ನಿತ್ಯ ನೀತಿ : ಸಂತೋಷ ಎನ್ನುವುದು ಹತ್ತು ಸಾವಿರ ಖರ್ಚು ಮಾಡಿ ಹತ್ತು ಊರು ತಿರುಗಿದರೆ ಬರುವುದಿಲ್ಲ. ನಮ್ಮವರು ಎಂದುಕೊಳ್ಳುವವರ ಜತೆ ಹತ್ತು ನಿಮಿಷವಾದರೂ ಮನಸ್ಸು ಬಿಚ್ಚಿ ಮಾತನಾಡಿದರೆ ನಿಜವಾದ ಸಂತೋಷ ಸಿಗುತ್ತದೆ.
ಪಂಚಾಂಗ: ಭಾನುವಾರ, 06-09-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಶರದ / ಮಾಸ: ಶ್ರಾವಣ / ಪಕ್ಷ: ಕೃಷ್ಣ / ತಿಥಿ: ದಶಮಿ / ನಕ್ಷತ್ರ: ಆರಿದ್ರಾ / ಯೋಗ: ಸಿದ್ಧಿ / ಕರಣ: ವಣಿಜ್
ಸೂರ್ಯೋದಯ – ಬೆ.6.10
ಸೂರ್ಯಾಸ್ತ – 06.30
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30
ರಾಶಿಭವಿಷ್ಯ :
ಮೇಷ: ಸ್ವಂತ ಉದ್ಯಮದಲ್ಲಿ ಹೊಸ ಬಗೆಯ ಪೈಪೋಟಿ ಇರಲಿದೆ. ಆರೋಗ್ಯದಲ್ಲಿ ಏರುಪೇರು.
ವೃಷಭ: ಹಣ ಕಳೆದುಕೊಳ್ಳುವ ಸಂಭವವಿದೆ. ಆರೋಗ್ಯದ ಬಗ್ಗೆ ಹೆಚ್ಚು ಕಾಳಜಿ ವಹಿಸಿ.
ಮಿಥುನ: ಕುಟುಂಬದ ಅಗತ್ಯಗಳನ್ನು ಪೂರೈಸುವುದರಲ್ಲಿ ಅನೇಕ ಬಾರಿ ನಿಮಗಾಗಿ ಸಮಯ ನೀಡುವುದನ್ನೇ ಮರೆತುಹೋಗುತ್ತೀರಿ.
ಕಟಕ: ದೀರ್ಘಕಾಲದ ಸಮಸ್ಯೆಗಳಿಗೆ ಪರಿಹಾರ ಶಾಶ್ವತ ಸಿಗಲಿದೆ.
ಸಿಂಹ: ತಾವು ಬಯಸಿದ ಕ್ಷೇತ್ರದಲ್ಲಿ ಸಾಧನೆ ಮಾಡುವಲ್ಲಿ ಯಶಸ್ವಿಯಾಗುವಿರಿ.
ಕನ್ಯಾ: ದೂರ ಪ್ರಯಾಣ. ಖರ್ಚು ಹೆಚ್ಚಾಗುವ ಸಂಭವ. ಮಾತನಾಡುವಾಗ ಎಚ್ಚರಿಕೆ ಇರಲಿ.
ತುಲಾ: ಕಿರಿಯ ಸಹೋದರ ರೊಂದಿಗೆ ಹೆಚ್ಚು ಸಮಯ ಕಳೆಯಲು ಯತ್ನಿಸುವಿರಿ.
ವೃಶ್ಚಿಕ: ನಿಮ್ಮ ಸುತ್ತಲೂ ನಡೆಯುತ್ತಿರುವ ಕಾರ್ಯಚಟುವಟಿಕೆಗಳ ಬಗ್ಗೆ ಜಾಗರೂಕರಾಗಿರಿ.
ಧನುಸ್ಸು: ಗಣ್ಯ ವ್ಯಕ್ತಿಗಳ ಭೇಟಿಯಿಂದ ವ್ಯಾಪಾರ- ವ್ಯವಹಾರಗಳಿಗೆ ಅನುಕೂಲವಾಗಲಿದೆ.
ಮಕರ: ಪತ್ನಿಯ ಬೆಂಬಲದೊಂದಿಗೆ ಎಲ್ಲ ಸಮಸ್ಯೆಗಳಿಗೂ ಪರಿಹಾರ ಕಂಡುಕೊಳ್ಳುವಿರಿ.
ಕುಂಭ: ಮಹಿಳೆಯರು ಭಾವೋದ್ವೇಗದಿಂದ ಮಾತನಾಡಿದರೆ ಅವರ ಗೌರವಕ್ಕೆ ಚ್ಯುತಿ ಬರಬಹುದು.
ಮೀನ: ಉದ್ಯೋಗದಲ್ಲಿ ನಿರಾತಂಕವಾಗಿ ಮುನ್ನಡೆ ಯುವಿರಿ. ವೈಯಕ್ತಿಕವಾಗಿ ಉನ್ನತಿ ಸಾ ಸುವಿರಿ.
