Wednesday, April 29, 2026
Homeಅಂತಾರಾಷ್ಟ್ರೀಯಪಾಕ್‌ನಲ್ಲಿ ಮತ್ತೊಬ್ಬ ಎಲ್‌ಇಟಿ ಉಗ್ರನ ಹುಟ್ಟಡಗಿಸಿದ 'ಅಪರಿಚಿತ ಬಂದೂಕುಧಾರಿ'

ಪಾಕ್‌ನಲ್ಲಿ ಮತ್ತೊಬ್ಬ ಎಲ್‌ಇಟಿ ಉಗ್ರನ ಹುಟ್ಟಡಗಿಸಿದ ‘ಅಪರಿಚಿತ ಬಂದೂಕುಧಾರಿ’

Who Was Sheikh Yousuf Afridi, Lashkar Terrorist Shot Dead By Gunmen In Pakistan

ಇಸ್ಲಾಮಾಬಾದ್‌, ಏ. 27- ಲಷ್ಕರ್‌-ಎ-ತೊಯ್ಬಾ ಕಮಾಂಡರ್‌ ಶೇಖ್‌ ಯೂಸುಫ್‌ ಅಫ್ರಿದಿಯನ್ನು ಪಾಕಿಸ್ತಾನದಲ್ಲಿ ಅಪರಿಚಿತ ಬಂದೂಕುಧಾರಿಗಳು ಗುಂಡಿಕ್ಕಿ ಕೊಂದಿದ್ದಾರೆ. ಈ ಮೂಲಕ ಕಳೆದ ಕೆಲವು ತಿಂಗಳುಗಳಿಂದ ಪಾಕಿಸ್ತಾನದ ಸುರಕ್ಷಿತ ತಾಣಗಳಲ್ಲಿ ಅಡಗಿರುವ ಉಗ್ರರ ಮೇಲೆ ನಡೆಯುತ್ತಿರುವ ದಾಳಿಗಳ ಸರಣಿ ಮತ್ತೊಂದು ತಿರುವು ಪಡೆದುಕೊಂಡಿದೆ.

ಆರಂಭಿಕ ವರದಿಗಳ ಪ್ರಕಾರ, ಅಫ್ರಿದಿ ಮೇಲೆ ದಾಳಿಕೋರರು ಹಲವು ಸುತ್ತು ಗುಂಡು ಹಾರಿಸಿದ್ದಾರೆ. ಅಮೆರಿಕದಿಂದ ನಿಷೇಧಕ್ಕೊಳಗಾಗಿರುವ ಲಷ್ಕರ್‌ ಸಂಘಟನೆಯ ಕಾರ್ಯಾಚರಣೆಗಳಲ್ಲಿ ಅಫ್ರಿದಿ ಪ್ರಮುಖ ಕೊಂಡಿಯಾಗಿದ್ದ ಎನ್ನಲಾಗಿದೆ. ತನಿಖಾಧಿಕಾರಿಗಳ ಪ್ರಕಾರ, ಇದು ಪಕ್ಕಾ ಯೋಜಿತ ಟಾರ್ಗೆಟೆಡ್‌ ಕಿಲ್ಲಿಂಗ್‌‍ ಆಗಿದ್ದು, ದಾಳಿಕೋರರು ಅಫ್ರಿದಿಗೆ ತಪ್ಪಿಸಿಕೊಳ್ಳಲು ಯಾವುದೇ ಅವಕಾಶ ನೀಡಿಲ್ಲ.ಇತ್ತೀಚಿನ ತಿಂಗಳುಗಳಲ್ಲಿ ಪಾಕಿಸ್ತಾನದ ಪ್ರಮುಖ ನಗರಗಳಲ್ಲಿ ಭಯೋತ್ಪಾದಕರಿಗೆ ಉಳಿಗಾಲವಿಲ್ಲದಂತಾಗಿದೆ.

ಕಳೆದ ತಿಂಗಳು ಲಾಹೋರ್‌ನಲ್ಲಿ ಲಷ್ಕರ್‌ ಸ್ಥಾಪಕ ಸದಸ್ಯ ಅಮೀರ್‌ ಹಮ್ಜಾನನ್ನು ಗುಂಡಿಕ್ಕಿ ಕೊಲ್ಲಲಾಗಿತ್ತು.ಜೈಶ್‌‍-ಎ-ಮೊಹಮ್ಮದ್‌ ಮುಖ್ಯಸ್ಥ ಮೌಲಾನಾ ಮಸೂದ್‌ ಅಜರ್‌ನ ಹಿರಿಯ ಸಹೋದರ ತಾಹಿರ್‌ ಅನ್ವರ್‌ ಕೂಡ ನಿಗೂಢ ಸಂದರ್ಭದಲ್ಲಿ ಸಾವನ್ನಪ್ಪಿದ್ದ. ರಿಯಾಸಿ ದಾಳಿಯ ಮಾಸ್ಟರ್‌ಮೈಂಡ್‌‍ ಕತಲ್‌ ಸಿಂಧಿಯನ್ನು ಕಳೆದ ವರ್ಷ ಝೇಲಂನಲ್ಲಿ ಹತ್ಯೆ ಮಾಡಲಾಗಿತ್ತು.

2023 ರಿಂದ ಪ್ರಾರಂಭವಾದ ಈ ಮಾದರಿಯ ಹತ್ಯೆಗಳು 2026 ರಲ್ಲಿ ತೀವ್ರಗೊಂಡಿವೆ. ಕೇವಲ ಈ ವರ್ಷವೊಂದರಲ್ಲೇ ಲಷ್ಕರ್‌-ಎ-ತೊಯ್ಬಾ ಮತ್ತು ಹಿಜ್ಬುಲ್‌ ಮುಜಾಹಿದ್ದೀನ್‌ನಂತಹ ಸಂಘಟನೆಗಳಿಗೆ ಸಂಬಂಧಿಸಿದ ಕನಿಷ್ಠ 30 ಭಯೋತ್ಪಾದಕರನ್ನು ಲಾಹೋರ್‌, ಕರಾಚಿ ಮತ್ತು ಗಡಿ ಪ್ರದೇಶಗಳಲ್ಲಿ ಹತ್ಯೆ ಮಾಡಲಾಗಿದೆ. ಈ ಅಪರಿಚಿತ ಬಂದೂಕುಧಾರಿಗಳು ಯಾರು ಎಂಬುದು ಪಾಕಿಸ್ತಾನದ ಗುಪ್ತಚರ ಸಂಸ್ಥೆ ಐಎಸ್‌‍ಐಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ.

RELATED ARTICLES

Latest News