ಕೈರೋ,ಏ.10-ಸೂಡಾನ್‌ನ ದಾರ್ಫೂರ್ ಪ್ರದೇಶದಲ್ಲಿ ಮದುವೆ ಸಮಾರಂಭವನ್ನು ಗುರಿಯಾಗಿಸಿಕೊಂಡಿದ್ದು ಡ್ರೋನ್ ದಾಳಿ ನಡೆದು ಕನಿಷ್ಠ 30 ನಾಗರಿಕರು ಸಾವನ್ನಪ್ಪಿದ್ದಾರೆ.
ಉತ್ತರ ದಾರ್ಫೂರ್‌ನ ಕುತುಮ್ ಪಟ್ಟಣದಲ್ಲಿ ಈ ಘಟನೆ ನಡೆದಿದೆ. ದೇಶದಲ್ಲಿ ಸುಮಾರು ಮೂರು ವರ್ಷಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ 40,000ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ಯುಎನ್ ಅಂದಾಜಿಸಿದೆ.ದಾಳಿಗೆ ಸುಡಾನ್ ಸಶಸ್ತ್ರ ಪಡೆಗಳನ್ನು ಹೊಣೆಗಾರರೆಂದು ಸಾಮಾಜಿಕ ಜಾಲತಾಣಗಳಲ್ಲಿ ಆರೋಪಿಸಿವೆ.
ನಾಗರಿಕರ ಮೇಲೆ ನಡೆದ ಈ ದಾಳಿ ಹಾಗೂ ಇತರ ಎಲ್ಲಾ ದಾಳಿಗಳನ್ನು ನಾವು ಖಂಡಿಸುತ್ತೇವೆ ಎಂದು ದುಜಾರಿಕ್ ಹೇಳಿದ್ದಾರೆ.ಈ ಕುರಿತು ಸುಡಾನ್ ಸೇನೆ ತಕ್ಷಣ ಪ್ರತಿಕ್ರಿಯೆ ನೀಡಿಲ್ಲ.
ಎಮರ್ಜೆನ್ಸಿ ಲಾಯರ್ಸ್ ಸಂಸ್ಥೆಯ ಪ್ರಕಾರ, ಮಾರ್ಚ್‌ನಿಂದ ದಕ್ಷಿಣ ಕೊಡೊಫಾನ್, ಬ್ಲೂ ನೈಲ್, ಪೂರ್ವ, ಕೇಂದ್ರ ಮತ್ತು ದಕ್ಷಿಣ ದಾರ್ಫೂರ್ ಪ್ರದೇಶಗಳಲ್ಲಿ ನಡೆಯುತ್ತಿರುವ ನಿರಂತರ ಡ್ರೋನ್ ದಾಳಿಗಳಿಂದ ಹೆಚ್ಚಿನ ಜನರು ಸ್ಥಳಾಂತರಗೊಳ್ಳುತ್ತಿದ್ದಾರೆ.ಕಳೆದ ವಾರ ದೇಶದ ದಕ್ಷಿಣ-ಮಧ್ಯ ಭಾಗದ ಆಸ್ಪತ್ರೆಯ ಮೇಲೂ ಡ್ರೋನ್ ದಾಳಿ ನಡೆದಿದ್ದು, ಕನಿಷ್ಠ 10 ಮಂದಿ ಸಾವನ್ನಪ್ಪಿದ್ದರು.
