Sunday, April 19, 2026
Homeರಾಜಕೀಯದಾವಣಗೆರೆ ದಕ್ಷಿಣ ಟಿಕೆಟ್ ಫೈಟ್ : ಜಮೀರ್‌ ಬ್ಲಾಕ್‌ಮೆಲ್‌ಗೆ ಕ್ಯಾರೇ ಎನ್ನದ ಹೈಕಮಾಂಡ್‌

ದಾವಣಗೆರೆ ದಕ್ಷಿಣ ಟಿಕೆಟ್ ಫೈಟ್ : ಜಮೀರ್‌ ಬ್ಲಾಕ್‌ಮೆಲ್‌ಗೆ ಕ್ಯಾರೇ ಎನ್ನದ ಹೈಕಮಾಂಡ್‌

Davangere South Ticket Fight: Jamir Ahmed Blackmail fail

ಬೆಂಗಳೂರು, ಮಾ.22- ವಿಧಾನಸಭೆ ಉಪಚುನಾವಣೆಯ ಟಿಕೆಟ್‌ ಹಂಚಿಕೆಯ ಸಂಬಂಧಪಟ್ಟಂತೆ ವಸತಿ ಸಚಿವ ಜಮೀರ್‌ ಅಹಮದ್‌ಖಾನ್‌ಗೆ ತೀವ್ರ ಹಿನ್ನಡೆಯಾಗಿದ್ದು, ಸಂಪುಟದಲ್ಲಿ ಉಳಿಯಬೇಕೆ? ಅಥವಾ ನಿರ್ಗಮಿಸ ಬೇಕೆ ಎಂಬ ಸಂದಿಗ್ಧತೆ ನಿರ್ಮಾಣವಾಗಿದೆ.

ಅಲ್ಪಸಂಖ್ಯಾತ ಸಮುದಾಯದ ಅಭ್ಯರ್ಥಿಗೆ ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಲ್ಲಿ ಸ್ಪರ್ಧಿಸಲು ಅವಕಾಶ ನೀಡದೇ ಇದ್ದರೆ ತಾವು ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುವುದಾಗಿ ಜಮೀರ್‌ ಅಹಮದ್‌ಖಾನ್‌ ಬ್ಲಾಕ್‌ಮೆಲ್‌ ಮಾಡಿದ್ದರು. ಆದರೆ ಅದಕ್ಕೆ ತಲೆಕೆಡಿಸಿಕೊಳ್ಳದೆ ಹೈಕಮಾಂಡ್‌ ಶ್ಯಾಮನೂರು ಶಿವಶಂಕರಪ್ಪ ಕುಟುಂಬಕ್ಕೆ ಮಣೆ ಹಾಕಿದೆ.

ವಿಧಾನಸಭೆಯ ಉಪಚುನಾವಣೆಗೆ ಅಭ್ಯರ್ಥಿಗಳ ಆಯ್ಕೆ ಇಂದು ಅಧಿಕೃತವಾಗಿ ಘೋಷಣೆಯಾಗಿದ್ದು, ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಕ್ಕೆ ಶ್ಯಾಮನೂರು ಕುಟುಂಬದ ಮೂರನೇ ತಲೆಮಾರು ಹಾಗೂ ಸಚಿವ ಎಸ್‌‍.ಎಸ್‌‍.ಮಲ್ಲಿಕಾರ್ಜುನ್‌ ಅವರ ಪುತ್ರ ಸಮರ್ಥ್‌ ಅವರಿಗೆ ಟಿಕೆಟ್‌ ದೊರೆತ್ತಿದೆ. ಜೊತೆಗೆ ಬಾಗಲಕೋಟೆ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ಮಾಜಿ ಸಚಿವ ದಿ.ಎಚ್‌.ವೈ.ಮೇಟಿ ಅವರ ಪುತ್ರ ಉಮೇಶ್‌ ಮೇಟಿ ಕಣಕ್ಕಿಳಿಯುತ್ತಿದ್ದಾರೆ.

ಅಲ್ಪಸಂಖ್ಯಾತ ಅಭ್ಯರ್ಥಿಗೆ ದಾವಣಗೆರೆ ದಕ್ಷಿಣ ಕ್ರೇತ್ರದಲ್ಲಿ ಸ್ಪರ್ಧಿಸಲು ಟಿಕೆಟ್‌ ಕೊಡಿಸಬೇಕೆಂಬ ಹಿನ್ನೆಲೆಯಲ್ಲಿ ಜಮೀರ್‌ ಅಹಮದ್‌ಖಾನ್‌ ಅನುಸರಿಸಿದ ಒತ್ತಡದ ತಂತ್ರಗಳು ವಿಫಲವಾಗಿವೆ. ಕಾಂಗ್ರೆಸ್‌‍ನಲ್ಲಿ ಜಮೀರ್‌ ಅಹಮದ್‌ ಖಾನ್‌ ಅಲ್ಪಸಂಖ್ಯಾತ ಸಮುದಾಯದ ಪ್ರಭಾವಿ ನಾಯಕರಾಗಿ ಗುರುತಿಸಿಕೊಂಡಿದ್ದಾರೆ.

ಒಂದು ಕಾಲದಲ್ಲಿ ಜಾಫರ್‌ ಶರೀಫ್‌, ರೋಷನ್‌ಬೇಗ್‌ ಅವರುಗಳು ಕಾಂಗ್ರೆಸ್‌‍ನ ಮುಂಚೂಣಿ ನಾಯಕರಾಗಿದ್ದು, ಸಿದ್ದರಾಮಯ್ಯ ಅವರ ಬೆಂಬಲದೊಂದಿಗೆ ಅವರನ್ನೆಲ್ಲಾ ನೇಪಥ್ಯಕ್ಕೆ ಸರಿಸಿದ ಜಮೀರ್‌ ಅಹಮದ್‌ಖಾನ್‌, ತಾವು ಅಲ್ಪಸಂಖ್ಯಾತ ಸಮುದಾಯದಿಂದ ಕಾಂಗ್ರೆಸ್‌‍ನಲ್ಲಿ ಅಗ್ರಗಣ್ಯ ನಾಯಕರೆಂದು ಬಿಂಬಿಸಿಕೊಂಡಿದ್ದರು.

ಸದಾಕಾಲ ಸಿದ್ದರಾಮಯ್ಯ ಅವರ ಪರವಾಗಿ ಬ್ಯಾಟಿಂಗ್‌ ಮಾಡುವ ಮೂಲಕ ಡಿ.ಕೆ.ಶಿವಕುಮಾರ್‌ ಅವರ ಕೆಂಗಣ್ಣಿಗೆ ಗುರಿಯಾಗಿದ್ದರು. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಜಮೀರ್‌ ಅಹಮದ್‌ಖಾನ್‌ ಅವರ ಕಟ್ಟಾ ಬೆಂಬಲಿಗರಾಗಿದ್ದ ಆಗಿನ ಹಾಲಿ ಕಾಂಗ್ರೆಸ್‌‍ನ ಶಾಸಕ ಅಖಂಡ ಶ್ರೀನಿವಾಸ್‌‍ ಅವರಿಗೆ ಟಿಕೆಟ್‌ ನೀಡದೆ ಡಿ.ಕೆ.ಶಿವಕುಮಾರ್‌ ಚೆಕ್‌ಮೆಟ್‌ ಇಟ್ಟಿದ್ದರು. ಅನಂತರ ಕೂಡ ಜಮೀರ್‌ಅಹಮದ್‌ ಖಾನ್‌ ಪದೇಪದೇ ಸಿದ್ದರಾಮಯ್ಯ ಅವರ ಪರವಾಗಿ ವಕಾಲತು ವಹಿಸುವ ಮೂಲಕ ಅಧಿಕಾರ ಹಂಚಿಕೆಯ ವಿಚಾರವಾಗಿ ಹೈಕಮಾಂಡ್‌ ಆದೇಶಕ್ಕೆ ವಿರುದ್ಧವಾಗಿ ಗೊಂದಲ ಮೂಡಿಸುವ ಪ್ರಯತ್ನ ಮಾಡುತ್ತಿದ್ದರು.

ಅಲ್ಪಸಂಖ್ಯಾತ ನಾಯಕರೊಂದಿಗೆ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ್‌ ಖರ್ಗೆ ಅವರನ್ನು ಭೇಟಿ ಮಾಡುವ ಮೂಲಕ ಪ್ರತ್ಯೇಕವಾಗಿ ತಮದೇ ಆದ ತಂತ್ರಗಾರಿಕೆಯನ್ನು ಅನುಸರಿಸುತ್ತಿದ್ದರು. ಮಾಜಿ ಮುಖ್ಯಮಂತ್ರಿ ಬಸವರಾಜ ಬೊಮಾಯಿ ಅವರು ಸಂಸತ್‌ ಸದಸ್ಯರಾದ ಬಳಿಕ ತೆರವಾದ ಶಿಗ್ಗಾಂವಿ ಕ್ಷೇತ್ರಕ್ಕೆ ನಡೆದ ಉಪಚುನಾವಣೆಯಲ್ಲಿ ಅಲ್ಪಸಂಖ್ಯಾತ ಅಭ್ಯರ್ಥಿಗೆೆ ಟಿಕೆಟ್‌ ಕೊಡಿಸುವ ಹಾಗೂ ಅವರನ್ನು ಗೆಲ್ಲಿಸಿಕೊಂಡು ಬರುವಲ್ಲಿ ಜಮೀರ್‌ ಯಶಸ್ವಿಯಾಗಿದ್ದರು. ಅನಂತರ ಮತ್ತೆ ಒಂದಷ್ಟು ದಿನ ಮುಂಚೂಣಿಯಲ್ಲಿದ್ದ ಜಮೀರ್‌, ಸಿದ್ದರಾಮಯ್ಯ 5 ವರ್ಷ ಮುಖ್ಯಮಂತ್ರಿಯಗಿರುತ್ತಾರೆ ಎಂದು ಪದೇ ಪದೇ ಹೇಳುವ ಮೂಲಕ ಡಿ.ಕೆ.ಶಿವಕುಮಾರ್‌ ಅವರ ಅಸಹನೆಗೆ ಕಾರಣವಾಗಿದ್ದರು.

ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರದಿಂದ ಸ್ಪರ್ಧಿಸಲು ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡಬೇಕೆಂದು ಶ್ಯಾಮನೂರು ಶಿವಶಂಕರಪ್ಪ ಅವರ ನಿಧನದ ಬಳಿಕ ಜಮೀರ್‌ ಬಲವಾಗಿ ಪ್ರತಿಪಾದಿಸುತ್ತಿದ್ದರು.

ಆದರೆ ತೆರವಾಗಿರುವ ಎರಡು ಕ್ಷೆತ್ರಗಳಲ್ಲಿ ಬಾಗಲಕೋಟೆ ಅಭ್ಯರ್ಥಿಯ ಆಯ್ಕೆ ಜವಾಬ್ದಾರಿಯನ್ನು ಸಿದ್ದರಾಮಯ್ಯ ಅವರಿಗೆ ಬಿಟ್ಟುಕೊಡಲಾಗಿತ್ತು. ದಾವಣಗೆರೆ ದಕ್ಷಿಣ ಕ್ಷೇತ್ರಕ್ಕೆ ಡಿ.ಕೆ.ಶಿವಕುಮಾರ್‌ ಜವಬ್ದಾರಿ ವಹಿಸಿಕೊಂಡಿದ್ದರು. ಪಕ್ಷದ ನಿಷ್ಠಾವಂತ ನಾಯಕರಾಗಿದ್ದ ಶ್ಯಾಮನೂರು ಶಿವಶಂಕರಪ್ಪ ಅವರ ಕುಟುಂಬಕ್ಕೆ ಮಣೆ ಹಾಕಿದ್ದಾರೆ. ಈ ಮೂಲಕ ಅಲ್ಪಸಂಖ್ಯಾತ ನಾಯಕರ ತಂಡ ಕಟ್ಟಿಕೊಂಡು ತಿರುಗಾಡುತ್ತಿದ್ದ ಜಮೀರ್‌ ಅವರಿಗೆ ಮತ್ತೊಮೆ ಚೆಕ್‌ಮೇಟ್‌ ಇಟ್ಟಿದ್ದಾರೆ.

ಅಲ್ಪಸಂಖ್ಯಾತರಿಗೆ ಟಿಕೆಟ್‌ ನೀಡದೇ ಇದ್ದರೆ ಕಾಂಗ್ರೆಸ್‌‍ಗೆ ಮುಸ್ಲಿಮರ ವೋಟ್‌ಗಳು ಬರುವುದಿಲ್ಲ. ಎರಡು ಕ್ಷೇತ್ರದಲ್ಲೂ ಕಾಂಗ್ರೆಸ್‌‍ ಸೋಲಲಿದೆ ಎಂದು ಜಮೀರ್‌ ಎಚ್ಚರಿಸಿದ್ದರು. ಅದು ಸಾಲದು ಎಂಬಂತೆ ಖುದ್ದು ರಾಜೀನಾಮೆ ಬೆದರಿಕೆ ಹಾಕಿದ್ದರು. ಆದರೆ ಕಾಂಗ್ರೆಸ್‌‍ ಹೈಕಮಾಂಡ್‌ ಡಿ.ಕೆ.ಶಿವಕುಮಾರ್‌ ಅವರ ಪ್ರಭಾವದಿಂದ ಅದ್ಯಾವುದಕ್ಕೂ ತಲೆ ಕೆಡಿಸಿಕೊಂಡಂತೆ ಕಂಡು ಬರುತ್ತಿಲ್ಲ. ಕೊನೆಗೆ ಸಮರ್ಥ್‌ಗೆ ಮಲ್ಲಿಕಾರ್ಜುನ್‌ಗೆ ಟಿಕೆಟ್‌ ನೀಡಿದೆ. ಅತ್ತ ಬಾಗಲಕೋಟೆಯಲ್ಲಿ ಎಚ್‌.ವೈ.ಮೇಟಿಯವರ ಅವರ ಪುತ್ರ ಉಮೇಶ್‌ ಮೇಟಿಗೆ ಟಿಕೆಟ್‌ ನೀಡಲಾಗಿದೆ.

RELATED ARTICLES

Latest News