Tuesday, April 14, 2026
Homeಅಂತಾರಾಷ್ಟ್ರೀಯಟ್ರಂಪ್ ಚೀನಾ ಭೇಟಿಗೂ ಮುನ್ನ ಬೀಜಿಂಗ್‌ನಲ್ಲಿ ತೈವಾನ್ ವಿಪಕ್ಷ ನಾಯಕಿ ಭೇಟಿ ಮಾಡಿದ ಶಿ ಜಿನ್‌ಪಿಂಗ್‌

ಟ್ರಂಪ್ ಚೀನಾ ಭೇಟಿಗೂ ಮುನ್ನ ಬೀಜಿಂಗ್‌ನಲ್ಲಿ ತೈವಾನ್ ವಿಪಕ್ಷ ನಾಯಕಿ ಭೇಟಿ ಮಾಡಿದ ಶಿ ಜಿನ್‌ಪಿಂಗ್‌

Cheng Li-wun: Taiwan opposition leader meets Xi Jinping in Beijing

ಬೀಜಿಂಗ್‌,ಏ.10-ಮುಂದಿನ ತಿಂಗಳು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರ ಚೀನಾ ಭೇಟಿಗೆ ಮುನ್ನ ಚೀನಾ ಅಧ್ಯಕ್ಷ ಕ್ಸಿಜಿನ್‌ ಪಿಂಗ್‌‍ ಅವರು ಬೀಜಿಂಗ್‌ನಲ್ಲಿ ತೈವಾನ್‌ನ ವಿರೋಧ ಪಕ್ಷದ ನಾಯಕಿ ಚೆಂಗ್‌ ಲಿ-ವುನ್‌ ಅವರನ್ನು ಭೇಟಿ ಮಾಡಿದ್ದಾರೆ.

ಚೆಂಗ್‌ ಅವರು ಕಳೆದ ದಶಕದಲ್ಲಿ ಚೀನಾದ ಮುಖ್ಯಭೂಮಿಗೆ ವಾರಪೂರ್ತಿ ಭೇಟಿ ನೀಡಿದ ಮೊದಲ ಕುವೊಮಿಂಟಾಂಗ್‌ ಪಕ್ಷದ ಅಧ್ಯಕ್ಷರಾಗಿದ್ದಾರೆ. ಅವರ ಕ್ಸಿಜಿನ್‌ ಪಿಂಗ್‌‍ ಮತ್ತು ಶಿಜಿನ್‌ಪಿಂಗ್‌‍ ಅವರ ಭೇಟಿಯನ್ನು ಜಾಗತಿಕವಾಗಿ ಗಮನಿಸಲಾಗುತ್ತಿದೆ.
ಚೀನಾ ತೈವಾನ್‌ ತನ್ನ ಭಾಗವೆಂದು ಹೇಳಿಕೊಂಡಿದ್ದು, ಅದನ್ನು ತನ್ನ ವಶಕ್ಕೆ ಪಡೆಯಲು ಪ್ರತಿಜ್ಞೆ ಮಾಡಿದೆ.

ಚೀನಾ ತೈವಾನ್‌ನ ಆಡಳಿತ ಪಕ್ಷವಾದ ಅನ್ನು ಪ್ರತ್ಯೇಕತಾವಾದಿ ಎಂದು ಕರೆಯುತ್ತಿದ್ದು, ಚೀನಾದೊಂದಿಗೆ ಹತ್ತಿರದ ಸಂಬಂಧವನ್ನು ಬೆಂಬಲಿಸುವ ಗೆ ಪರೋಕ್ಷ ಬೆಂಬಲ ನೀಡುತ್ತದೆ.ಇದರ ವಿರುದ್ಧವಾಗಿ ಡೆಮಾಕ್ರಟಿಕ್‌ ಪ್ರೋಗ್ರೆಸ್ಸಿವ್‌ ಪಾರ್ಟಿ ಚೀನಾದ ಪ್ರಯತ್ನಗಳನ್ನು ತೀವ್ರವಾಗಿ ವಿರೋಧಿಸುತ್ತಿದ್ದು, ತೈವಾನ್‌ ತನ್ನ ಸ್ವತಂತ್ರ ಗುರುತನ್ನು ಉಳಿಸಿಕೊಳ್ಳಬೇಕು ಎಂದು ಒತ್ತಾಯಿಸುತ್ತದೆ.

ಬೀಜಿಂಗ್‌ಗೆ ಹೊರಡುವ ಮುನ್ನ ಚೆಂಗ್‌ ಅವರು ಈ ಭೇಟಿಯನ್ನು ಶಾಂತಿಯ ಪ್ರಯಾಣ ಎಂದು ಕರೆದು, ತೈವಾನ್‌ ಸಮುದ್ರಸಂಧಿಯ ಎರಡೂ ಬದಿಗಳು ಸಂವಾದ ಮತ್ತು ಸಂಪರ್ಕದ ಮೂಲಕ ತಮ ಭಿನ್ನಾಭಿಪ್ರಾಯಗಳನ್ನು ಪರಿಹರಿಸಬೇಕು ಎಂದು ಚೆಂಗ್‌ ಲಿ-ವುನ್‌ ಹೇಳಿದರು.

ಅಂತರರಾಷ್ಟ್ರೀಯ ಪರಿಸ್ಥಿತಿ ಅಸ್ಥಿರವಾಗಿದೆ, ಸಂಘರ್ಷಗಳು ಹೆಚ್ಚುತ್ತಿವೆ ಮತ್ತು ಜನರಲ್ಲಿ ಆತಂಕವೂ ಹೆಚ್ಚುತ್ತಿದೆ. ತೈವಾನ್‌ ಸಮುದ್ರಸಂಧಿಯನ್ನು ವಿಶ್ವದ ಅತ್ಯಂತ ಅಪಾಯಕಾರಿ ಪ್ರದೇಶಗಳಲ್ಲಿ ಒಂದೆಂದು ಪರಿಗಣಿಸಲಾಗಿದೆ. ಆದ್ದರಿಂದ, ಸಮುದ್ರಸಂಧಿ ಸುರಕ್ಷಿತವಾಗಿದ್ದರೆ ವಿಶ್ವವೂ ಸುರಕ್ಷಿತವಾಗಿರುತ್ತದೆ ಎಂದು ಅವರು ಹೇಳಿದರು.

ಚೆಂಗ್‌ ಅವರ ಈ ಭೇಟಿ ಮಹತ್ವದ್ದಾಗಿದೆ, ಏಕೆಂದರೆ ಇದು ಮೇ 14-15ರಂದು ನಡೆಯಲಿರುವ ಟ್ರಂಪ್‌ ಅವರ ಬೀಜಿಂಗ್‌ ಪ್ರವಾಸದ ಮುನ್ನ ನಡೆದಿದೆ. ಆ ವೇಳೆ ತೈವಾನ್‌ ವಿಷಯವು ಅವರ ಮತ್ತು ಶಿ ಅವರ ಮಾತುಕತೆಯಲ್ಲಿ ಪ್ರಮುಖವಾಗಲಿದೆ. ಅಮೆರಿಕಾ ತೈವಾನ್‌ಗೆ ಸುಮಾರು 11 ಬಿಲಿಯನ್‌ ಡಾಲರ್‌ ಮೌಲ್ಯದ ಶಸ್ತ್ರಾಸ್ತ್ರಗಳನ್ನು ಮಾರಾಟ ಮಾಡಲು ಯೋಜಿಸಿದೆ, ಇದು ಇದುವರೆಗೆ ಅತ್ಯಂತ ದೊಡ್ಡ ಪ್ಯಾಕೇಜ್‌ ಆಗಿದೆ
ಈ ಒಪ್ಪಂದದಲ್ಲಿ ರಾಕೆಟ್‌ ವ್ಯವಸ್ಥೆಗಳು, ಆಂಟಿ-ಟ್ಯಾಂಕ್‌ ಕ್ಷಿಪಣಿಗಳು, ಆಂಟಿ-ಆರ್ಮರ್‌ ಕ್ಷಿಪಣಿಗಳು, ಲೋಯಿಟರಿಂಗ್‌ ಡ್ರೋನ್‌ಗಳು, ಹೌಟ್ಸರ್‌ ಗನ್‌ಗಳು, ಸೈನಿಕ ಸಾಫ್ಟ್ ವೇರ್‌ ಹಾಗೂ ಇತರ ಉಪಕರಣಗಳ ಭಾಗಗಳು ಸೇರಿವೆ.

ಚೀನಾ ಈ ಒಪ್ಪಂದವನ್ನು ದೃಢವಾಗಿ ವಿರೋಧಿಸುತ್ತೇವೆ ಮತ್ತು ಖಂಡಿಸುತ್ತೇವೆಎಂದು ಹೇಳಿದೆ.ಇನ್ನೊಂದೆಡೆ, ಈ ಒಪ್ಪಂದವನ್ನು ಬಳಸಿಕೊಳ್ಳಲು ತೈವಾನ್‌ ಸರ್ಕಾರ ಈ ವರ್ಷದ ರಕ್ಷಣಾ ಬಜೆಟ್‌ ಅನ್ನು ಸಂಸತ್ತಿನಲ್ಲಿ ಅಂಗೀಕರಿಸಲು ಕಷ್ಟ ಅನುಭವಿಸುತ್ತಿದೆ, ಏಕೆಂದರೆ ಪ್ರತಿಪಕ್ಷದ ಪ್ರಾಬಲ್ಯ ಇರುವ ಸಂಸತ್ತು ಇದನ್ನು ತಡೆಹಿಡಿದಿದೆ.

ಹಿಂದಿನ ವಾರ ಅಮೆರಿಕದ ದ್ವಿಪಕ್ಷೀಯ ಪ್ರತಿನಿಧಿ ಮಂಡಳಿ ತೈಪೇಗೆ ಭೇಟಿ ನೀಡಿ 40 ಬಿಲಿಯನ್‌ ಡಾಲರ್‌ ವಿಶೇಷ ರಕ್ಷಣಾ ವೆಚ್ಚ ಬಜೆಟ್‌ ಅನ್ನು ಅಂಗೀಕರಿಸಲು ಒತ್ತಾಯಿಸಿತು. ಆದರೆ ಪ್ರತಿಪಕ್ಷ ನಾಯಕ ಚೆಂಗ್‌ ಅವರು ಈ ಭೇಟಿ ತೈವಾನ್‌ ಜನರ ಮುಖ್ಯ ಧೋರಣೆಯೊಂದಿಗೇ ಹೊಂದಿಕೆಯಾಗುತ್ತದೆ ಎಂದು ಹೇಳಿದ್ದಾರೆ. ಪ್ರಾದೇಶಿಕ ಸ್ಥಿರತೆಗಾಗಿ ಮತ್ತು ಮುಂದಿನ ತಲೆಮಾರಿನ ಕಲ್ಯಾಣಕ್ಕಾಗಿ, ನಾವು ಶಾಂತಿಯ ಮಾರ್ಗವನ್ನು ಆಯ್ಕೆ ಮಾಡಬೇಕುಎಂದು ಹೇಳಿದರು.

RELATED ARTICLES

Latest News