ನಿತ್ಯ ನೀತಿ : ವಾದ ಮಾಡಿ ನೋವು ಅನುಭವಿಸುವುದಕ್ಕಿಂತ ಹೌದು ನನ್ನದೇ ತಪ್ಪು ಎಂದು ವೌನವಾಗಿ ಇರುವುದು ಉತ್ತಮ.
ಪಂಚಾಂಗ : ಸೋಮವಾರ, 23-03-2026
ಪರಾಭವನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ವಸಂತ / ಮಾಸ: ಚೈತ್ರ / ಪಕ್ಷ: ಶುಕ್ಲ / ತಿಥಿ: ಪಂಚಮಿ / ನಕ್ಷತ್ರ: ಕೃತ್ತಿಕಾ / ಯೋಗ: ವಿಷ್ಕಂಭ / ಕರಣ: ಬವ ಸೂರ್ಯೋದಯ – 06.24
ಸೂರ್ಯಾಸ್ತ – 6.31
ರಾಹುಕಾಲ – 7.30-9.00
ಯಮಗಂಡ ಕಾಲ – 10.30- 12.00
ಗುಳಿಕ ಕಾಲ – 1.30-3.00
ರಾಶಿಭವಿಷ್ಯ :
ಮೇಷ: ಮಿತ್ರರಲ್ಲಿ ಕಂಡುಬರುವ ಭಿನ್ನಾಭಿಪ್ರಾಯ ಹೋಗಲಾಡಿಸಲು ಯತ್ನಿಸುವಿರಿ.
ವೃಷಭ: ಸಮಯವನ್ನು ಸರಿಯಾಗಿ ಬಳಸಿಕೊಂಡು ಬುದ್ಧಿವಂತಿಕೆಯಿಂದ ಹಣ ಹೂಡಿಕೆ ಮಾಡಬೇಕಾಗುತ್ತದೆ.
ಮಿಥುನ: ವ್ಯವಹಾರ ಸಂಬಂಧಿ ಮಾತುಗಳು ಇಂದು ಲ ನೀಡಲಿವೆ.
ಕಟಕ: ಸಂತೋಷವನ್ನು ಇತರರೊಂದಿಗೆ ಹಂಚಿ ಕೊಳ್ಳಲು ಉತ್ತಮ ಅವಕಾಶಗಳು ಸಿಗುವುದಿಲ್ಲಘಿ.
ಸಿಂಹ: ಸಂಗಾತಿಯೊಂದಿಗೆ ಹಣಕಾಸಿನ ಸಮಸ್ಯೆ ಗಳ ಬಗ್ಗೆ ಚರ್ಚಿಸಿ ಪರಿಹಾರ ಕಂಡುಕೊಳ್ಳುವಿರಿ.
ಕನ್ಯಾ: ರಾಜಕೀಯ ಭವಿಷ್ಯದ ಬಗ್ಗೆ ಪ್ರಭಾವಿ ರಾಜಕಾರಣಿಯೊಂದಿಗೆ ಮಾತುಕತೆ ನಡೆಸುವಿರಿ.
ತುಲಾ: ಮಕ್ಕಳಿಗೆ ಹಿಂದೆ ಕೊಟ್ಟಿದ್ದ ಮಾತನ್ನು ಉಳಿಸಿಕೊಳ್ಳಲು ನೀವು ಶಕ್ತಿರಾಗಿರುವಿರಿ.
ವೃಶ್ಚಿಕ: ಮಗಳ ಮದುವೆಯ ಕಾರ್ಯಕಲಾಪಗಳು ಸುಗವಾಗಿ ಸಾಗುವುದರಿಂದ ನೆಮದಿ ಇರಲಿದೆ.
ಧನುಸ್ಸು: ನೀವು ಯೋಚಿಸಿದಂತೆಯೇ ಸನ್ನಿವೇಶಗಳು ಎದುರಾಗಿ ಅಚ್ಚರಿ ಮೂಡಿಸಲಿವೆ.
ಮಕರ: ವಿದ್ಯಾರ್ಥಿಗಳು ಓದಿನ ಬಗ್ಗೆ ಹೆಚ್ಚು ಗಮನ ಹರಿಸಿ. ಅನಗತ್ಯ ಚರ್ಚೆ ಬೇಡ.
ಕುಂಭ: ತುರ್ತು ವಿಷಯಗಳ ಬಗ್ಗೆ ಹೆಚ್ಚಾಗಿ ಗಮನ ಹರಿಸಿ. ಕೌಟುಂಬಿಕ ಸಂಬಂಧಗಳು ಗಟ್ಟಿಗೊಳ್ಳಲಿವೆ.
ಮೀನ: ಹಲವು ದಿನಗಳಿಂದ ಬರಬೇಕಾಗಿರುವ ಹಣ ಸಂಜೆ ವೇಳೆಗೆ ಕೈ ಸೇರುವುದು.
