Homeರಾಷ್ಟ್ರೀಯನಾಳೆ ನೀಟ್‌-ಯುಜಿ ಮರುಪರೀಕ್ಷೆ : ರಾಷ್ಟ್ರವ್ಯಾಪಿ ಮಾಕ್‌ ಡ್ರಿಲ್‌ ನಡೆಸಿದ ಎನ್‌ ಟಿಎ

ನಾಳೆ ನೀಟ್‌-ಯುಜಿ ಮರುಪರೀಕ್ಷೆ : ರಾಷ್ಟ್ರವ್ಯಾಪಿ ಮಾಕ್‌ ಡ್ರಿಲ್‌ ನಡೆಸಿದ ಎನ್‌ ಟಿಎ

ನವದೆಹಲಿ,ಜೂ.20- ವೈದ್ಯಕೀಯ ಹಾಗೂ ದಂತ ವೈದ್ಯಕೀಯ ಪ್ರವೇಶಾತಿ ಕೋರ್ಸ್‌ಗಳಿಗೆ ನಡೆಯುವ ನೀಟ್‌-ಯುಜಿ ಮರುಪರೀಕ್ಷೆ ನಾಳೆ ದೇಶದ 551 ನಗರಗಳಲ್ಲಿ ನಡೆಯಲಿದೆ. ಈ ಹಿನ್ನೆಲೆ ಇಂದು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ (ಎನ್‌ ಟಿಎ ) ರಾಷ್ಟ್ರವ್ಯಾಪಿ ಮಾಕ್‌ ಡ್ರಿಲ್‌ ನಡೆಸಲಿದೆ. ನೀಟ್‌ ಮರುಪರೀಕ್ಷೆಯ ಪ್ರಶ್ನೆ ಪತ್ರಿಕೆಗಳ ಸುರಕ್ಷಿತ ಸಾಗಾಟಕ್ಕೆ ಭಾರತೀಯ ವಾಯುಪಡೆ ಹೆಲಿಕಾಪ್ಟರ್‌ಗಳನ್ನು ಬಳಸಲಾಗುತ್ತಿದೆ. ಹಿಂದಿನ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಸೋರಿಕೆ ವಿವಾದದ ಹಿನ್ನೆಲೆಯಲ್ಲಿ, ಪ್ರಶ್ನೆ ಪತ್ರಿಕೆಗಳು ಪರೀಕ್ಷಾ ಕೇಂದ್ರಗಳನ್ನು ತಲುಪುವವರೆಗಿನ ಸಾಗಾಟದ ಹಂತದಲ್ಲಿ ಯಾವುದೇ ಲೋಪವಾಗದಂತೆ ತಡೆಯಲು ಈ ಕಟ್ಟುನಿಟ್ಟಿನ ಸೇನಾ ಭದ್ರತೆ ಮತ್ತು ವೈಮಾನಿಕ ಕಾರ್ಯಾಚರಣೆ ಕೈಗೊಳ್ಳಲಾಗಿದೆ.

ಪ್ರಶ್ನೆಪತ್ರಿಕೆಯ ವಿತರಣೆ, ಸಂಗ್ರಹಣೆ ಮತ್ತು ಸಾಗಣೆಯ ಪ್ರತಿಯೊಂದು ಹಂತವನ್ನೂ ಇದರಲ್ಲಿ ಪರೀಕ್ಷಿಸಲಾಗುತ್ತಿದೆ. ದೆಹಲಿಯಿಂದ ವಿಮಾನಗಳ ಮೂಲಕ ತಲುಪುವ ಪ್ರಶ್ನೆ ಪತ್ರಿಕೆಗಳನ್ನು, ಅಲ್ಲಿಂದ ದೇಶದ ವಿವಿಧ ಸೂಕ್ಷ್ಮ ಹಾಗೂ ದೂರದ ಪ್ರದೇಶಗಳಾದ ತಮಿಳುನಾಡಿನ ತಿರುನೆಲ್ವೇಲಿ ಮತ್ತು ಮಧ್ಯಪ್ರದೇಶದ ಛಿಂದ್ವಾರಾ ಮುಂತಾದ 18 ಪ್ರಮುಖ ಸ್ಥಳಗಳಿಗೆ ಭಾರತೀಯ ವಾಯುಪಡೆಯ ಮಿ-17 ಹೆಲಿಕಾಪ್ಟರ್‌ಗಳ ಮೂಲಕ ಏರ್‌ಲಿಫ್‌್ಟ ಮಾಡಲಾಗುತ್ತಿದೆ.

ಪರೀಕ್ಷಾ ಸಾಮಗ್ರಿಗಳು ಪರೀಕ್ಷಾ ಕೇಂದ್ರ ತಲುಪುವವರೆಗೂ ಕಟ್ಟುನಿಟ್ಟಾದ ಸೇನಾ ರಕ್ಷಣೆ ಹಾಗೂ ಕಾವಲು ಇರಲಿದೆ. ಭದ್ರತೆಯನ್ನು ಇನ್ನಷ್ಟು ಬಲಪಡಿಸಲು ರಾಷ್ಟ್ರೀಯ ಪರೀಕ್ಷಾ ಸಂಸ್ಥೆ ಮತ್ತು ಕೇಂದ್ರ ಸರ್ಕಾರವು ಹಲವು ಕಠಿಣ ಕ್ರಮಗಳನ್ನು ಕೈಗೊಂಡಿದೆ. ಪರೀಕ್ಷಾ ಕೇಂದ್ರಗಳಲ್ಲಿ ಕೃತಕ ಬುದ್ಧಿಮತ್ತೆ (AI) ಆಧಾರಿತ ಸಿಸಿಟಿವಿ ಕ್ಯಾಮೆರಾಗಳ ಬಳಕೆ ಮತ್ತು ಪ್ರವೇಶದ್ವಾರಗಳಲ್ಲಿ ಬಯೋಮೆಟ್ರಿಕ್‌ ಮತ್ತು ಮುಖ ಪರಿಶೀಲನೆ ಕಡ್ಡಾಯಗೊಳಿಸಲಾಗಿದೆ.

ಜಾಮರ್‌ಗಳು: ಮೊಬೈಲ್‌ ಡೇಟಾ, ಬ್ಲೂಟೂತ್‌ ಮತ್ತು ವೈ-ಫೈ ಸಿಗ್ನಲ್‌ಗಳನ್ನು ಸಂಪೂರ್ಣವಾಗಿ ನಿರ್ಬಂಧಿಸಲು ಕೇಂದ್ರಗಳಲ್ಲಿ ಹೈ-ಪವರ್‌ 5ಜಿ ಜಾಮರ್‌ಗಳನ್ನು ಅಳವಡಿಸಲಾಗಿದೆ. ಪರೀಕ್ಷೆಗೆ ಸಂಬಂಧಿಸಿದ ಹೆಚ್ಚಿನ ಅಧಿಕೃತ ಮಾಹಿತಿ ಮತ್ತು ಪ್ರವೇಶಪತ್ರ ಡೌನ್‌ಲೋಡ್‌ ಮಾಡಲು ಎನ್‌ಟಿಎ ಅಧಿಕೃತ ವೆಬ್‌ಸೈಟ್‌ ಅನ್ನು ಪರಿಶೀಲಿಸಬಹುದು. ಪ್ರಶ್ನೆಪತ್ರಿಕೆಗಳ ಸುರಕ್ಷಿತ ಸಾಗಣೆ ಮತ್ತು ಉತ್ತರ ಪತ್ರಿಕೆಗಳ ಭದ್ರತೆಗಾಗಿ ಸುಮಾರು 15,000 ಅರೆಸೇನಾ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪರೀಕ್ಷೆಯ ಸುಗಮ ನಿರ್ವಹಣೆಗಾಗಿ ಒಟ್ಟಾರೆ ಸುಮಾರು 2.5 ಲಕ್ಷ ಪೊಲೀಸ್‌‍ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗಿದೆ.

ದೇಶಾದ್ಯಂತ ಸುಮಾರು 1.5 ಲಕ್ಷ ಸಿಸಿಟಿವಿ ಕ್ಯಾಮೆರಾಗಳು ಮತ್ತು 15,000 ಸಿಗ್ನಲ್‌ ಜಾಮರ್‌ಗಳನ್ನು ಅಳವಡಿಸಲಾಗಿದೆ. ಪರೀಕ್ಷೆಯು ಮಧ್ಯಾಹ್ನ 2ರಿಂದ 5:15ರವರೆಗೆ ನಡೆಯಲಿದೆ. ಸುಮಾರು 22.79 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ದೇಶದ 551 ನಗರಗಳು ಮತ್ತು 14 ಅಂತರಾಷ್ಟ್ರೀಯ ಕೇಂದ್ರಗಳಲ್ಲಿ ಪರೀಕ್ಷೆ ಬರೆಯಲಿದ್ದಾರೆ.ಅಭ್ಯರ್ಥಿಗಳಿಗೆ ಯಾವುದೇ ಅನುಮಾನವಿದ್ದರೂ ಅಧಿಕೃತ ವೆಬ್‌ಸೈಟ್‌ ಮೂಲಕ ಮಾಹಿತಿ ಪಡೆಯಲು ಸೂಚಿಸಲಾಗಿದೆ.

ಆಯಾ ಜಿಲ್ಲಾಡಳಿತ, ರಾಜ್ಯ ಪೊಲೀಸ್‌‍ ಪಡೆಗಳು ಮತ್ತು ಕೇಂದ್ರ ಸರ್ಕಾರದ ವಿಶೇಷ ಭದ್ರತಾ ತಂಡ ಒಳಗೊಂಡಂತೆ ಮೂರು ಹಂತದ ಭದ್ರತೆ ನಿಯೋಜಿಸಲಾಗಿದೆ. ಪರೀಕ್ಷಾ ಕೇಂದ್ರಗಳನ್ನು ಸುರಕ್ಷಿತವಾಗಿರಿಸಲು ಮತ್ತು ಪರೀಕ್ಷೆಯ ಸಮಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆ ಕಾಪಾಡಿಕೊಳ್ಳಲು ಸುಮಾರು 2.5 ಲಕ್ಷ ಪೊಲೀಸ್‌‍ ಸಿಬ್ಬಂದಿಯನ್ನು ಭದ್ರತೆಗೆ ನಿಯೋಜಿಸಲಾಗುತ್ತಿದೆ. ಇದಲ್ಲದೇ ಸುಮಾರು 15,000 ಅರೆಸೇನಾ ಸಿಬ್ಬಂದಿ ಪ್ರಶ್ನೆಪತ್ರಿಕೆಗಳ ಸಾಗಣೆ ಮತ್ತು ಪರೀಕ್ಷೆ ನಂತರ ಉತ್ತರಪತ್ರಿಕೆಗಳನ್ನು ಸುರಕ್ಷಿತವಾಗಿ ಹಿಂದಿರುಗಿಸುವ ಕಾರ್ಯ ಮಾಡಲಿದ್ದಾರೆ.

1.5 ಲಕ್ಷ ಸಿಸಿಟಿವಿ ಕ್ಯಾಮೆರಾ ಅಷ್ಟೇ ಅಲ್ಲದೇ ಕಣ್ಗಾವಲಿಗಾಗಿ 1.5 ಲಕ್ಷ ಸಿಸಿಟಿವಿ ಕ್ಯಾಮೆರಾಗಳು ಮತ್ತು 15,000 ಸಿಗ್ನಲ್‌ ಜಾಮರ್ಗಳನ್ನ ಅಳವಡಿಸಿದ್ದಾರೆ. ಎನ್‌ಟಿಎ ಕೇಂದ್ರ ಕಚೇರಿ ಮತ್ತು ದೇಶಾದ್ಯಂತ ಸ್ಥಾಪಿಸಲಾದ ಕಂಟ್ರೋಲ್‌ ರೂಮ್‌ಗಳಿಂದ ನೈಜ ಸಮಯ ಮೇಲ್ವಿಚಾರಣೆ ಮಾಡಲಾಗುತ್ತದೆ. ಅಧಿಕಾರಿಗಳ ಪ್ರಕಾರ, ಸುಮಾರು 22.8 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆಗೆ ನೋಂದಾಯಿಸಿಕೊಂಡಿದ್ದಾರೆ, ಇದು ದೇಶದ ಅತಿದೊಡ್ಡ ಪ್ರವೇಶ ಪರೀಕ್ಷೆಗಳಲ್ಲಿ ಒಂದಾಗಿದೆ. 18.5 ಲಕ್ಷಕ್ಕೂ ಹೆಚ್ಚು ಅಭ್ಯರ್ಥಿಗಳು ಈಗಾಗಲೇ ತಮ ಪ್ರವೇಶ ಪತ್ರಗಳನ್ನ ಡೌನ್‌ಲೋಡ್‌ ಮಾಡಿಕೊಂಡಿದ್ದಾರೆ, ಆದರೆ ಸುಮಾರು 3.5 ಲಕ್ಷ ವಿದ್ಯಾರ್ಥಿಗಳು ತಮ ಪರೀಕ್ಷಾ ನಗರ ಅಥವಾ ಕೇಂದ್ರವನ್ನು ಬದಲಾಯಿಸಲು ಆಯ್ಕೆ ಮಾಡಿಕೊಂಡಿದ್ದಾರೆ.

ಪರೀಕ್ಷಾ ಕೇಂದ್ರದ ಒಳಗೆ ಪಾರದರ್ಶಕ ನೀರಿನ ಬಾಟಲ್ಗಳನ್ನು ತೆಗೆದುಕೊಂಡು ಹೋಗಲು ಅವಕಾಶವಿದೆ. ಇದರಿಂದ ಅಭ್ಯರ್ಥಿಗಳು ಪರೀಕ್ಷೆಯ ಸಮಯದಲ್ಲಿ ನೀರು ಕುಡಿಯಬಹುದು.
ಡ್ರೆಸ್‌‍ ಕೋಡ್‌ ಮತ್ತು ಧಾರ್ಮಿಕ ಸಹಿಷ್ಣುತೆ ಅಭ್ಯರ್ಥಿಗಳ ಧರ್ಮ ಮತ್ತು ನಂಬಿಕೆಗೆ ಅನುಗುಣವಾಗಿ ಡ್ರೆಸ್‌‍ ಕೋಡ್‌ಗೆ ಅವಕಾಶ ನೀಡಲಾಗಿದೆ. ಹಿಜಾಬ್‌, ಪಂಜಾಬಿ ರುಮಾಲು ಧರಿಸಲು ಅನುಮತಿ ಇದೆ. ಸಾಮಾನ್ಯ ಚಪ್ಪಲಿ ಮತ್ತು ಕಡಿಮೆ ಹಿಮಡಿ ಎತ್ತರದ ಚಪ್ಪಲಿಗಳನ್ನು ಧರಿಸಬಹುದು. ಆದರೆ ಎತ್ತರದ ಚಪ್ಪಲಿ ಧರಿಸುವವರು ಹೆಚ್ಚುವರಿ ತಪಾಸಣೆಗೆ ಒಳಗಾಗಬೇಕು.

ಪರೀಕ್ಷೆಗೆ ಅಗತ್ಯ ದಾಖಲೆಗಳು : ಎಲ್ಲಾ ಅಭ್ಯರ್ಥಿಗಳು ತಮೊಂದಿಗೆ ಎರಡು ಪಾಸ್‌‍ಪೋರ್ಟ್‌ ಸೈಜ್‌ ಫೋಟೋಗಳನ್ನು ತೆಗೆದುಕೊಂಡು ಹೋಗಬೇಕು. ಸರ್ಕಾರಿ ಫೋಟೋ ಐಡಿ ಕಾರ್ಡ್‌ (ಆಧಾರ್‌, ವೋಟರ್‌ ಐಡಿ, ಪಾಸ್‌‍ಪೋರ್ಟ್‌ ಇತ್ಯಾದಿ) ಕಡ್ಡಾಯವಾಗಿ ತರಬೇಕು. ಇವುಗಳಿಲ್ಲದಿದ್ದರೆ ಪರೀಕ್ಷಾ ಕೇಂದ್ರಕ್ಕೆ ಪ್ರವೇಶ ನೀಡುವುದಿಲ್ಲ.
ನಿಷೇಧಿತ ವಸ್ತುಗಳು ಯಾವುದು?
ಪರೀಕ್ಷಾ ಕೇಂದ್ರಗಳಿಗೆ ಕೆಲವು ವಸ್ತುಗಳನ್ನು ತೆಗೆದುಕೊಂಡು ಹೋಗುವಂತಿಲ್ಲ. ಅವುಗಳಲ್ಲಿ
ಮೊಬೈಲ್‌ ಫೋನ್‌
ಸಾರ್ಟ್‌ ವಾಚ್‌
ಬ್ಲೂಟೂತ್‌ ಉಪಕರಣಗಳು
ಇಯರ್‌ ಫೋನ್‌ಗಳು
ದೊಡ್ಡ ಬೆಲ್‌್ಟ ಕೊಂಡಿ
ಭಾರೀ ಆಭರಣಗಳು

RELATED ARTICLES
spot_img

Latest News