Saturday, April 18, 2026
Homeಜ್ಯೋತಿಷ್ಯ-ರಾಶಿಭವಿಷ್ಯಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-01-2026)

ಇಂದಿನ ಪಂಚಾಂಗ ಮತ್ತು ರಾಶಿಭವಿಷ್ಯ (30-01-2026)

Today's Horoscope

ನಿತ್ಯ ನೀತಿ : ಬೇವಿನ ಮರಕ್ಕೆ ಬೆಲ್ಲದ ಅಭಿಷೇಕ ಮಾಡಿದರೆ ಅದು ಹೇಗೆ ಸಿಹಿ ಆಗುವುದಿಲ್ಲವೋ… ಹಾಗೆಯೇ ನಮ್ಮ ಜೀವನದಲ್ಲಿ ಕೆಲವೊಂದು ಸಂಬಂಧಗಳಿಗೆ ನಾವು ಎಷ್ಟೇ ಬೆಲೆ ಗೌರವ ಕೊಟ್ಟರೂ ಅದು ಬೇವಿನಂತೆ ಕಹಿಯಾಗಿರುವುದೇ ವಿನಃ ಎಂದಿಗೂ ಸಿಹಿಯಾಗದು..!!

ಪಂಚಾಂಗ : ಶುಕ್ರವಾರ, 30-01-2026

ವಿಶ್ವಾವಸುನಾಮ ಸಂವತ್ಸರ / ಆಯನ:ಉತ್ತರಾಯಣ / ಋತು: ಸೌರ ಶಿಶಿರ / ಮಾಸ: ಮಾಘ / ಪಕ್ಷ: ಶುಕ್ಲ / ತಿಥಿ: ದ್ವಾದಶಿ / ನಕ್ಷತ್ರ: ಆರ್ದ್ರಾ / ಯೋಗ: ವೈಧೃತಿ / ಕರಣ: ಕೌಲವ
ಸೂರ್ಯೋದಯ – 06.47
ಸೂರ್ಯಾಸ್ತ – 6.20
ರಾಹುಕಾಲ – 10.30-12.00
ಯಮಗಂಡ ಕಾಲ – 3.00- 4.30
ಗುಳಿಕ ಕಾಲ – 7.30-9.00

ರಾಶಿಭವಿಷ್ಯ :

ಮೇಷ: ಸಂಗಾತಿಗೆ ನಿಮ್ಮೊಂದಿಗೆ ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡಿ.
ವೃಷಭ: ಮಾನಸಿಕ ಧೈರ್ಯ, ಸಾಮರ್ಥ್ಯ ಹೆಚ್ಚಿಸಿ ಕೊಳ್ಳಲು ಧ್ಯಾನ ಮಾಡುವುದು ಒಳಿತು.
ಮಿಥುನ:ಅನವಶ್ಯಕ ಗೊಂದಲಗಳನ್ನು ಮೈಮೇಲೆ ಎಳೆದುಕೊಳ್ಳದಿರಿ. ಸ್ನೇಹಿತರನ್ನು ನಂಬಿ.

ಕಟಕ: ಕಷ್ಟದ ಕೆಲಸವನ್ನು ಇಷ್ಟದಿಂದ ಮಾಡಿ. ಮನಸ್ಸು ಸಮಾಧಾನದಿಂದಿರುತ್ತದೆ.
ಸಿಂಹ: ಮದುವೆಯ ಸಲುವಾಗಿ ವಸಾ್ತ್ರಭರಣ ಖರೀದಿ ಮಾಡುವಿರಿ.
ಕನ್ಯಾ: ಹತ್ತಿರದ ಸ್ನೇಹಿತ ರಿಂದಲೇ ನಿಮ್ಮ ಬಗ್ಗೆ ಕೆಟ್ಟ ಮಾತುಗಳು ಕೇಳಿಬರಲಿವೆ.

ತುಲಾ: ವ್ಯವಹಾರದಲ್ಲಿ ಮೂರನೆ ವ್ಯಕ್ತಿಯೊಬ್ಬರ ಆಗಮನವಾಗುವುದರಿಂದ ಅಪಾಯ ಹೆಚ್ಚಾಗಲಿದೆ.
ವೃಶ್ಚಿಕ: ಕೆಲಸದ ಸ್ಥಳದಲ್ಲಿ ಕಿರಿಕಿರಿ ಉಂಟಾಗಿ ಕೆಲಸ ಬಿಡುವ ಮನಸ್ಸು ಕೂಡ ಮಾಡಬಹುದು.
ಧನುಸ್ಸು: ಯಾರದ್ದೋ ಮಾತು ಕೇಳಿ ನಿಮ್ಮ ಅಮೂಲ್ಯ ಸಮಯ ಹಾಳುಮಾಡಿಕೊಳ್ಳದಿರಿ.

ಮಕರ: ಕುಟುಂಬ ಕಲಹ ಉಂಟಾಗುವ ಸಾಧ್ಯತೆ ಇದೆ. ಅತ್ಯಂತ ಎಚ್ಚರಿಕೆಯಿಂದ ಮಾತನಾಡಿ.
ಕುಂಭ: ವ್ಯವಹಾರದಲ್ಲಿ ಸ್ವಂತ ನಿರ್ಧಾರ ತೆಗೆದು ಕೊಳ್ಳುವ ಸಾಮರ್ಥ್ಯವನ್ನು ಹೊಂದಿರುತ್ತೀರಿ.
ಮೀನ: ಜವಾಬ್ದಾರಿ ನಿಭಾಯಿಸುವಲ್ಲಿ ಯಶಸ್ವಿಯಾಗುವಿರಿ. ಚಿಂತೆಗೆ ಅವಕಾಶವಿಲ್ಲ.

RELATED ARTICLES

Latest News