ಬೆಂಗಳೂರು,ಜ.20- ಕಾಲ್ತುಳಿತ ಪ್ರಕರಣದಿಂದಾಗಿ ಈ ಬಾರಿಯ ಬಹು ನಿರೀಕ್ಷಿತ ಇಂಡಿಯನ್ ಪ್ರೀಮಿಯರ್‌ಲೀಗ್(ಐಪಿಎಲ್) ಪಂದ್ಯಗಳು ನಡುವುದೇ ಡೋಲಾಯಮಾನ ಸ್ಥಿತಿಯಲ್ಲಿರುವಾಗಲೇ ಉದ್ಘಾಟನಾ ಪಂದ್ಯ ಬೆಂಗಳೂರಿನಲ್ಲೇ ನಡೆಯುವ ಸಂಭವವಿದೆ. ಒಂದು ಕಡೆ ಐಪಿಎಲ್ ಪಂದ್ಯಗಳನ್ನು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.
ಮತ್ತೊಂದು ಕಡೆ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ(ಕೆಎಸ್‌ಸಿಎ) ಹಾಗೂ ಬೆಂಗಳೂರು ರಾಯಲ್ ಚಾಲೆಂಜರ್‌ರಸ (ಆರ್‌ಸಿಬಿ) ನಡುವೆ ಉಂಟಾಗಿರುವ ಸಂಘರ್ಷ ಇನ್ನು ಮುಗಿದಿಲ್ಲ. ಈ ಬೆಳವಣಿಗೆಗಳ ನಡುವೆಯೇ ಈ ಬಾರಿಯ ಉದ್ಘಾಟನಾ ಪಂದ್ಯವನ್ನು ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆಸಲು ಸಿದ್ದತೆಗಳು ಆರಂಭವಾಗಿದೆ. 2026ನೇ ಸರಣಿಯ ಐಪಿಎಲ್ ಉದ್ಘಾಟನಾ ಪಂದ್ಯ ಈ ಬಾರಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮಾ.26ರಂದು ಆರ್‌ಸಿಬಿ ಮತ್ತು ಪಂಜಾಬ್ ಕಿಂಗ್‌್ಸ ನಡುವೆ ನಡೆಯಲಿದೆ.
ಉದ್ಘಾಟನಾ ಪಂದ್ಯಕ್ಕಾಗಿ ಚಿನ್ನಸ್ವಾಮಿ ಕ್ರೀಡಾಂಗಣದ ಕ್ರಿಕೆಟ್ ಮೈದಾನದ ಕಾಮಗಾರಿಯ ವೇಗವನ್ನು ಹೆಚ್ಚಿಸಲಾಗಿದೆ. ಕಾಲ್ತುಳಿತ ದುರಂತ ನಡೆದು ಸಾವು ಆದ ಜಾಗದಲ್ಲಿ ಗೋಡೆ ಒಡೆದು, ಎಂಟ್ರಿ ಎಕ್ಸಿಟ್‌ಗೆ ವಿಶಾಲವಾದ ಜಾಗದ ವ್ಯವಸ್ಥೆ ಮಾಡಲಾಗುತ್ತಿದೆ.
ಕಾಲ್ತುಳಿತ ದುರಂತದ ಬಳಿಕ ಮುಚ್ಚಲಾಗಿದ್ದ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಮತ್ತೆ ಅಂತಾರಾಷ್ಟ್ರೀಯ ಹಾಗೂ ಐಪಿಎಲ್ ಪಂದ್ಯಗಳನ್ನು ನಡೆಸಲು ರಾಜ್ಯ ಸರ್ಕಾರ ಷರತ್ತುಬದ್ಧ ಅನುಮತಿ ನೀಡಿದೆ.
ಈ ಬಾರಿಯ ಐಪಿಎಲ್ ಉದ್ಘಾಟನಾ ಪಂದ್ಯ ಚಿನ್ನಸ್ವಾಮಿ ಯಲ್ಲಿಯೇ ನಡೆಯುವ ಸಾಧ್ಯತೆಗಳಿದ್ದು, ಅದಕ್ಕಾಗಿ ಆರ್‌ಸಿಬಿ ಆಡಳಿತ ಮಂಡಳಿ, ಕೆಎಸ್‌ಸಿಎ ಸಿದ್ಧತೆ ಮಾಡಿಕೊಳ್ಳುತ್ತಿದೆ. ಆರ್‌ಸಿಬಿ ವ್ಯವಸ್ಥಾಪನಾ ಮಂಡಳಿ ಜನದಟ್ಟಣೆ ನಿಯಂತ್ರಿ ಸಲು ಹಾಗೂ ನಿಗಾವಹಿಸಲು ಚಿಕ್ಕದಾದ ಗೋಡೆಗನ್ನು ಒಡೆದು, ಬೃಹತ್ ಗೇಟ್ ನಿರ್ಮಾಣಕ್ಕೆ ಮುಂದಾಗಿದೆ. ಅಲ್ಲದೇ 350 ಎಐ ಕ್ಯಾಮರಾ ಅಳವಡಿಕೆಗೆ ಮುಂದಾಗಿದೆ. ಕಳೆದ ವರ್ಷ ಕಾಲ್ತುಳಿತ ದುರಂತ ನಡೆದ ಗೇಟ್‌ನ ಬಳಿಯೇ ಗೋಡೆ ಒಡೆಯುವ ಕಾರ್ಯ ಶುರು ಮಾಡಿದೆ.
ಗೇಟ್ ನಂ.18, 19ರ ಬಳಿ ಕಾಮಗಾರಿ ಶುರುವಾಗಿದ್ದು, ಎಂಟ್ರಿ- ಎಕ್ಸಿಟ್‌ಗೆ ಅಗಲವಾದ ಜಾಗದ ವ್ಯವಸ್ಥೆ ಮಾಡಲಾಗುತ್ತಿದೆ. ಮುಖ್ಯರಸ್ತೆಯಲ್ಲಿ ಈ ಗೇಟ್‌ಗಳು ಇರುವುದರಿಂದ ವಾಹನ ಸಂಚಾರಕ್ಕೆ ಸಮಸ್ಯೆಯಾಗದಂತೆ ಹಾಗೂ ಜನದಟ್ಟಣೆ ನಿಯಂತ್ರಿಸಲು ಬೇಕಾದ ಸ್ಥಳಾವಕಾಶ ಮಾಡಿಕೊಳ್ಳುತ್ತಿದೆ.
ಫ್ರಾಂಚೈಸಿಯಿಂದಲೇ ಭದ್ರತಾ ಸಿಬ್ಬಂದಿ ವ್ಯವಸ್ಥೆ
ಐಪಿಎಲ್ ಆರಂಭಕ್ಕೆ ಇನ್ನೂ 65 ದಿನ ಬಾಕಿಯಿದ್ದು, ಕೆಎಸ್‌ಸಿಎ ತ್ವರಿತಗತಿಯಲ್ಲಿ ಸುರಕ್ಷತೆ, ಭದ್ರತೆಗೆ ಸಂಬಂಧಪಟ್ಟಂತೆ ಕ್ರಮಗಳನ್ನು ತೆಗೆದುಕೊಳ್ಳುತ್ತಿದೆ. ಅಗ್ನಿಶಾಮಕ, ಜಿಬಿಎ, ಲೋಕೋಪಯೋಗಿ, ಜಲಮಂಡಳಿ ಅಧಿಕಾರಿಗಳಿಗೆ ಸುರಕ್ಷತಾ ಕ್ರಮಗಳ ಅಳವಡಿಕೆ ಮಾಡಿಕೊಂಡಿರುವ ಕುರಿತು ವರದಿ ನೀಡಿದ್ದಾರೆ. ಇತ್ತ ನಾಲ್ಕೂವರೆ ಕೋಟಿ ರೂಪಾಯಿ ವೆಚ್ಚದಲ್ಲಿ ಆರ್‌ಸಿಬಿ ಆಡಳಿತ ಮಂಡಳಿ ಎಐ ಕ್ಯಾಮೆರಾ ಅಳವಡಿಕೆ ಮಾಡಿ, ಜನ ದಟ್ಟಣೆಯಾಗದಂತೆ ಆಡಳಿತ ಮಂಡಳಿಯಿಂದಲೇ ಭದ್ರತಾ ಸಿಬ್ಬಂದಿಯನ್ನು ನಿಯೋಜಿಸಲು ಮುಂದಾಗಿದೆ.
