Homeಅಂತಾರಾಷ್ಟ್ರೀಯಲಂಡನ್‌ನಲ್ಲಿ ಭಾರತೀಯನ ಹತ್ಯೆ

ಲಂಡನ್‌ನಲ್ಲಿ ಭಾರತೀಯನ ಹತ್ಯೆ

26-year-old Indian man stabbed to death in London

ಲಂಡನ್‌,ಜೂ.14- ಭಾರತೀಯ ಮೂಲದ ವ್ಯಕ್ತಿಯೊಬ್ಬನನ್ನು ಚಾಕುವಿನಿಂದ ಭೀಕರವಾಗಿ ಕೊಲೆ ಮಾಡಿರುವ ಭಯಾನಕ ಘಟನೆ ಪಶ್ಚಿಮ ಲಂಡನ್‌ನ ಸೌತಾಲ್‌ನ ಡಾರ್ಮರ್ಸ್‌ ವೆಲ್ಸ್ ಲೇನ್‌ನ ಜಂಕ್ಷನ್‌ ಬಳಿಯ ನಾರ್ತ್‌ ರಸ್ತೆಯಲ್ಲಿ ನಡೆದಿದೆ. ಗುರ್ಭೇಜ್‌ ಸಿಂಗ್‌ (26) ಸಾವನ್ನಪ್ಪಿರುವ ವ್ಯಕ್ತಿ. ಘಟನೆಯಲ್ಲಿ 30ರ ಹರೆಯದ ಮತ್ತೊಬ್ಬ ವ್ಯಕ್ತಿ ಕೂಡ ಗಾಯಗೊಂಡಿದ್ದು, ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

ಸುದ್ದಿ ತಿಳಿದು ಪೊಲೀಸರು ಮತ್ತು ಅರೆವೈದ್ಯರು ಸ್ಥಳಕ್ಕೆ ಧಾವಿಸಿದರಾದರೂ ಅವರನ್ನು ಉಳಿಸುವ ಪ್ರಯತ್ನಗಳ ಹೊರತಾಗಿಯೂ, ಇರಿತಕ್ಕೆ ಗಂಭೀರ ಗಾಯಗೊಂಡಿದ್ದ ಗುರ್ಭೇಜ್‌ ಸಿಂಗ್‌ ಸ್ಥಳದಲ್ಲೇ ಸಾವನ್ನಪ್ಪಿದ್ದರು.

ಪೊಲೀಸರ ವಿಶೇಷ ಅಪರಾಧ ಕಮಾಂಡ್‌ನ ಡಿಟೆಕ್ಟಿವ್‌ ಚೀಫ್‌ ಇನ್‌್ಸಪೆಕ್ಟರ್‌ ಅಲಿಸನ್‌ ಫಾಕ್‌್ಸವೆಲ್‌, ತನಿಖಾಧಿಕಾರಿಗಳು ಹತ್ಯೆಯ ಸುತ್ತಲಿನ ಸಂದರ್ಭಗಳನ್ನು ಪರಿಶೀಲಿಸುತ್ತಿದ್ದಾರೆ. ತನಿಖೆ ಮುಂದುವರೆದಿದೆ ಎಂದು ಮೆಟ್ರೋಪಾಲಿಟನ್‌ ಪೊಲೀಸರು ತಿಳಿಸಿದ್ದಾರೆ.

ಕೊಲೆಯ ಶಂಕೆಯ ಮೇಲೆ ಏಳು ಮಂದಿಯನ್ನು ಸ್ಥಳದಲ್ಲಿ ಬಂಧಿಸಲಾಗಿತ್ತು. ಹೆಚ್ಚಿನ ವಿಚಾರಣೆಯ ನಂತರ ಬಂಧಿಸಲ್ಪಟ್ಟ ಆರು ಮಂದಿಯನ್ನು ಯಾವುದೇ ಕ್ರಮ ಕೈಗೊಳ್ಳದೆ ಬಿಡುಗಡೆ ಮಾಡಲಾಗಿದೆ. ಏಳನೇ ವ್ಯಕ್ತಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಲಾಗಿದೆ. ಏತನಧ್ಯೆ, ಯುಕೆಯ ಕೆಲವು ಭಾಗಗಳಲ್ಲಿ ವಲಸೆ ಮತ್ತು ಸಾರ್ವಜನಿಕ ಸುರಕ್ಷತೆಯು ವಿವಾದಾತಕ ಸಮಸ್ಯೆಗಳಾಗಿ ಮಾರ್ಪಟ್ಟಿರುವ ಸಮಯದಲ್ಲಿ ಈ ಹತ್ಯೆ ನಡೆದಿದೆ.

ಈ ವಾರದ ಆರಂಭದಲ್ಲಿ ಸುಡಾನ್‌ ಪ್ರಜೆಯೊಬ್ಬರ ಮೇಲೆ ಚಾಕು ದಾಳಿ ನಡೆಸಿ ಕೊಲೆಗೆ ಯತ್ನಿಸಿದ ಆರೋಪ ಹೊರಿಸಿದ ನಂತರ, ನೂರಾರು ವಲಸೆ ವಿರೋಧಿ ಪ್ರತಿಭಟನಾಕಾರರು ಉತ್ತರ ಐಲೆರ್‌ಂಡ್‌ನ ಬೆಲ್‌ಫಾಸ್ಟ್‌ನ ಬೀದಿಗಿಳಿದು ಪ್ರತಿಭಟನೆ ನಡೆಸಿದರು.

ಈ ಘಟನೆಯಲ್ಲಿ ವ್ಯಕ್ತಿಯೊಬ್ಬ ಗಂಭೀರವಾಗಿ ಗಾಯಗೊಂಡಿದ್ದ. ಪ್ರತಿಭಟನೆಗಳು ಹಿಂಸಾಚಾರಕ್ಕೆ ತಿರುಗಿ, ವಾಹನಗಳು ಮತ್ತು ಆಸ್ತಿಗಳಿಗೆ ಬೆಂಕಿ ಹಚ್ಚಲಾಯಿತು. ಜನಾಂಗೀಯ ಅಲ್ಪಸಂಖ್ಯಾತ ಕುಟುಂಬಗಳಿಗೆ ಸೇರಿದ ಹಲವಾರು ಮನೆಗಳನ್ನು ಗುರಿಯಾಗಿಸಿಕೊಂಡರು. ಅಧಿಕಾರಿಗಳು ಅಶಾಂತಿಯನ್ನು ಖಂಡಿಸಿದು, ಉತ್ತರ ಐಲೆರ್‌ಂಡ್‌ ಕಾರ್ಯದರ್ಶಿ ಹಿಲರಿ ಬೆನ್‌ ಈ ದಾಳಿಗಳನ್ನು ಜನಾಂಗೀಯ ದರೋಡೆಕೋರತನ ಎಂದು ಆರೋಪಿಸಿದ್ದರು.

RELATED ARTICLES

Latest News