ವರಿ, ಮಹಾಲಕ್ಷ್ಮಿ ಅಥವಾ ಸರಸ್ವತಿ ಆರಾಧನೆ ಮಾಡುವುದರಿಂದ ಒಳ್ಳೆಯದಾಗುತ್ತದೆ. ಮಂಗಳವಾರ ಅಥವಾ ಶುಕ್ರವಾರದಂದು ಹತ್ತಿರದ ಅಮ್ಮನವರ ದೇವಸ್ಥಾನಕ್ಕೆ ಭೇಟಿ ನೀಡಿ ಪ್ರದಕ್ಷಿಣೆ ಹಾಕುವುದರಿಂದ ಅಥವಾ ಮನೆಯಲ್ಲೇ ಸ್ಮರಣೆ ಮಾಡುವುದರಿಂದ ಸಮಸ್ಯೆಗಳು ನಿವಾರಣೆಯಾಗಲಿವೆ.
ಮಿಥುನ ರಾಶಿ :
ಗುರುವು ದ್ವಿತೀಯ ಭಾವಕ್ಕೆ ಸಂಚಾರ ಮಾಡುವುದರಿಂದ ಗುರುವಿನ ಬಲ ಹೆಚ್ಚಾಗಲಿದೆ. ಅಲ್ಲಿಯವರೆಗೆ ಕೆಲಸಗಳಲ್ಲಿ ಸ್ವಲ್ಪ ನಿಧಾನಗತಿ ಇರುತ್ತದೆೆೆ. ಹತ್ತನೇ ಮನೆಯಲ್ಲಿ ಶನಿ ಇರುವುದರಿಂದ ಕೆಲಸ ಕಾರ್ಯಗಳಲ್ಲಿ ಶ್ರದ್ಧ್ಧೆ ಮತ್ತು ಪ್ರಾಮಾಣಿಕತೆ ಬಹಳ ಮುಖ್ಯ. ಪ್ರಾಮಾಣಿಕವಾಗಿ ಕೆಲಸ ಮಾಡಿದರೆ ಮಾತ್ರ ಲಾಭ ಸಿಗಲಿದೆ. ಜೂನ್ ನಂತರ ಗುರುವು ಉಚ್ಚ ಕ್ಷೇತ್ರಕ್ಕೆ ಬರುವುದರಿಂದ ಮುಟ್ಟಿದ್ದೆಲ್ಲ ಚಿನ್ನ ಎನ್ನುವಂತಹ ಸಕಾರಾತ್ಮಕ ಬದಲಾವಣೆಗಳನ್ನು ನೀವು ಕಾಣಬಹುದು. ಧನಸ್ಥಾನದಲ್ಲಿ ಗುರುವಿನ ಸಂಚಾರವಿರುವುದರಿಂದ ಹಣಕಾಸಿನ ಅಭಿವೃದ್ಧಿ ಕಂಡುಬರುತ್ತದೆ. ಕುಟುಂಬದಲ್ಲಿ ಶುಭ ಸೂಚನೆಗಳು ಸಿಗಲಿವೆ ಮತ್ತು ಆಸ್ತಿ ವಿಭಜನೆಯಲ್ಲಿ ನಿಮಗೆ ಅನುಕೂಲವಾಗುವ ಸಾಧ್ಯತೆ ಇದೆ. ಮಕ್ಕಳು ಉನ್ನತ ವ್‌ಯಾಸಂಗಕ್ಕಾಗಿ ವಿದೇಶಕ್ಕೆ ಹೋಗಲು ಬಯಸುತ್ತಿದ್ದರೆ, ಅವರಿಗೆ ಉತ್ತಮ ಕಾಲ ಒದಗಿಬಂದಿದೆ. ನಿಮ್ಮ ಕೆಲಸ ಕಾರ್ಯಗಳಲ್ಲಿ ಯಶಸ್ಸು ಕಾಣಲು ಮತ್ತು ಅಡೆತಡೆಗಳು ನಿವಾರಣೆಯಾಗಲು ಲಕ್ಷ್ಮೀನಾರಾಯಣ ಅಥವಾ ಲಕ್ಷ್ಮೀನರಸಿಂಹ ಸ್ವಾಮಿಯ ಸ್ಮರಣೆ ಮತ್ತು ಪ್ರಾರ್ಥನೆ ಮಾಡುವುದು ಉತ್ತಮ. ಲಕ್ಷ್ಮೀದೇವಿಸರಣೆ ಮಾಡುವುದರಿಂದ ಜೂನ್ ನಂತರದ ಸಮಯವು ಅತ್ಯಂತ ಫಲಪ್ರದವಾಗಿರಲಿದೆ.
ಕರ್ಕಾಟಕ ರಾಶಿ :
ಜೂನ್ ನಂತರ 12ನೇ ಭಾವದಲ್ಲಿ ಗುರು ಸಂಚರಿಸುವುದರಿಂದ ಧರ್ಮ ಕಾರ್ಯಗಳಿಗೆ ಹೆಚ್ಚು ಖರ್ಚಾಗಬಹುದು. ತುರ್ತು ಎಂದು ಕೇಳುವವರಿಗೆ ಹಣ ಸಾಲ ನೀಡಿ ಕಳೆದುಕೊಳ್ಳುವ ಸಂಭವವಿರುವುದರಿಂದ ಎಚ್ಚರಿಕೆ ಅಗತ್ಯ. ತಂದೆ-ತಾಯಿಯರ ಆರೋಗ್ಯದಲ್ಲಿ ಏರುಪೇರಾಗಬಹುದು. ಸ್ವತಃ ಕರ್ಕಾಟಕ ರಾಶಿಯವರಿಗೂ ನೀರಿನಿಂದ ಹರಡುವ ಸೋಂಕುಗಳು ಅಥವಾ ಹೊಟ್ಟೆ ಮತ್ತು ಗಂಟಲಿನ ಸಮಸ್ಯೆಗಳು ಬರುವ ಸಾಧ್ಯತೆ ಇದೆ. ಅತಿಯಾದ ಭಾವನಾತಕತೆ ಅಥವಾ ಆತಂಕಕ್ಕೆ ಒಳಗಾಗಬೇಡಿ. ಶಾಂತವಾಗಿ ಜೀವನ ಸಾಗಿಸಿದರೆ ಶುಭ ಫಲಗಳು ಲಭಿಸುತ್ತವೆ. ಸಣ್ಣ ಉದ್ಯೋಗ ಅಥವಾ ಸ್ವಂತ ವ್ಯಾಪಾರ ಮಾಡುವವರಿಗೆ ಪ್ರಗತಿ ಕಾಣಲಿದೆ. ಮಕ್ಕಳ ವಿದ್ಯಾಭ್ಯಾಸದಲ್ಲಿ ಸಂಪೂರ್ಣ ಶುಭ ಫಲಗಳು ಕಂಡುಬರಲಿವೆ. ದ್ವಿತೀಯ ಭಾವದಲ್ಲಿ ಕೇತು ಇರುವುದರಿಂದ ಮಾತನಾಡುವಾಗ ಜಾಗರೂಕತೆ ಇರಲಿ. ಇಲ್ಲವಾದರೆ ಮಾತಿನಿಂದಲೇ ಮನಸ್ತಾಪಗಳು ಉಂಟಾಗಬಹುದು. ಈಶ್ವರನ ಸ್ಮರಣೆ ಮಾಡಿ ಅಥವಾ ಸೌಮ್ಯ ಸ್ವಭಾವದ ಹೆಣ್ಣು ದೇವತೆಗಳಾದ ಅನ್ನಪೂರ್ಣೇಶ್ವರಿ, ರಾಜರಾಜೇಶ್ವರಿ ಅಥವಾ ಗೌರಿಯನ್ನು ಆರಾಧಿಸುವುದರಿಂದ ಅಡೆತಡೆಗಳು ನಿವಾರಣೆಯಾಗುತ್ತವೆ.
ಸಿಂಹ ರಾಶಿ :
ಪ್ರಸ್ತುತ ಅಷ್ಟಮದಲ್ಲಿ ಶನಿಯ ಪ್ರಭಾವವಿರುವುದರಿಂದ ಹಣಕಾಸಿನ ನಷ್ಟ ಉಂಟಾಗುವ ಸಾಧ್ಯತೆ ಇದೆ. ಒಂದು ಕಡೆಯಿಂದ ಲಾಭ ಬಂದರೂ, ಅದು ಅನಿರೀಕ್ಷಿತವಾಗಿ ವ್ಯರ್ಥ ಖರ್ಚುಗಳಿಗೆ ಬಳಕೆಯಾಗಬಹುದು. ಬ್ಯಾಂಕ್ ಕೆಲಸಗಳಿಗೆ ಅಥವಾ ಇತರ ವ್ಯವಹಾರಗಳಿಗೆ ಬೇರೆಯವರಿಗೆ ಶೂರಿಟಿ ಹಾಕಬೇಡಿ. ಇದರಿಂದ ನೀವು ಸಮಸ್ಯೆಗಳಿಗೆ ಸಿಲುಕುವ ಸಾಧ್ಯತೆ ಇದೆ. ಕೇತು ಪ್ರಭಾವದಿಂದಾಗಿ ಅರಿವಿಲ್ಲದೆಯೇ ಅತಿಯಾಗಿ ಮಾತನಾಡಿ ಅವಮಾನಕ್ಕೀಡಾಗುವ ಸಾಧ್ಯತೆ ಇದೆ. ಸಾಧ್ಯವಾದಷ್ಟು ಮೌನವಾಗಿರುವುದು ನಿಮಗೆ ಶ್ರೇಯಸ್ಕರ. ರಾಜಕೀಯ ಮತ್ತು ಸರ್ಕಾರಿ ಉದ್ಯೋಗದಲ್ಲಿರುವವರು ಅತಿಯಾದ ಮುಂದಾಳತ್ವ ವಹಿಸಲು ಹೋಗಬೇಡಿ. ದಾಂಪತ್ಯ ಜೀವನ ಸಮೃದ್ಧ್ಧವಾಗಿರಲಿದೆ. ಗುರುಬಲ ಇರುವ ತನಕ ವಿವಾಹದಂತಹ ಶುಭ ಕಾರ್ಯಗಳನ್ನು ಮಾಡಿಕೊಳ್ಳಲು ಇದು ಸಕಾಲ. ಪ್ರತಿದಿನ ಸೂರ್ಯೋದಯದ ಸಮಯದಲ್ಲಿ ಪೂರ್ವಕ್ಕೆ ಮುಖ ಮಾಡಿ ಸೂರ್ಯನಾರಾಯಣ ಮತ್ತು ಗುರುಗಳ ಸ್ಮರಣೆ ಮಾಡುವುದು ಉತ್ತಮ. ಓಂ ನಮೋ ಸೂರ್ಯನಾರಾಯಣಾಯ ನಮಃ ಅಥವಾ ಓಂ ಗುರವೇ ನಮಃ ಮಂತ್ರಗಳನ್ನು ಪಠಿಸುವುದರಿಂದ ಅಡೆತಡೆಗಳು ನಿವಾರಣೆಯಾಗಲಿವೆ.
ಕನ್ಯಾ ರಾಶಿ :
ಸಪ್ತಮ ಭಾವದಲ್ಲಿ ಶನಿ ಇರುವುದರಿಂದ ಈ ವರ್ಷ ಹೊಸದಾಗಿ ಪಾಲುದಾರಿಕೆ ವ್‌ಯವಹಾರಗಳನ್ನು ಮಾಡದಿರುವುದು ಉತ್ತಮ. ಈಗಾಗಲೇ ಮಾಡುತ್ತಿರುವವರು ಸಮಾಧಾನದಿಂದ ಇರುವುದು ಒಳ್ಳೆಯದು, ಇಲ್ಲವಾದರೆ ಭಿನ್ನಾಭಿಪ್ರಾಯಗಳು ಮೂಡಬಹುದು. ಬೇರೆಯವರ ಅಡಿಯಲ್ಲಿ ಕೆಲಸ ಮಾಡುವವರಿಗೆ ಶನಿ ಮಹಾತ್ಮನ ಅನುಗ್ರಹದಿಂದ ಉತ್ತಮ ಫಲಗಳು ದೊರೆಯಲಿವೆ. ಸ್ವಂತ ಉದ್ಯೋಗ ಮಾಡುವವರಿಗೆ ಕೆಲಸಗಳು ಸ್ವಲ್ಪ ವಿಳಂಬವಾಗಬಹುದು. ವಿದ್ಯಾರ್ಥಿಗಳಿಗೆ ಈ ವರ್ಷ ಅತ್ಯಂತ ಶುಭದಾಯಕವಾಗಿದೆ. ಪರೀಕ್ಷೆ ಮತ್ತು ಓದಿನ ವಿಚಾರದಲ್ಲಿ ಉತ್ತಮ ಪ್ರಗತಿ ಕಾಣಲಿದ್ದಾರೆ. ವ್‌ಯಯಭಾವದಲ್ಲಿ ಕೇತು ಇರುವುದರಿಂದ ಹೊಟ್ಟೆ ಅಥವಾ ಪಿತ್ತಕೋಶಕ್ಕೆ ಸಂಬಂಧಿಸಿದ ಸೋಂಕುಗಳು ಮತ್ತು ನಿದ್ರಾಹೀನತೆ ಕಾಡಬಹುದು ಈ ಬಗ್ಗೆ ಎಚ್ಚರಿಕೆ ಇರಲಿ. ಈ ವರ್ಷದ ಅಡೆತಡೆಗಳನ್ನು ನಿವಾರಿಸಿಕೊಳ್ಳಲು ಲಕ್ಷ್ಮೀನರಸಿಂಹ ಸ್ವಾಮಿಯ ಆರಾಧನೆ ಮಾಡುವುದು ಅತ್ಯಂತ ಶ್ರೇಯಸ್ಕರ. ಉಗ್ರಂ ವೀರಂ ಮಹಾವಿಷ್ಣುಂ ಜ್ವಲಂತಂ ಸರ್ವತೋ ಮುಖಂ ನೃಸಿಂಹಂ ಭೀಷ್ಣಂ ಮೃತ್ಯುರ್ ಮೃತ್ಯುರ್ ನಮಾಮ್ಯಹಂ ಎಂಬ ನರಸಿಂಹ ಮಂತ್ರವನ್ನು ಪಠಿಸುವುದರಿಂದ ಎಲ್ಲ ರೀತಿಯ ಭಯಗಳು ನಿವಾರಣೆಯಾಗಿ ಶುಭ ಫಲಗಳು ಲಭಿಸುತ್ತವೆ.
ತುಲಾ ರಾಶಿ :
ಒಂಬತ್ತನೇ ಮನೆಯಲ್ಲಿ ಗುರುವಿನ ಸಂಚಾರವಿರುವುದರಿಂದ ಭಾಗ್ಯೋದಯವಾಗುವ ಕಾಲವಿದು. ಕಳೆದ ಕೆಲವು ವರ್ಷಗಳಿಂದ ಅನುಭವಿಸುತ್ತಿದ್ದ ಕಷ್ಟಗಳಿಂದ ಮುಕ್ತಿ ಸಿಗಲಿದೆ. ಸಾಲದಿಂದ ವಿಮುಕ್ತರಾಗಲು ಪ್ರಯತ್ನಿಸುತ್ತಿರುವವರಿಗೆ ಈ ವರ್ಷ ಉತ್ತಮ ಸುಧಾರಣೆ ಕಂಡುಬರಲಿದೆ. ಹಂತ ಹಂತವಾಗಿ ಸಾಲದ ಹೊರೆ ಕಡಿಮೆಯಾಗುತ್ತದೆ. ತುಲಾ ರಾಶಿಯವರು ಚರ ರಾಶಿಯವರಾದ್ದರಿಂದ ಆತುರದ ಸ್ವಭಾವವನ್ನು ಕಡಿಮೆ ಮಾಡಿಕೊಳ್ಳುವುದು ಒಳಿತು. ಕಂಕಣ ಭಾಗ್ಯಕ್ಕಾಗಿ ಕಾಯುತ್ತಿರುವವರಿಗೆ ಜೂನ್ ಒಳಗಾಗಿ ವಿವಾಹ ಅಥವಾ ಕನಿಷ್ಠ ಪಕ್ಷ ನಿಶ್ಚಿತಾರ್ಥ ಮಾಡಿಕೊಳ್ಳಲು ಸಕಾಲ. ವಿವಾಹಿತರಿಗೆ ದೀರ್ಘಕಾಲದ ನಂತರ ಸಂತಾನ ಯೋಗ ಕೂಡಿಬರಲಿದೆ. ಮನೆ ಕಟ್ಟುವ ಅಥವಾ ಸೈಟು ಖರೀದಿಸುವ ವಿಚಾರದಲ್ಲಿ ಆರಂಭದಲ್ಲಿ ಸಣ್ಣಪುಟ್ಟ ಅಡೆತಡೆಗಳು ಎದುರಾಗಬಹುದು. ಹೊಸ ವ್‌ಯಾಪಾರ ಪ್ರಾರಂಭಿಸುವವರಿಗೆ ರಾಹುವಿನ ಪ್ರಭಾವದಿಂದ ಆರಂಭದಲ್ಲಿ ಸವಾಲುಗಳು ಎದುರಾದರೂ, ನಂತರ ಅದು ಯಶಸ್ವಿಯಾಗಲಿದೆ. ಅರ್ಧಕ್ಕೆ ಕೈಬಿಡಬೇಡಿ. ಆಸ್ತಿ ಅಥವಾ ಭೂಮಿಯ ವ್‌ಯವಹಾರಗಳಲ್ಲಿ ಸ್ವಲ್ಪ ಗೊಂದಲ ಉಂಟಾಗುವ ಸಾಧ್ಯತೆ ಇರುವುದರಿಂದ ಯೋಚಿಸಿ ಮುಂದುವರಿಯಿರಿ. ಈ ವರ್ಷದ ಸಂಪೂರ್ಣ ಶುಭ ಫಲಗಳಿಗಾಗಿ ದುರ್ಗಾ ಪರಮೇಶ್ವರಿ ದೇವಿಯ ಆರಾಧನೆ ಮಾಡುವುದು ಅತ್ಯಂತ ಉತ್ತಮ ಓಂ ಹ್ರೀಂ ಧೂಂ ದುರ್ಗಾಯೈ ನಮಃ ಎಂಬ ಮಂತ್ರವನ್ನು ಪ್ರತಿನಿತ್ಯ ಪಠಿಸುವುದರಿಂದ ನಿಮ್ಮೆಲ್ಲಾ ಕೆಲಸಗಳಲ್ಲಿ ಏಳಿಗೆ ಕಾಣಬಹುದು.
ವೃಶ್ಚಿಕ ರಾಶಿ :
ಪ್ರಸ್ತುತ ಪಂಚಮ ಶನಿಯ ಪ್ರಭಾವವಿದೆ. ಇದರಿಂದಾಗಿ ಮಕ್ಕಳೊಂದಿಗೆ ಮನಸ್ತಾಪಗಳು ಉಂಟಾಗಬಹುದು ಅಥವಾ ಅವರು ನಿಮ್ಮ ಮಾತಿಗೆ ವಿರುದ್ಧವಾಗಿ ನಡೆಯುವ ಸಾಧ್ಯತೆ ಇದೆ. ಜೂನ್ ನಂತರ ಗುರುವು ಭಾಗ್ಯಭಾವಕ್ಕೆ ಸಂಚಾರ ಮಾಡುವುದರಿಂದ ಜೀವನದಲ್ಲಿ ಬೆಳಕಿನ ಹಾದಿ ಕಾಣಿಸಲಿದೆ. ಉದ್ಯೋಗದಲ್ಲಿ ಬಡ್ತಿ ಮತ್ತು ವರ್ಗಾವಣೆಯಂತಹ ಶುಭ ಬದಲಾವಣೆಗಳನ್ನು ನಿರೀಕ್ಷಿಸಬಹುದು. ನಿಮ್ಮ ಜೀವನದ ಹಾದಿಯನ್ನು ಬದಲಿಸುವಂತಹ ಉತ್ತಮ ಮಾರ್ಗದರ್ಶಕರು ಈ ವರ್ಷ ನಿಮಗೆ ಸಿಗಲಿದ್ದಾರೆ. ಅವರ ಸಲಹೆಯಿಂದ ಮದುವೆ ಅಥವಾ ಆಸ್ತಿ ವಿಚಾರದಲ್ಲಿ ಒಳಿತಾಗಲಿದೆ. ಆಸ್ತಿ ವಿಚಾರದಲ್ಲಿ ತಂದೆ-ತಾಯಿ ಮತ್ತು ಮಕ್ಕಳ ನಡುವೆ ಸಣ್ಣಪುಟ್ಟ ಚಕಮಕಿ ಅಥವಾ ವಾಗ್ವಾದಗಳು ನಡೆಯಬಹುದು. ತಾಯಿಯ ಆರೋಗ್ಯದ ಕಡೆ ಗಮನವಿರಲಿ. ವಾಹನ ಚಾಲನೆ ಮಾಡುವವರು ಅತಿ ವೇಗವಾಗಿ ಹೋಗುವುದನ್ನು ಅಥವಾ ಅವಸರ ಮಾಡುವುದನ್ನು ತಪ್ಪಿಸಬೇಕು. ವಿದ್ಯಾರ್ಥಿಗಳಲ್ಲಿ ಏಕಾಗ್ರತೆಯ ಕೊರತೆ ಕಂಡುಬರಬಹುದು. ಅಡೆತಡೆಗಳು ನಿವಾರಣೆಯಾಗಲು ಹನುಮಂತ ಮತ್ತು ಗುರುಗಳ ಸ್ಮರಣೆ ಮಾಡುವುದು ಅವಶ್ಯಕ. ಪ್ರತಿ ಮಂಗಳವಾರ ಸುಬ್ರಹ್ಮಣ್ಯ ಸ್ವಾಮಿ ದೇವಸ್ಥಾನಕ್ಕೆ ಭೇಟಿ ನೀಡಿ 5 ಅಥವಾ 6 ಪ್ರದಕ್ಷಿಣೆ ಹಾಕುವುದು ನಿಮ ಏಳಿಗೆಗೆ ದಾರಿಯಾಗುತ್ತದೆ.
ಧನುರ್ ರಾಶಿ:
ಅರ್ಧಾಷ್ಟಮ ಶನಿಯ ಪ್ರಭಾವವಿರುವುದರಿಂದ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ರಾಶ್ಯಾಧಿಪತಿ ಗುರುವು ಅಷ್ಟಮ ಭಾವದಲ್ಲಿ ಸಂಚರಿಸಲಿದ್ದಾನೆ. ಇದು ಅನಿರೀಕ್ಷಿತ ಲಾಭಗಳನ್ನು ತಂದುಕೊಡುವ ಸಾಧ್ಯತೆ ಇದೆ. ಅಷ್ಟಮಂ ನಷ್ಟಮಂ ಎಂದರೂ ಉಚ್ಚ ಗುರುವಿನಿಂದ ಅಂದುಕೊಳ್ಳದ ಶುಭ ಕಾರ್ಯಗಳು ಜರಗಲಿವೆ. ವಿದೇಶಕ್ಕೆ ಹೋಗಲು ಬಯಸುವವರಿಗೆ ಈ ವರ್ಷ ಅತ್ಯಂತ ಸುವರ್ಣ ಅವಕಾಶವಿದೆ. ಸಣ್ಣ ಪುಟ್ಟ ಕಾರಣಗಳಿಗಾದರೂ ವಿದೇಶ ಪ್ರಯಾಣ ಮಾಡುವ ಯೋಗ ಕಟ್ಟಿಟ್ಟ ಬುತ್ತಿ. ತಂದೆ-ತಾಯಿಯ ಆರೋಗ್ಯದ ಬಗ್ಗೆ ಹೆಚ್ಚಿನ ಗಮನಹರಿಸಿ. ತಂದೆಯವರಿಗೆ ಕಣ್ಣಿನ ಸಮಸ್ಯೆ ಮತ್ತು ತಾಯಿಯವರಿಗೆ ಕಾಲಿನ ಸಮಸ್ಯೆಗಳು ಕಾಡುವ ಸಾಧ್ಯತೆ ಇದೆ. ಅಣ್ಣ-ತಮಂದಿರ ನಡುವೆ ಸಣ್ಣ ಪುಟ್ಟ ವೈಮನಸ್ಯ ಅಥವಾ ಕಿರಿಕಿರಿ ಉಂಟಾಗಬಹುದು. ದಾಂಪತ್ಯ ಜೀವನ ಲವಲವಿಕೆಯಿಂದ ಕೂಡಿದ್ದು, ಸಂತಾನ ಅಪೇಕ್ಷಿತರಿಗೆ ಶುಭ ಸುದ್ದಿ ಸಿಗುವ ಸಾಧ್ಯತೆ ಇದೆ. ಸ್ವಂತ ಉದ್ಯೋಗ ಅಥವಾ ಸೇವಾವೃತ್ತಿಯಲ್ಲಿರುವವರಿಗೆ ಈ ವರ್ಷ ಉತ್ತಮ ಫಲಿತಾಂಶಗಳು ಲಭಿಸಲಿವೆ. ಅಡೆತಡೆಗಳು ನಿವಾರಣೆಯಾಗಿ ಸಂಪೂರ್ಣ ಶುಭ ಫಲಗಳು ಸಿಗಲು ಕಾಲಭೈರವ ಮತ್ತು ಗುರುಗಳ ಸರಣೆ ಮಾಡುವುದು ಅತ್ಯಂತ ಶ್ರೇಯಸ್ಕರ.
ಮಕರ ರಾಶಿ :
ಜೂನ್ ನಂತರ ಗುರುವು ಸಪ್ತಮ ಭಾವಕ್ಕೆ ಪ್ರವೇಶಿಸುವುದರಿಂದ ಹಣಕಾಸಿನ ವಿಚಾರದಲ್ಲಿ ಸುಧಾರಣೆ ಮತ್ತು ಮಾನಸಿಕ ಲವಲವಿಕೆ ಕಂಡುಬರಲಿದೆ. ಅಲ್ಲಿಯವರೆಗೆ ಅಂದರೆ ಮುಂದಿನ 3-4 ತಿಂಗಳು ತಾಳೆಯಿಂದ ಇರುವುದು ಒಳಿತು. ಕೆಲಸ ಕಾರ್ಯಗಳಲ್ಲಿ ಸ್ವಲ್ಪ ನಿಧಾನಗತಿ ಅನುಭವಕ್ಕೆ ಬರಬಹುದು. ರಾತ್ರಿ ವೇಳೆ ನಿದ್ರಾಹೀನತೆ ಮತ್ತು ಬೆಳಗಿನ ಜಾವ ಅತಿಯಾದ ನಿದ್ರೆ ಬರುವ ಸಾಧ್ಯತೆ ಇರುತ್ತದೆ. ತೃತೀಯ ಭಾವದಲ್ಲಿ ಶನಿ ಇರುವುದರಿಂದ ಅಣ್ಣ-ತಮಂದಿರ ನಡುವೆ ಆಸ್ತಿ ವಿಚಾರವಾಗಿ ಅಥವಾ ಸಣ್ಣಪುಟ್ಟ ಕಾರಣಗಳಿಗೆ ಮನಸ್ತಾಪ, ವ್ಯಾಜ್ಯಗಳು ನಡೆಯುವ ಸಂಭವವಿದೆ. ಪೊಲೀಸ್, ಎಂಜಿನಿಯರಿಂಗ್ ಮತ್ತು ಕಬ್ಬಿಣದ ಕೆಲಸಗಳಲ್ಲಿ ತೊಡಗಿರುವವರಿಗೆ ಅತ್ಯಂತ ಶುಭಫಲಗಳಿವೆ. ಹೊಸ ಕೆಲಸಕ್ಕೆ ಅರ್ಜಿ ಹಾಕಿರುವವರಿಗೆ ಸಕಾರಾತ್ಮಕ ಫಲಿತಾಂಶ ದೊರೆಯಲಿದೆ ಹಾಗೂ ಪ್ರಮೋಷನ್ ಸಿಗುವ ಸಾಧ್ಯತೆ ಇದೆ. ವಿದ್ಯಾರ್ಥಿಗಳಲ್ಲಿ ಏಕಾಗ್ರತೆ ಹೆಚ್ಚಾಗಲಿದ್ದು, ಓದಿನಲ್ಲಿ ಪ್ರಗತಿ ಸಾಧಿಸಲಿದ್ದಾರೆ. ದೂರದ ಪ್ರಯಾಣ ಮತ್ತು ದೈವದರ್ಶನ ಭಾಗ್ಯ ಈ ವರ್ಷ ಕೂಡಿಬರಲಿದೆ. ಸಮಸ್ಯೆಗಳ ನಿವಾರಣೆಗಾಗಿ ಮತ್ತು ವಿಶೇಷ ಶುಭ ಫಲಗಳಿಗಾಗಿ ಪ್ರತಿನಿತ್ಯ ಹನುಮಂತ ಮತ್ತು ಗುರುಗಳ ಸ್ಮರಣೆ ಮಾಡುವುದು ಶ್ರೇಯಸ್ಕರ.
ಕುಂಭ ರಾಶಿ :
ಸಾಡೇಸಾತಿಯ ಪ್ರಭಾವವಿರುವುದರಿಂದ ಕೆಲಸ ಕಾರ್ಯಗಳಲ್ಲಿ ಸ್ವಲ್ಪ ವಿಳಂಬ ಮತ್ತು ಅಡೆತಡೆಗಳು ಕಂಡುಬರಬಹುದು. ಸಾಡೇಸಾತಿ ಸಂಪೂರ್ಣವಾಗಿ ಮುಗಿಯದಿದ್ದರೂ, ಶೇ. 80ರಷ್ಟು ಶುಭ ಫಲಗಳನ್ನು ನಿರೀಕ್ಷಿಸಬಹುದು. ಈ ವರ್ಷ ಆಹಾರ ಮತ್ತು ಜೀವನಶೈಲಿಯ ಕಡೆಗೆ ಹೆಚ್ಚಿನ ಗಮನ ನೀಡುವುದು ಅಗತ್ಯ. ಮಕ್ಕಳು ಹೇಳದೆ ಕೇಳದೆ ಸ್ವತಂತ್ರವಾಗಿ ನಿರ್ಧಾರ ತೆಗೆದುಕೊಳ್ಳುವುದು ಅಥವಾ ಕಾಲಹರಣ ಮಾಡುವುದು ಕಂಡುಬರಬಹುದು. ಆದರೆ ಗುರುವಿನ ದೃಷ್ಟಿ ಇರುವುದರಿಂದ ಪೋಷಕರು ಪ್ರಾಮಾಣಿಕವಾಗಿ ಪ್ರಯತ್ನಿಸಿದರೆ ಮಕ್ಕಳಲ್ಲಿ ಸುಧಾರಣೆ ಕಂಡುಬರುತ್ತದೆ. ಸರ್ಕಾರಿ ಉದ್ಯೋಗಿಗಳಿಗೆ ವೃತ್ತಿಯಲ್ಲಿ ಸಕಾರಾತಕ ಬದಲಾವಣೆಗಳು ಅಥವಾ ವರ್ಗಾವಣೆಯಾಗುವ ಸಾಧ್ಯತೆ ಇದೆ. ಹಣಕಾಸಿನ ವಿಚಾರದಲ್ಲಿ ಅಭಿವೃದ್ಧ್ಧಿ ಕಂಡುಬರಲಿದೆ. ಕೌಟುಂಬಿಕ ಜೀವನ ಸಮಾಧಾನಕರವಾಗಿದ್ದು, ತಂದೆ-ತಾಯಿಗಳ ಆರೋಗ್ಯದಲ್ಲಿ ಚೇತರಿಕೆ ಕಾಣಲಿದ್ದೀರಿ. ದಾಂಪತ್ಯ ಜೀವನದಲ್ಲಿ ಶುಭ ಫಲಗಳು ಲಭಿಸಲಿವೆ. ರಾಹು ಮತ್ತು ಸಾಡೇಸಾತಿಯ ಪ್ರಭಾವದಿಂದ ಉಂಟಾಗುವ ಗೊಂದಲಗಳನ್ನು ನಿವಾರಿಸಿಕೊಳ್ಳಲು ಸಮಾಧಾನದಿಂದ ಇರುವುದು ಅಗತ್ಯ. ಅಭಿವೃದ್ಧಿ ಮತ್ತು ಅಡೆತಡೆಗಳ ನಿವಾರಣೆಗಾಗಿ ಕಾಲಭೈರವ ಹಾಗೂ ಹನುಮಂತನ ಸ್ಮರಣೆ ಮಾಡುವುದು ಒಳ್ಳೆಯದು.
ಮೀನ ರಾಶಿ :
ಪ್ರಸ್ತುತ ಜನ್ಮ ಶನಿಯ ಸಾಡೇಸಾತಿ ಪ್ರಭಾವವಿರುವುದರಿಂದ ಆರೋಗ್ಯದಲ್ಲಿ ಸ್ವಲ್ಪ ಏರುಪೇರಾಗಬಹುದು. ಶನಿ ಮಹಾತರು ಜನ ರಾಶಿಯಲ್ಲಿ ಇರುವುದರಿಂದ ಕೆಲಸಗಳಲ್ಲಿ ಅಡೆತಡೆಗಳು ಎದುರಾಗಬಹುದು. ಸಾಡೇಸಾತಿ ಎಂದರೆ ಪರಸ್ಥಳ ವಾಸ ಎಂದೂ ಅರ್ಥ. ವ್ಯಯಭಾವದಲ್ಲಿ ರಾಹುವಿನ ಸಂಚಾರವಿರುವುದರಿಂದ ವಿದೇಶಕ್ಕೆ ಹೋಗಲು ಬಯಸುವವರಿಗೆ ಸಂಗಾತಿ, ಸ್ನೇಹಿತರು ಅಥವಾ ಸಹೋದ್ಯೋಗಿಗಳೊಂದಿಗೆ ಸಣ್ಣಪುಟ್ಟ ಕಿರಿಕಿರಿಗಳು ಉಂಟಾಗಬಹುದು. ಮಾತಿಗೆ ಮಾತು ಬೆಳೆಸದೆ ಮೌನವಾಗಿದ್ದರೆ ಗಲಾಟೆಗಳನ್ನು ತಪ್ಪಿಸಬಹುದು. ಉದ್ಯೋಗದಲ್ಲಿ ಬಡ್ತಿ ಮತ್ತು ಉತ್ತರೋತ್ತರ ಅಭಿವೃದ್ಧಿ ಕಾಣುವ ಸಾಧ್ಯತೆಗಳಿವೆ. ಹಣಕಾಸಿನ ವಿಚಾರದಲ್ಲಿ ಸಂಪೂರ್ಣ ಶುಭ ಫಲಗಳು ದೊರೆಯಲಿದ್ದು, ಆರ್ಥಿಕ ಸ್ಥಿತಿ ಉತ್ತಮವಾಗಿರಲಿದೆ. ಈ ವರ್ಷ ವಿಶಾಲವಾದ ಆಲೋಚನೆಗಳನ್ನು ಹೊಂದಿದ್ದು, ಎಲ್ಲವನ್ನೂ ಸಮತೋಲನದಿಂದ ತೂಗುವ ಶಕ್ತಿ ಪಡೆಯಲಿದ್ದಾರೆ. ಸಾಡೇಸಾತಿಯ ದೋಷ ನಿವಾರಣೆಗಾಗಿ ಹನುಮಂತ ಮತ್ತು ಪರಮೇಶ್ವರನ ಸ್ಮರಣೆ ಮಾಡುವುದು ಅತ್ಯಂತ ಅವಶ್ಯಕ. ಜೀವನದಲ್ಲಿ ಪ್ರಾಮಾಣಿಕತೆ ಕಾಪಾಡಿಕೊಳ್ಳುವುದು ಈ ವರ್ಷದ ಯಶಸ್ಸಿಗೆ ಅತಿ ಮುಖ್ಯವಾದ ಸೂತ್ರವಾಗಿದೆ.
