ನಿತ್ಯ ನೀತಿ : ಜೀವನದಲ್ಲಿ ಕೆಲವರ ಮಾತುಗಳಿಗೆ ಬೆಲೆ ಕೊಡುವ ಅಗತ್ಯವಿಲ್ಲ. ನಮ್ಮ ಕೆಲಸ ನಮ್ಮ ಉತ್ತರವಾಗಿರಲಿ
ಪಂಚಾಂಗ : ಭಾನುವಾರ, 15-11-2026
ಸೂರ್ಯೋದಯ – ಬೆ.6.19
ಪರಾಭವ ನಾಮ ಸಂವತ್ಸರ
ಸೂರ್ಯಾಸ್ತ – ಸಂಜೆ.05.51
ರಾಹುಕಾಲ – 4.30-6.00
ಯಮಗಂಡ ಕಾಲ – 12.00-1.30
ಗುಳಿಕ ಕಾಲ – 3.00-4.30
ರಾಶಿಭವಿಷ್ಯ :
ಮೇಷ: ಕಷ್ಟದಲ್ಲಿರುವ ಅಪರಿಚಿತ ವ್ಯಕ್ತಿಗಳಿಗೆ ಸಹಾಯ ಮಾಡುವಿರಿ. ಒತ್ತಡಕ್ಕೆ ಒಳಗಾಗದಿರಿ.
ವೃಷಭ: ಹೊಸ ವಾಹನ ಖರೀದಿಸುವ ಆಲೋಚನೆಯನ್ನು ಮುಂದೂಡುವುದು ಒಳಿತು.
ಮಿಥುನ: ರಾಜಕೀಯ ವರ್ಗದವರಿಗೆ ಜನಪ್ರಿಯತೆ ಹೆಚ್ಚುವುದರಿಂದ ಶತ್ರುಗಳ ಕಾಟ ಹೆಚ್ಚಾಗಲಿದೆ.
ಕಟಕ: ವಿದ್ಯಾರ್ಥಿಗಳು ಪರೀಕ್ಷೆಗಳಲ್ಲಿ ಯಶಸ್ಸು ಪಡೆಯಲು ಹೆಚ್ಚು ಶ್ರಮ ವಹಿಸಬೇಕಾಗುತ್ತದೆ.
ಸಿಂಹ: ಹೆಚ್ಚಿನ ಲಾಭದ ಆಸೆಗೆ ಇರುವ ಉಳಿತಾಯದ ಹಣವನ್ನೂ ಖರ್ಚು ಮಾಡಿ ಸಂಕಷ್ಟಕ್ಕೆ ಸಿಲುಕದಿರಿ.
ಕನ್ಯಾ: ಕೆಲಸದ ಸ್ಥಳದಲ್ಲಿ ಹಿರಿಯ ಅಧಿಕಾರಿಗಳಿಂದ ಪ್ರಶಂಸೆಗೊಳಗಾಗುವಿರಿ.
ತುಲಾ: ಸ್ನೇಹಿತರಿಂದ ಜೀವನ ನಡೆಸಲು ಬೇಕಾದ ಸಹಾಯ ಪಡೆಯುವಿರಿ.
ವೃಶ್ಚಿಕ: ಸಂಕಷ್ಟಗಳಿಂದ ಮುಕ್ತಿ ದೊರೆಯಲಿದೆ. ಸರ್ಕಾರಿ ನೌಕರರಿಗೆ ಅನುಕೂಲವಾಗಲಿದೆ.
ಧನುಸ್ಸು : ಮಕ್ಕಳ ವಿದ್ಯಾಭ್ಯಾಸ ನಿರಾತಂಕವಾಗಿ ಸಾಗಲಿದೆ. ಕುಲದೇವರನ್ನು ಪ್ರಾರ್ಥಿಸಿ.
ಮಕರ: ಸಹೋದರರಲ್ಲಿ ಉಂಟಾದ ಭಿನ್ನಾಭಿಪ್ರಾಯ ಸೇಡಿಗೆ ತಿರುಗುವ ಸಾಧ್ಯತೆಗಳಿವೆ.
ಕುಂಭ: ನಿಮ್ಮ ಅಹಂಕಾರದ ಕಾರಣದಿಂದಾಗಿ ಹಣಕಾಸು ನಷ್ಟ ಅನುಭವಿಸಲಿದ್ದೀರಿ.
ಮೀನ: ತಂದೆ-ತಾಯಿಯರ ಹಿತವಚನವನ್ನು ಸಹನೆಯಿಂದ ಕೇಳುವುದು ಒಳಿತು.
