Homeಇದೀಗ ಬಂದ ಸುದ್ದಿಸ್ನೇಹಿತೆಯ ಖಾಸಗಿ ಫೋಟೋ ವೈರಲ್‌ ಮಾಡಿದ ಮಹಿಳೆ ಬಂಧನ

ಸ್ನೇಹಿತೆಯ ಖಾಸಗಿ ಫೋಟೋ ವೈರಲ್‌ ಮಾಡಿದ ಮಹಿಳೆ ಬಂಧನ

ಬೆಂಗಳೂರು,ಜೂ.19-ಸ್ನೇಹಿತೆ ಮೇಲಿನ ದ್ವೇಷಕ್ಕೆ ಬಾಯ್‌ಫ್ರೆಂಡ್‌ ಜೊತೆಗಿರುವ ಖಾಸಗಿ ಫೋಟೋಗಳನ್ನು ಆಕೆಯ ಪತಿಗೆ ಕಳುಹಿಸಿದ್ದಲ್ಲದೇ ವೈರಲ್‌ ಮಾಡುವುದಾಗಿ ಬೆದರಿಕೆ ಹಾಕಿದ್ದ ಮಹಿಳೆಯನ್ನು ಚಾಮರಾಜಪೇಟೆ ಠಾಣೆ ಪೊಲೀಸರು ಬಂಧಿಸಿದ್ದಾರೆ. ಚಾಮರಾಜಪೇಟೆ ನಿವಾಸಿ ಶ್ವೇತಾ ಬಂಧಿತ ಆರೋಪಿ. ಇಬ್ಬರು ಸ್ನೇಹಿತೆಯರ ನಡುವಿನ ವೈಯಕ್ತಿಕ ಜಗಳ ದ್ವೇಷಕ್ಕೆ ತಿರುಗಿ ಕುಟುಂಬಗಳಲ್ಲಿ ಕಲಹ ಉಂಟಾಗಿದೆ.

ತನ್ನ ಸ್ನೇಹಿತೆ ಬಾಯ್‌ಫ್ರೆಂಡ್‌ ಜೊತೆ ಇರುವ ಫೋಟೋಗಳನ್ನು ಆತನ ಮೊಬೈಲ್‌ನಿಂದ ತನ್ನ ಮೊಬೈಲ್‌ಗೆ ಕಳುಹಿಸಿಕೊಂಡ ಮಹಿಳೆ ಆ ಫೋಟೋಗಳನ್ನು ಆಕೆಯ ಪತಿ ಹಾಗೂ ಕುಟುಂಬದವರ ಮೊಬೈಲ್‌ಗೆ ಕಳುಹಿಸಿದ್ದಲ್ಲದೇ, ಆಕೆಯ ಬಗ್ಗೆ ಕೆಟ್ಟದಾಗಿ ಮೆಸೇಜ್‌ ಮಾಡಿದ್ದರು. ಫೋಟೋಗಳನ್ನು ಪತಿ ನೋಡಿ ಪತ್ನಿ ಜೊತೆ ಜಗಳವಾಡಿದ್ದಾರೆ. ಈ ವಿಚಾರವಾಗಿ ನಡೆದ ಗಲಾಟೆಯಿಂದ ಪತ್ನಿ ಆತಹತ್ಯೆಗೆ ಯತ್ನಿಸಿದ್ದಾರೆ.
ಮನೆಯಲ್ಲಾಗುತ್ತಿರುವ ಗಲಾಟೆಯಿಂದ ಪತಿ ಕಂಗಾಲಾಗಿ ಫೋಟೋ ಕಳುಹಿಸಿರುವ ಮಹಿಳೆ ವಿರುದ್ಧ ದೂರು ನೀಡಿದ್ದಾರೆ. ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಇದೀಗ ಮಹಿಳೆಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.

ಬಿಎಂಟಿಸಿ ಬಸ್‌‍ ಡಿಕ್ಕಿ : ಗಾರೆ ಮೇಸ್ತ್ರಿ ಸಾವು
ಬೆಂಗಳೂರು,ಜೂ.19- ಅತಿ ವೇಗವಾಗಿ ಮುನ್ನುಗ್ಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕಲ್‌ ಬಸ್‌‍ ರಸ್ತೆ ದಾಟುತ್ತಿದ್ದ ಗಾರೆ ಮೇಸ್ತ್ರಿಗೆ ಡಿಕ್ಕಿ ಹೊಡೆದ ಪರಿಣಾಮ ಅವರು ಮೃತಪಟ್ಟಿರುವ ಘಟನೆ ಜ್ಞಾನಭಾರತಿ ಸಂಚಾರಿ ಪೊಲೀಸ್‌‍ ಠಾಣಾ ವ್ಯಾಪ್ತಿಯಲ್ಲಿ ರಾತ್ರಿ ನಡೆದಿದೆ.

ಮೂಲತಃ ಮಂಡ್ಯ ಜಿಲ್ಲೆಯವರಾದ ರಾಜು (57) ಮೃತಪಟ್ಟ ಪಾದಚಾರಿ. ಇವರು ಗಾರೆ ಮೇಸ್ತ್ರಿ ಕೆಲಸ ಮಾಡುತ್ತಿದ್ದರು. ಉಲ್ಲಾಳ ಉಪನಗರದಲ್ಲಿ ವಾಸವಾಗಿದ್ದ ರಾಜು ಅವರು ನಿನ್ನೆ ರಾತ್ರಿ 7.20 ರ ಸುಮಾರಿನಲ್ಲಿ ಕೆಲಸ ಮುಗಿಸಿಕೊಂಡು ಉಲ್ಲಾಳ ರಸ್ತೆ, ಮಂಗನಹಳ್ಳಿ ಕ್ರಾಸ್‌‍ ಬಳಿ ರಸ್ತೆ ದಾಟುತ್ತಿದ್ದಾಗ ಅತಿ ವೇಗವಾಗಿ ಬಂದ ಬಿಎಂಟಿಸಿ ಎಲೆಕ್ಟ್ರಿಕಲ್‌ ಬಸ್‌‍ ಡಿಕ್ಕಿ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ಮೃತಪಟ್ಟಿದ್ದಾರೆ.

ಸುದ್ದಿ ತಿಳಿದು ಜ್ಞಾನಭಾರತಿ ಸಂಚಾರಿ ಠಾಣೆ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಮೃತದೇಹವನ್ನು ವಿಕ್ಟ್ರೋರಿಯಾ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆಗೆ ಒಳಪಡಿಸಿ ನಂತರ ವಾರಸುದಾರರಿಗೆ ಹಸ್ತಾಂತರಿಸಿದ್ದಾರೆ. ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

RELATED ARTICLES

Latest News