Homeಅಂತಾರಾಷ್ಟ್ರೀಯಭಾರತ- ಫ್ರಾನ್ಸ್ ಪಾಲುದಾರಿಕೆ ಮಹತ್ವದ್ದು; ಮೋದಿ

ಭಾರತ- ಫ್ರಾನ್ಸ್ ಪಾಲುದಾರಿಕೆ ಮಹತ್ವದ್ದು; ಮೋದಿ

ಪ್ಯಾರಿಸ್‌‍, ಜೂ.18- ಜಿ7 ಶೃಂಗಸಭೆ ಮುಗಿಸಿ ಪ್ರಧಾನಿ ನರೇಂದ್ರ ಮೋದಿ ಅವರು ಫ್ರಾನ್ಸ್ ರಾಜಧಾನಿ ಪ್ಯಾರಿಸ್‌‍ಗೆ ಆಗಮಿಸಿದ್ದಾರೆ. ಪ್ಯಾರಿಸ್‌‍ನಲ್ಲಿ ಅವರಿಗೆ ಭಾರತೀಯರಿಂದ ಅದ್ಧೂರಿ ಸ್ವಾಗತ ದೊರೆತಿದೆ. ಈ ವೇಳೆ ಮಾತನಾಡಿದ ಅವರು, ನಮ್ಮ ಗ್ರಹದ ಒಟ್ಟಾರೆ ಪ್ರಗತಿಗೆ ಭಾರತ ಮತ್ತು ಫ್ರಾನ್ಸ್ ನಡುವಿನ ಪಾಲುದಾರಿಕೆ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದ್ದಾರೆ.

ಫ್ರೆಂಚ್‌ ಕಮ್ಯೂನ್‌ ಎವಿಯನ್‌‍-ಲೆಸ್‌‍-ಬೈನ್‌್ಸನಲ್ಲಿ ನಡೆದ ಜಿ7 ಶೃಂಗಸಭೆಯಲ್ಲಿ ಅತಿಥಿ ರಾಷ್ಟ್ರವಾಗಿ ಭಾರತ ಭಾಗವಹಿಸಿತ್ತು. ಅಲ್ಲಿನ ಕಾರ್ಯಕ್ರಮಗಳನ್ನು ಮುಗಿಸಿ ಮೋದಿ ಪ್ಯಾರಿಸ್‌‍ಗೆ ಆಗಮಿಸಿದ್ದಾರೆ.
ಪ್ಯಾರಿಸ್‌‍ನಲ್ಲಿ ಪ್ರಧಾನಿ ಮೋದಿ ಅವರು ಫ್ರಾನ್ಸ್ ಅಧ್ಯಕ್ಷ ಎಮ್ಯಾನುಯೆಲ್‌ ಮ್ಯಾಕ್ರನ್‌ ಅವರೊಂದಿಗೆ ಯುರೋಪಿನ ಅತಿದೊಡ್ಡ ತಂತ್ರಜ್ಞಾನ ಮೇಳವಾದ ವಿವಾಟೆಕ್‌ 2026 ನಲ್ಲಿ ಭಾಗವಹಿಸಲಿದ್ದಾರೆ.
ಜಾಗತಿಕ ಸಮೃದ್ಧಿಯನ್ನು ಸಾಧಿಸಲು ಅಭಿವೃದ್ಧಿಶೀಲ ರಾಷ್ಟ್ರಗಳೊಂದಿಗೆ (ಗ್ಲೋಬಲ್‌ ಸೌತ್‌‍) ನಿಕಟ ಸಂಬಂಧ ಹೊಂದುವುದು ಅಗತ್ಯ ಎಂದು ಮೋದಿ ಒತ್ತಿಹೇಳಿದರು. ಜಿ7 ದೇಶಗಳು ಮತ್ತು ಅಭಿವೃದ್ಧಿಶೀಲ ರಾಷ್ಟ್ರಗಳ ಬಲವನ್ನು ಒಟ್ಟುಗೂಡಿಸಿ ವ್ಯಾಪಾರ ಹಾಗೂ ಸಂಪರ್ಕವನ್ನು ಹೆಚ್ಚಿಸುವ ಹೊಸ ಚೌಕಟ್ಟನ್ನು ಮೋದಿ ಪ್ರಸ್ತಾಪಿಸಿದರು.

ಶೃಂಗಸಭೆಯ ನಡುವೆ ಪ್ರಧಾನಿ ಮೋದಿ ಅವರು ವಿಶ್ವದ ಪ್ರಮುಖ ನಾಯಕರನ್ನು ಭೇಟಿಯಾಗಿ ಮಾತುಕತೆ ನಡೆಸಿದರು.ಅಮೆರಿಕ ಅಧ್ಯಕ್ಷ ಡೊನಾಲ್‌್ಡ ಟ್ರಂಪ್‌ಯುಕೆ ಪ್ರಧಾನಿ ಕೀರ್‌ ಸ್ಟಾರ್ಮರ್‌ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್‌ ಝೆಲೆನ್ಸ್ಕಿಜರ್ಮನ್‌ ಚಾನ್ಸೆಲರ್‌ ಫ್ರೆಡ್ರಿಕ್‌ ಮೆರ್ಜ್‌ ಮತ್ತು ಯುಎಇ ಅಧ್ಯಕ್ಷರುಉಭಯ ದೇಶಗಳು ರಕ್ಷಣೆ, ಭದ್ರತೆ, ಬಾಹ್ಯಾಕಾಶ, ನಾಗರಿಕ ಪರಮಾಣು ಶಕ್ತಿ ಮತ್ತು ಹವಾಮಾನ ಬದಲಾವಣೆಯ ತಡೆಗೆ ಸಂಬಂಧಿಸಿದಂತೆ ಬಲವಾದ ಕಾರ್ಯತಂತ್ರದ ಪಾಲುದಾರಿಕೆಯನ್ನು ಹೊಂದಿವೆ. ಪ್ರಸ್ತುತ ಫ್ರಾನ್‌್ಸನಲ್ಲಿ ಸುಮಾರು 1.19 ಲಕ್ಷಕ್ಕೂ ಅಧಿಕ ಭಾರತೀಯರು ವಾಸಿಸುತ್ತಿದ್ದಾರೆ.

PM Modi says India-France partnership vital for global progress

RELATED ARTICLES
spot_img

Latest News