Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-06-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (07-06-2026)

Today's Horoscope

ನಿತ್ಯ ನೀತಿ : ಸದಾ ಹಣ ಗಳಿಸುವುದೇ ಜೀವನವಲ್ಲ. ಈ ಭೂಮಿ ನಮ ತಾತ್ಕಾಲಿಕ ವಸತಿ ಎಂಬುದನ್ನು ಆಗಾಗ ನೆನಪಿಸಿಕೊಳ್ಳೋಣ..!

ಪಂಚಾಂಗ : ಭಾನುವಾರ, 07-06-2026
ಪರಾಭವ ನಾಮ ಸಂವತ್ಸರ / ಆಯನ: ಉತ್ತರಾಯಣ / ಋತು: ಸೌರ ಗ್ರೀಷ / ಮಾಸ: ಅಧಿಕ ಜ್ಯೇಷ್ಠ / ಪಕ್ಷ: ಕೃಷ್ಣ / ತಿಥಿ: ಸಪ್ತಮಿ / ನಕ್ಷತ್ರ: ಧನಿಷ್ಠಾ / ಯೋಗ: ವೈಧೃತಿ / ಕರಣ: ವಿಷ್ಠಿ
ಸೂರ್ಯೋದಯ – ಬೆ.5.54
ಸೂರ್ಯಾಸ್ತ – 06.45
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30

ರಾಶಿಭವಿಷ್ಯ :
ಮೇಷ: ಇತರರ ಮಾತು ಕೇಳಿ ನಿರ್ಧಾರ ಕೈಗೊಳ್ಳದಿರುವುದು ಒಳಿತು.
ವೃಷಭ: ವ್ಯವಹಾರದಲ್ಲಿನ ಯೋಜನೆ ಹಾಗೂ ಅವು ಗಳ ಬೆಳವಣಿಗೆಗಳ ಬಗ್ಗೆ ತಿಳಿದುಕೊಳ್ಳುವುದು ಒಳಿತು.
ಮಿಥುನ: ಉತ್ತಮ ನಿವೇಶನ ಲಭ್ಯವಾಗಲಿದೆ. ನ್ಯಾಯಾಲಯದ ಕೆಲಸ ನಿಧಾನಗತಿಯಲ್ಲಿ ಸಾಗುವುದು.

ಕಟಕ: ನೀವು ಕಂಡ ಕನಸು ಗಳಿಗೆ ಹಿರಿಯರ ಬೆಂಬಲ ಸಿಗಲಿದೆ. ಮಕ್ಕಳಿಂದ ಸಂತೋಷ ಉಂಟಾಗುವುದು.
ಸಿಂಹ: ನಿಮ್ಮ ಕೆಲಸವನ್ನು ಇತರರ ವೃತ್ತಿಗೆ ಹೋಲಿಸಿ ಕೀಳರಿಮೆ ಬೆಳೆಸಿಕೊಳ್ಳದಿರಿ.
ಕನ್ಯಾ: ಉದ್ಯೋಗಿಗಳಿಗೆ ಅನಿರೀಕ್ಷಿತ ವರ್ಗಾವಣೆ ಯಾಗುವ ಸಾಧ್ಯತೆಗಳು ಹೆಚ್ಚಾಗಿವೆ.

ತುಲಾ: ಶ್ರಮ ಹೆಚ್ಚಿದ್ದರೂ ದುಡಿಮೆ ಲಾಭದಾಯಕ ವಾಗಿರುತ್ತದೆ. ಹಣಕಾಸಿನ ಸಂಸ್ಥೆಯವರಿಗೆ ಆ ಕ ಒತ್ತಡ.
ವೃಶ್ಚಿಕ: ಬ್ಯಾಂಕ್‌ ನೌಕರರಿಗೆ ಕೆಲಸದ ಒತ್ತಡ ಹೆಚ್ಚಾಗಿರು ತ್ತದೆ. ಆರೋಗ್ಯದ ವಿಚಾರದಲ್ಲಿ ನಿರ್ಲಕ್ಷ್ಯ ವಹಿಸದಿರಿ.
ಧನುಸ್ಸು: ಕಲಾವಿದರಿಗೆ ವಿಶೇಷ ಅವಕಾಶ ಸಿಗಲಿದೆ.

ಮಕರ: ರಾಜಕೀಯ ಕ್ಷೇತ್ರದಲ್ಲಿರುವವರಿಗೆ ಪದವಿ ಪ್ರಾಪ್ತಿಯಾಗುವುದು. ಅಧಿಕ ಧನಲಾಭ.
ಕುಂಭ: ದಂಪತಿ ಮಧ್ಯೆ ಸಣ್ಣ- ಪುಟ್ಟ ವಿಚಾರಕ್ಕೂ ಭಿನ್ನಾಭಿಪ್ರಾಯಗಳು ಉಂಟಾಗುವ ಸಾಧ್ಯತೆಗಳಿವೆ.
ಮೀನ: ವ್ಯಾಪಾರದಲ್ಲಿ ಲಾಭವಿದೆ. ಅಪರಿಚಿತ ರೊಂದಿಗೆ ಹೆಚ್ಚು ಸಮಯ ಕಳೆಯದಿರಿ.

RELATED ARTICLES

Latest News