ನಿತ್ಯ ನೀತಿ : ಬದುಕುವುದು ಸುಲಭ. ಆದರೆ, ಬದುಕುವ ಮಾರ್ಗ ಯಾವುದೆಂಬುದೇ ಮುಖ್ಯ. ಆಲೋಚನೆಯ ದೃಷ್ಟಿಕೋನ ಅವರ ಸ್ಥಿತಿಗತಿಗಳನ್ನು ನಿರ್ಧರಿಸುತ್ತದೆ.
ಪಂಚಾಂಗ : ಶನಿವಾರ, 29-08-2026
ಪರಾಭವ ನಾಮ ಸಂವತ್ಸರ / ಆಯನ:ದಕ್ಷಿಣಾಯನ ಋತು: ಸೌರ ಶರದ / ಮಾಸ: ಶ್ರಾವಣ / ಪಕ್ಷ: ಕೃಷ್ಣ / ತಿಥಿ: ಪ್ರತಿಪದಾ / ನಕ್ಷತ್ರ: ಪೂ.ಭಾ. / ಯೋಗ: ಸುಕರ್ಮಾ / ಕರಣ: ತೈತಿಲ
ಸೂರ್ಯೋದಯ – ಬೆ.6.09
ಸೂರ್ಯಾಸ್ತ – 06.35
ರಾಹುಕಾಲ – 9.00-10.30
ಯಮಗಂಡ ಕಾಲ – 1.00- 3.00
ಗುಳಿಕ ಕಾಲ – 6.00-7.30
ರಾಶಿಭವಿಷ್ಯ :
ಮೇಷ: ಸ್ತ್ರೀಯರಿಗೆ ತವರು ಮನೆಯಿಂದ ಆಸ್ತಿಯಲ್ಲಿ ಭಾಗ ಬರಬಹುದು. ಅವಿವಾಹಿತರಿಗೆ ವಿವಾಹ ಭಾಗ್ಯ.
ವೃಷಭ: ವೈದ್ಯಕೀಯ ವೆಚ್ಚ ಹೆಚ್ಚಾಗುವುದರಿಂದ ಸಾಲ ಮಾಡಬೇಕಾದ ಸಂದರ್ಭಗಳು ಬರಬಹುದು.
ಮಿಥುನ: ನಿಮ್ಮ ಮೇಲೆ ಬಾಕಿ ಇರುವ ಕೆಲಸಗಳ ಹೊರೆ ಹೆಚ್ಚಾಗಬಹುದು.
ಕಟಕ: ವಿವಾಹಿತರು ಸಂಗಾತಿಗೆ ನಿಷ್ಠರಾಗಿರಿ. ಆದಷ್ಟು ಶ್ರಮವಹಿಸಿ ಕೆಲಸ ಮಾಡಬೇಕಾಗುತ್ತದೆ.
ಸಿಂಹ: ಮುಂದೆ ಯಾವಾ ಗಲೋ ಹಣ ಬರುತ್ತದೆ ಎಂಬ ನಿರೀಕ್ಷೆ ಇಟ್ಟುಕೊಂಡು ಸಾಲ ಮಾಡದಿರಿ.
ಕನ್ಯಾ: ಒಂದೇ ಸಮಯಕ್ಕೆ ನಾನಾ ರೀತಿಯ ಅಡೆತಡೆಗಳನ್ನು ಎದುರಿಸಬೇಕಾಗುತ್ತದೆ.
ತುಲಾ: ಮನೆಯಲ್ಲಿ ಜಗಳಗಳು ಉಂಟಾಗ ಬಹುದು. ಆರ್ಥಿಕ ಪರಿಸ್ಥಿತಿ ಹದಗೆಡಬಹುದು.
ವೃಶ್ಚಿಕ: ವಿದ್ಯಾರ್ಥಿಗಳಿಗೆ ಏಕಾಗ್ರತೆ ಸಾ ಸುವುದು ಬಹಳ ಕಷ್ಟವಾಗಲಿದೆ. ಪೋಷಕರು ಮಕ್ಕಳ ವಿಚಾರದಲ್ಲಿ ಹೆಚ್ಚು ಜಾಗ್ರತೆ ವಹಿಸುವುದು ಸೂಕ್ತ.
ಧನುಸ್ಸು: ವಿದ್ಯಾರ್ಥಿಗಳು ಶಿಕ್ಷಣ ಕ್ಷೇತ್ರದಲ್ಲಿ ಉತ್ತಮ ಸಾಧನೆ ಮಾಡುವರು. ಇಡೀ ದಿನ ಶುಭವಾಗಿರಲಿದೆ.
ಮಕರ: ಶಕ್ತಿ ಮತ್ತು ಉತ್ಸಾಹ ತರುವ ಆನಂದಮಯ ಪ್ರವಾಸಕ್ಕೆ ಹೋಗುವಿರಿ.
ಕುಂಭ: ನಿಮ್ಮ ಮಾತುಗಳಿಂದ ಕುಟುಂಬದವರು ಮತ್ತು ಹಿತೈಷಿಗಳಿಗೆ ಸಂತೋಷವವಾಗಲಿದೆ.
ಮೀನ: ಮಕ್ಕಳ ಮೂಲಕ ಹಣ ಬರಲಿದೆ. ತೀರ್ಥಯಾತ್ರೆ, ಪ್ರವಾಸ ತೆರಳುವ ಯೋಗಗಳಿವೆ.
