Tuesday, April 14, 2026
Homeರಾಜ್ಯದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಡಿಜಿಲಾಕರ್‌ನಲ್ಲಿ ಲಭ್ಯವಾಗಲಿದೆ ಅಂಕಪಟ್ಟಿ

ದ್ವಿತೀಯ ಪಿಯುಸಿ ಫಲಿತಾಂಶ ಪ್ರಕಟ, ಡಿಜಿಲಾಕರ್‌ನಲ್ಲಿ ಲಭ್ಯವಾಗಲಿದೆ ಅಂಕಪಟ್ಟಿ

Second PUC results to be announced today

ಬೆಂಗಳೂರು- ಕಳೆದ ಫೆಬ್ರವರಿ ಹಾಗೂ ಮಾರ್ಚ್‍ನಲ್ಲಿ ರಾಜ್ಯಾದ್ಯಂತ ನಡೆದಿದ್ದ ದ್ವಿತೀಯ ಪಿಯುಸಿ ಪರೀಕ್ಷೆ-1ರ ಫಲಿತಾಂಶ ಪ್ರಕಟಗೊಂಡಿದ್ದು, ಈ ಬಾರಿ ದಾಖಲೆಯ ಶೇ.86. 48 ರಷ್ಟು ಫಲಿತಾಂಶ ಬಂದಿದೆ. ಕಳೆದ 2024-25ನೇ ಸಾಲಿನಲ್ಲಿ ಶೇ.73.45ರಷ್ಟ ಫಲಿತಾಂಶ ಬಂದಿತ್ತು. ಈ ಬಾರಿ ಶೇ.13.05 ಹೆಚ್ಚುವರಿ ಫಲಿತಾಂಶ ಬಂದಿದೆ. ಇತ್ತೀಚಿನ
ದಶಕಗಳಲ್ಲಿ ದಾಖಲೆಯ ಫಲಿತಾಂಶ ಇದಾಗಿದೆ.

ಎಂದಿನಂತೆ ಈ ಬಾರಿಯೂ ವಿದ್ಯಾರ್ಥಿನಿಯರೇ ಮೇಲುಗೈ ಸಾಧಿಸಿದ್ದು ನಗರ ಪ್ರದೇಶಗಳಿಗಿಂತ ಗ್ರಾಮೀಣ ಭಾಗದ ವಿದ್ಯಾರ್ಥಿಗಳೇ ಶೇಕಡವಾರು ಪ್ರಮಾಣದಲ್ಲಿ ಮೊದಲ ಸ್ಥಾನದಲ್ಲಿದ್ದಾರೆ. ಗುರುವಾರ ಪ್ರಸಕ್ತ 2025-26ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ 1ರ ಫಲಿತಾಂಶವನ್ನು ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಸಚಿವ ಮಧುಬಂಗಾರಪ್ಪ ಅವರು ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ಕಚೇರಿಯಲ್ಲಿ ಅಧಿಕೃತವಾಗಿ ಪ್ರಕಟಿಸಿದರು.

ಈ ಬಾರಿಯೂ ಬಾಲಕಿಯರು ಅತ್ಯುತ್ತಮ ಪ್ರದರ್ಶನ ನೀಡಿದ್ದಾರೆ. ಶೇ.88.07 ರಷ್ಟು ವಿದ್ಯಾರ್ಥಿನಿಯರು ತೇರ್ಗಡೆಯಾಗಿದ್ದರೆ, ಬಾಲಕರ ತೇರ್ಗಡೆ ಪ್ರಮಾಣ ಶೇ.83.65 ಆಗಿದೆ. ವಿಭಾಗವಾರು ಫಲಿತಾಂಶವನ್ನು ಗಮನಿಸಿದರೆ, ವಿಜ್ಞಾನ ವಿಭಾಗದಲ್ಲಿ ಶೇ.91.69, ವಾಣಿಜ್ಯ ವಿಭಾಗದಲ್ಲಿ ಶೇ.88.04 ಮತ್ತು ಕಲಾ ವಿಭಾಗದಲ್ಲಿ ಶೇ.72.86 ರಷ್ಟು ಫಲಿತಾಂಶ ಬಂದಿದೆ.

ಈ ಬಾರಿಯೂ ಜಿಲ್ಲಾವಾರು ಫಲಿತಾಂಶದಲ್ಲಿ ಉಡುಪಿ ಪ್ರಥಮ, ಯಾದಗಿರಿ ಕೊನೇ ಸ್ಥಾನದಲ್ಲಿದೆ. ಶೇಕಡಾ 9639 ಫಲಿತಾಂಶ ಪಡೆದು ಉಡುಪಿ ಜಿಲ್ಲೆ ರಾಜ್ಯಕ್ಕೆ ಮತ್ತೆ ಪ್ರಥಮ ಸ್ಥಾನ ಪಡೆದುಕೊಂಡರೆ, ಉತ್ತರ ಕನ್ನಡ ಜಿಲ್ಲೆ ಶೇಕಡಾ 91.78 ಫಲಿತಾಂಶದ ಮೂಲಕ ರಾಜ್ಯದಲ್ಲೇ ಎರಡನೇ ಸ್ಥಾನ ಪಡೆದಿದೆ. ಇನ್ನು ಯಾದಗಿರಿ ಜಿಲ್ಲೆ ಶೇಕಡಾ 71.21 ಫಲಿತಾಂಶದ ಮೂಲಕ ರಾಜ್ಯಕ್ಕೆ ಕೊನೆಯ ಸ್ಥಾನದಲ್ಲಿದೆ.

ನಗರ ಪ್ರದೇಶದ ಸರ್ಕಾರಿ ಶಾಲೆಗಳಲ್ಲಿ 76% ರಷ್ಟು ವಿದ್ಯಾರ್ಥಿಗಳು ಉತ್ತೀರ್ಣವಾಗಿದ್ದಾರೆ.
ಗ್ರಾಮಾಂತರದಲ್ಲಿ 81,51ರಷ್ಟು ಮಂದಿ ಉತ್ತೀರ್ಣವಾಗಿದ್ದು, ಕಳೆದ ಬಾರಿಗಿಂತ ಅಧಿಕ ಪ್ರಮಾಣದಲ್ಲಿ ಉತ್ತೀರ್ಣವಾಗಿದ್ದಾರೆ.ರಾಜ್ಯದಲ್ಲಿ ಶೇಕಡಾ 17.8ರಷ್ಟು ಗ್ರಾಮೀಣ ಭಾಗದಲ್ಲಿ ಹಾಗೂ 7 ರಷ್ಟು ನಗರದಲ್ಲಿ ಪ್ರದೇಶಗಳಲ್ಲಿ ಕಲಿಕೆಯಲ್ಲಿ ಮುಂದಿದ್ದಾರೆ.

ಸರ್ಕಾರಿ ಶಾಲೆಗಳಲ್ಲಿ 7 ಸಾವಿರ ವಿದ್ಯಾರ್ಥಿಗಳು ಪ್ರಥಮ ಶ್ರೇಣಿಯಲ್ಲಿ ಉತ್ತೀರ್ಣರಾದರೆ,
ಈ ಬಾರಿ 17 ಸಾವಿರ ಮಂದಿ ಡಿಸ್ಟಿಂಗ್‌ಷನ್ ಬಂದಿದ್ದಾರೆ. ವಿಜ್ಞಾನ ವಿಭಾಗದಲ್ಲಿ ಉಡುಪಿಯ ಜ್ಞಾನಸುಧ ಕಾಲೇಜಿನ ವಿದ್ಯಾರ್ಥಿ ವೈಷ್ಣವಿ ಕುಲಕರ್ಣಿ ಅವರು 600 ಅಂಕಗಳಿಗೆ 597 ಅಂಕ ಪಡೆದು ರಾಜ್ಯದಲ್ಲೇ ಪ್ರಥಮ ಸ್ಥಾನ ಪಡೆದಿದ್ದಾರೆ.

ಕಲಾ ವಿಭಾಗದಲ್ಲಿ ವಿಜಯನಗರ ಜಿಲ್ಲೆಯ ಕೊಟ್ಟೂರು ತಾಲ್ಲೂಕಿನ ಇಂದೂ ಪಿಯು ಕಾಲೇಜು ವಿದ್ಯಾರ್ಥಿನಿಯರಾದ ಅರ್ಚನಾ, ಸಂಗೀತಾ 600ಕ್ಕೆ 598, ವಾಣಿಜ್ಯ ವಿಭಾಗದಲ್ಲಿ ಉಡುಪಿಯ ಜಿಲ್ಲೆಯ ಮೂಡುಬಿದರೆಯ ಆಳ್ವಾಸ್ ಕಾಲೇಜಿನ ದಿಶಾ 600ಕ್ಕೆ 600 ಅಂಕ ಗಳಿಸಿ ಮೊದಲ ರ್ಯಾಂಕ್ ಪಡೆದರೆ, ತುಮಕೂರಿನ ವಿದ್ಯಾವಾಹಿನಿ ಕಾಲೇಜಿನ ವಿದ್ಯಾರ್ಥಿ ರೋಹನ್ 600 ಅಂಕಗಳಿಗೆ 597 ಅಂಕ ಪಡೆದು 2ನೇ ರ್ಯಾಂಕ್ ಪಡೆದಿದ್ದಾರೆ. ಬಾಲಕಿಯರೇ ಮೇಲುಗೈ. ಶೇಕಡಾ 88.70 ಬಾಲಕಿಯರು ಉತ್ತೀರ್ಣ, ಶೇಕಡಾ 83.65ರಷ್ಟು ಬಾಲಕರು ಉತ್ತೀರ್ಣರಾಗಿದ್ದಾರೆ.

ವಾಣಿಜ್ಯ ವಿಭಾಗದಲ್ಲಿ 9 ವಿದ್ಯಾರ್ಥಿಗಳು 590ಕ್ಕಿಂತ ಅಧಿಕ ಅಂಕ ಗಳಿಸಿದ್ದಾರೆ. ಒಂದೇ ಕಾಲೇಜಿನಲ್ಲಿ 9 ವಿದ್ಯಾರ್ಥಿಗಳು ವಾಣಿಜ್ಯ ವಿಭಾಗದಲ್ಲಿ ಸಾಧನೆ ಮಾಡಿದ್ದಾರೆ. ಬೆಂಗಳೂರಿನ ರಾಜಾಜಿನಗರದ ASC ಕಾಲೇಜಿನ 9 ವಿದ್ಯಾರ್ಥಿಗಳು ಉತ್ತಮ ಅಂಕಗಳೊಂದಿಗೆ ತೇರ್ಗಡೆಯಾಗಿದ್ದಾರೆ.

6,32,200 ವಿದ್ಯಾರ್ಥಿಗಳು ಪರೀಕ್ಷೆ ಬರೆದಿದ್ದು, 5,46,698 ವಿದ್ಯಾರ್ಥಿಗಳು ಪಾಸ್‌ ಆಗಿದ್ದಾರೆ. ಈ ಪೈಕಿ 2,32,928 ( 83.65%) ಬಾಲಕರು, 3,13,770 (88.70%) ಬಾಲಕಿಯರು ಉತ್ತೀರ್ಣರಾಗಿದ್ದು, ಈ ಬಾರಿಯೂ ಬಾಲಕಿಯರೇ ಮೇಲುಗೈ ಸಾಧಿಸಿದ್ದಾರೆ.
ಕಲಾ ವಿಭಾಗದಲ್ಲಿ 98,310 (72.86%) ವಿದ್ಯಾರ್ಥಿಗಳು, ವಾಣಿಜ್ಯ ವಿಭಾಗದಲ್ಲಿ 1,82,317(88.04%) ವಿದ್ಯಾರ್ಥಿಗಳು ಹಾಗೂ ವಿಜ್ಞಾನ ವಿಭಾಗದಲ್ಲಿ 2,66,071( 86.48%) ಉತ್ತೀರ್ಣರಾಗಿದ್ದಾರೆ. ಈ ಪೈಕಿ ನಗರ ವಿಭಾಗದಲ್ಲಿ 3,71,853 (85.95%) ಮಕ್ಕಳು, ಗ್ರಾಮೀಣ ವಿಭಾಗದ 1,74,845 (87.62%) ಮಕ್ಕಳು ಉತ್ತೀರ್ಣರಾಗಿದ್ದಾರೆ. ಉನ್ನತ ಶ್ರೇಣಿಯಲ್ಲಿ 1,70,529 ಮಕ್ಕಳು, ಪ್ರಥಮ ದರ್ಜೆಯಲ್ಲಿ 2,95,385 ಮಕ್ಕಳು, ದ್ವೀತಿಯ ದರ್ಜೆಯಲ್ಲಿ 63,957 ಮಕ್ಕಳು ಉತ್ತೀರ್ಣರಾಗಿದ್ದು, 16,827 ಮಕ್ಕಳು ಜಸ್ಟ್‌ ಪಾಸ್‌ ಆಗಿದ್ದಾರೆ .

ಇನ್ನೂ 5,577 ವಿದ್ಯಾರ್ಥಿಗಳು 35% ನಿಂದ 33% ಪಾಸಿಂಗ್ ಅಂಕದಿಂದ ಉತ್ತೀರ್ಣ ಆಗಿದ್ದಾರೆ. ಕಳೆದ ಬಾರಿ ಕಲ್ಯಾಣ ಕರ್ನಾಟಕ ಭಾಗದಲ್ಲಿ 61% ವಿದ್ಯಾರ್ಥಿಗಳು ಪಿಯುಸಿಯಲ್ಲಿ ಉತ್ತೀರ್ಣವಾಗಿದ್ದರೆ, ಈ ಬಾರಿ (2026) 79ರಷ್ಟು ವಿದ್ಯಾರ್ಥಿಗಳು ಪಾಸಾಗಿದ್ದಾರೆ. ಅಂದರೆ ಒಟ್ಟು ತೇರ್ಗಡೆಯಲ್ಲಿ 18ರಷ್ಟು ಪ್ರಗತಿ ಸಾಧಿಸಿದೆ.

ಇದೇ ಮೊದಲ ಬಾರಿಗೆ ವಿದ್ಯಾರ್ಥಿಗಳ ಫಲಿತಾಂಶದ ಅಂಕಪಟ್ಟಿಯು ಡಿಜಿಲಾಕರ್ ಮೂಲಕ ಲಭ್ಯವಾಗಲಿದೆ. ಒಂದು ವೇಳೆ ವೆಬ್​​ಸೈಟ್​​ನಲ್ಲಿ ರಿಸಲ್ಟ್ ನೋಡುವಾಗ ಸರ್ವರ್ ಸಮಸ್ಯೆ ಎದುರಾದರೆ ಡಿಜಿಲಾಕರ್ ಮೂಲಕವೇ ಮಾರ್ಕ್ಸ್ ಕಾರ್ಡ್ ಪಡೆದುಕೊಳ್ಳಬಹುದು.

ಆಳ್ವಾಸ್‌ ಕಾಲೇಜಿನ ದಿಶಾ ರಾಜ್ಯಕ್ಕೆ ಪ್ರಥಮ :

ವಾಣಿಜ್ಯ ವಿಭಾಗದಲ್ಲಿ ದಕ್ಷಿಣ ಕನ್ನಡ ಜಿಲ್ಲೆಯ ಮೂಡಬಿದಿರೆ ಆಳ್ವಾಸ್‌ ಕಾಲೇಜಿನ ದಿಶಾ ರಾಜ್ಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಪರೀಕ್ಷೆ ನಡುವೆಯೇ ಅಮ್ಮ ನಿಧನರಾದರೂ ದುಃಖ ಹಿಡಿದಿಟ್ಟುಕೊಂಡು 600 ಕ್ಕೆ 600 ಅಂಕ ಗಳಿಸಿ ಸಾಧನೆ ಮಾಡಿದ್ದಾರೆ.

ದ್ವಿತೀಯ ಪಿಯುಸಿ ಪರೀಕ್ಷೆ ಫಲಿತಾಂಶ ಸಂಭ್ರಮದ ನಡುವೆ, ನೋವಿನಲ್ಲೂ ಅಚಲ ಛಲದಿಂದ ಸಾಧನೆಯ ಶಿಖರವೇರಿದ ದಕ್ಷಿಣ ಕನ್ನಡದ ವಿದ್ಯಾರ್ಥಿನಿ ದಿಶಾ ಅವರ ಕಥೆ ಎಲ್ಲರ ಕಣ್ಣಂಚನ್ನು ಒದ್ದೆ ಮಾಡಿದೆ.

ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ವಿದ್ಯಾರ್ಥಿನಿ ದಿಶಾ, ಪರೀಕ್ಷೆಗೆ ಸಕಲ ಸಿದ್ಧತೆ ಮಾಡಿಕೊಂಡು ಆತ್ಮವಿಶ್ವಾಸದಿಂದಲೇ ಪರೀಕ್ಷಾ ಕೇಂದ್ರಕ್ಕೆ ಕಾಲಿಟ್ಟಿದ್ದರು. ಮೊದಲ ಮೂರು ಪರೀಕ್ಷೆಗಳು ಮುಗಿದಿದ್ದವು. ಆದರೆ, ವಿಧಿ ಆಡಿದ ಆಟವೇ ಬೇರೆಯಾಗಿತ್ತು. ಪರೀಕ್ಷೆ ನಡೆಯುತ್ತಿರುವಾಗಲೇ ದಿಶಾ ಅವರ ತಾಯಿ ಆಕಸ್ಮಿಕವಾಗಿ ನಿಧನರಾದರು. ತಲೆಯ ಮೇಲೆ ಆಕಾಶವೇ ಕಳಚಿ ಬಿದ್ದಂತಹ ಪರಿಸ್ಥಿತಿ.

ಒಂದೆಡೆ ಹೆತ್ತ ತಾಯಿಯನ್ನು ಕಳೆದುಕೊಂಡ ದುಃಖ, ಇನ್ನೊಂದೆಡೆ ಭವಿಷ್ಯವನ್ನು ನಿರ್ಧರಿಸುವ ಇನ್ನುಳಿದ ಮೂರು ಪರೀಕ್ಷೆಗಳು. ಈ ಸಂಕಷ್ಟದ ಸಮಯದಲ್ಲಿ ಧೃತಿಗೆಡದ ದಿಶಾ, ತಾಯಿಯ ಕನಸನ್ನು ನನಸು ಮಾಡುವ ದೃಢ ಸಂಕಲ್ಪ ಮಾಡಿದರು. ದುಃಖವನ್ನು ಎದೆಯಲ್ಲೇ ಬಚ್ಚಿಟ್ಟು, ಕಣ್ಣೀರನ್ನು ಹಿಂಗಿಸಿ ಪರೀಕ್ಷೆ ಬರೆದರು. ಅವರ ಈ ಹೋರಾಟಕ್ಕೆ ಕಾಲೇಜು ಆಡಳಿತ ಮಂಡಳಿ ಮತ್ತು ಉಪನ್ಯಾಸಕರು ಸಂಪೂರ್ಣ ಬೆಂಬಲವಾಗಿ ನಿಂತಿದ್ದರು.

ಜಿಲ್ಲಾವಾರು ಫಲಿತಾಂಶ :
ಉಡುಪಿ – ಶೇ96.39
ದಕ್ಷಿಣ ಕನ್ನಡ – ಶೇ 96.35
ಬೆಂಗಳೂರು ದಕ್ಷಿಣ – ಶೇ 90.55
ಕೊಡಗು – ಶೇ 92.34
ಬೆಂಗಳೂರು ಉತ್ತರ – ಶೇ 90.05
ಉತ್ತರ ಕನ್ನಡ – ಶೇ 91.78
ಶಿವಮೊಗ್ಗ – ಶೇ 87.62
ಬೆಂಗಳೂರು ಗ್ರಾಮಾಂತರ – ಶೇ 91.00
ಚಿಕ್ಕಮಗಳೂರು – ಶೇ 90.80
ಹಾಸನ – ಶೇ 89.71
ಚಿಕ್ಕಬಳ್ಳಾಪುರ – ಶೇ 90.24
ಮೈಸೂರು – ಶೇ 84.80
ಚಾಮರಾಜನಗರ – ಶೇ 84.68
ಮಂಡ್ಯ – ಶೇ 88.85
ಬಾಗಲಕೋಟೆ – ಶೇ 84.12
ಕೋಲಾರ – ಶೇ 87.38
ಧಾರವಾಡ – ಶೇ 83.31
ತುಮಕೂರು – ಶೇ 86.89
ರಾಮನಗರ – ಶೇ 87.90
ದಾವಣಗೆರೆ – ಶೇ 81.99
ಹಾವೇರಿ – ಶೇ 84.11
ಬೀದರ್ – ಶೇ 84.61
ಕೊಪ್ಪಳ – ಶೇ 88.80
ಚಿಕ್ಕೋಡಿ – ಶೇ 83.10
ಗದಗ – ಶೇ 76.65 .
ಬೆಳಗಾವಿ – ಶೇ 80.32
ಬಳ್ಳಾರಿ – ಶೇ 78.69
ಚಿತ್ರದುರ್ಗ – ಶೇ 79.12
ವಿಜಯಪುರ – ಶೇ 92.00
ರಾಯಚೂರು – ಶೇ 74.09
ಕಲಬುರಗಿ – ಶೇ76.97
ಯಾದಗಿರಿ – ಶೇ 71.21

ವಿಭಾಗವಾರು ಪಹಲಿತಾಂಶ :
ಕಲಾ ವಿಭಾಗ-ಶೇ-72.86
ವಾಣಿಜ್ಯ ವಿಭಾಗ-ಶೇ 88.04
ವಿಜ್ಞಾನ ವಿಭಾಗ- ಶೇ 91.69

ಉತ್ತೀರ್ಣರಾದ ವಿದ್ಯಾರ್ಥಿಗಳ ವಿವರ :
ಒಟ್ಟು ವಿದ್ಯಾರ್ಥಿಗಳು- 7,10,363
ಪರೀಕ್ಷಿಗೆ ಹಾಜರಾದ ವಿದ್ಯಾರ್ಥಿಗಳು-6,37,805
ಉತ್ತೀರ್ಣರಾದ ವಿದ್ಯಾರ್ಥಿಗಳು-4,68,439

ಪಿಯುಸಿ ಟಾಪರ್ಸ್ :
ವಾಣಿಜ್ಯ ವಿಭಾಗ
ಅದಿತಿ ಬಾಪು – 600ಕ್ಕೆ 600 ಅಂಕ
ಜೈನ್ ಕಾಲೇಜ್, ಬೆಂಗಳೂರು

ದಿಶಾ – 600ಕ್ಕೆ 600 ಅಂಕ
ಆಳ್ವಾಸ್ ಕಾಲೇಜ್, ಮೂಡಬಿದ್ರೆ

ವಿಜ್ಞಾನ ವಿಭಾಗ :
ಪ್ರಿನ್ಸಿಲಾ ಕಾರ್ಡೋಜಾ – 600ಕ್ಕೆ 599 ಅಂಕ
ಲರ್ನಿಂಗ್‌ ಸೆಂಟರ್ ಕಾಲೇಜ್,ಮಂಗಳೂರು

ಕಲಾ ವಿಭಾಗ :
ಸಂಗೀತಾ – 600ಕ್ಕೆ 598 ಅಂಕ
ಇಂದು ಪಿಯು ಕಾಲೇಜ್, ಕೊಟ್ಟೂರು (ವಿಜಯನಗರ)

ಅರ್ಚನಾ – 600ಕ್ಕೆ 598 ಅಂಕ
ಇಂದು ಪಿಯು ಕಾಲೇಜ್, ಕೊಟ್ಟೂರು (ವಿಜಯನಗರ)

RELATED ARTICLES

Latest News