ನಿತ್ಯ ನೀತಿ : ಸಮಯ ಒಳ್ಳೆಯದಾಗಲಿ ಅಥವಾ ಕೆಟ್ಟದಾಗಿರಲಿ ಅದು ಕಳೆದು ಹೋಗುತ್ತದೆ. ಆದರೆ, ಆ ಸಮಯದಲ್ಲಿ ಆಡಿದ ಮಾತು ಮತ್ತು ವ್ಯಕ್ತಿ ಸದಾ ನೆನಪಿನಲ್ಲಿರುತ್ತಾರೆ.
ಪಂಚಾಂಗ : ಭಾನುವಾರ, 08-02-2026
ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಮಾಘ / ಪಕ್ಷ: ಕೃಷ್ಣ / ತಿಥಿ: ಸಪ್ತಮಿ / ನಕ್ಷತ್ರ: ಸ್ವಾತಿ / ಯೋಗ: ಗಂಡ / ಕರಣ: ವಿಷ್ಟಿ
ಸೂರ್ಯೋದಯ – 06.46
ಸೂರ್ಯಾಸ್ತ – 6.26
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30
ರಾಶಿಭವಿಷ್ಯ :
ಮೇಷ: ಸಾಂಸಾರಿಕ ಜೀವನ ತೃಪ್ತಿಕರವಾಗಿರಲಿದೆ. ನೌಕರರಿಗೆ ಹೊಸ ವಸತಿ ವ್ಯವಸ್ಥೆಯಾಗಲಿದೆ.
ವೃಷಭ: ಕುಟುಂಬ ಸದಸ್ಯರು, ಸ್ನೇಹಿತರೊಂದಿಗೆ ಸಂತಸದಿಂದ ಕೆಲಕಾಲ ಕಳೆಯುವಿರಿ.
ಮಿಥುನ: ದಾಯಾದಿ ಕಲಹವಾಗಬಹುದು. ದೂರ ಪ್ರಯಾಣ ಮಾಡದಿರುವುದು ಒಳಿತು.
ಕಟಕ: ಕೌಟುಂಬಿಕ ಕಲಹಗಳು ಬೀದಿಗೆ ಬರುವ ಸಾಧ್ಯತೆಗಳಿವೆ. ಸಹೋದ್ಯೋಗಿಗಳೇ ಶತ್ರುಗಳಾಗುವರು.
ಸಿಂಹ: ಕೆಲಸ-ಕಾರ್ಯ ಗಳು ಮಂದಗತಿಯಲ್ಲಿ ಸಾಗಲಿವೆ. ಉದ್ಯೋಗಿಗಳು ಅಲ್ಪ ಪ್ರಗತಿ ಕಾಣುವರು.
ಕನ್ಯಾ: ವೈದ್ಯರಿಗೆ ವಿಶೇಷ ರೀತಿಯ ಅನುಭವ ಸಿಗಲಿದೆ. ಮೇಲ ಕಾರಿಗಳೊಂದಿಗೆ ಮೆಚ್ಚುಗೆ ಪಡೆಯಲು ಹೆಚ್ಚಿನ ಪ್ರಯತ್ನ ನಡೆಸಿ.
ತುಲಾ: ಸದುದ್ದೇಶದಿಂದ ಕೆಲವು ಕೆಲಸಗಳನ್ನು ಗೌಪ್ಯವಾಗಿ ನಿರ್ವಹಿಸುವುದು ಬಹಳ ಒಳಿತು.
ವೃಶ್ಚಿಕ: ಹೊಸ ಕೆಲಸ ಆರಂಭಿಸಲು ಕುಟುಂಬ ದವರೊಂದಿಗೆ ಚರ್ಚಿಸಿ ತೀರ್ಮಾನ ಕೈಗೊಳ್ಳಿ.
ಧನುಸ್ಸು: ದೂರ ಪ್ರಯಾಣದಿಂದ ಮನಸ್ಸಿಗೆ ನೆಮ್ಮದಿ ಸಿಗಬಹುದು. ಮಕ್ಕಳಿಂದ ಸಂತೋಷ ಸಿಗಲಿದೆ.
ಮಕರ: ಸಮಾಧಾನದಿಂದ ಕಾರ್ಯನಿರ್ವಹಿಸಿದಲ್ಲಿ ಕೆಲಸ-ಕಾರ್ಯಗಳಲ್ಲಿ ಜಯ ಕಟ್ಟಿಟ್ಟ ಬುತ್ತಿ.
ಕುಂಭ: ಉದ್ಯೋಗ ನಿಮಿತ್ತ ಪ್ರಯಾಣ ಮಾಡು ವಿರಿ. ಆರೋಗ್ಯ ಸಮಸ್ಯೆಗೆ ವೈದ್ಯರನ್ನು ಭೇಟಿ ಮಾಡಿ.
ಮೀನ: ಹೊಸದಾಗಿ ಪರಿಚಯವಾಗುವ ಉದ್ಯಮಿ ಯೊಂದಿಗೆ ವ್ಯವಹಾರ ಆರಂಭಿಸಲು ಯೋಚಿಸುವಿರಿ.
