Homeರಾಜಕೀಯಗೃಹಲಕ್ಷ್ಮಿಗೆ ಕಷ್ಟ, ಗೃಹಜ್ಯೋತಿಗೆ ಕತ್ತಲು : ಗ್ಯಾರಂಟಿ ಸರ್ಕಾರದ ವಿರುದ್ಧ ಅಶೋಕ್‌ ವಾಗ್ದಾಳಿ

ಗೃಹಲಕ್ಷ್ಮಿಗೆ ಕಷ್ಟ, ಗೃಹಜ್ಯೋತಿಗೆ ಕತ್ತಲು : ಗ್ಯಾರಂಟಿ ಸರ್ಕಾರದ ವಿರುದ್ಧ ಅಶೋಕ್‌ ವಾಗ್ದಾಳಿ

Ashok attacks the guarantee government

ಬೆಂಗಳೂರು,ಜೂ.14- ಗೃಹಲಕ್ಷಿಗೆ ಕಷ್ಟ, ಗೃಹಜ್ಯೋತಿಗೆ ಕತ್ತಲು! ಅನರ್ಹರ ನೆಪದಲ್ಲಿ ಬಡವರ ಹಕ್ಕು ಕಬಳಿಸಲು ಬಂದಿದೆ ಹೊಸ ಅರ್ಜಿ ಎಂಬ ಹೊಸ ಕತ್ತರಿ! ಎಂದು ರಾಜ್ಯ ಸರ್ಕಾರದ ವಿರುದ್ದ ವಿಧಾನಸಭೆಯ ಪ್ರತಿಪಕ್ಷದ ನಾಯಕ ಆರ್‌.ಅಶೋಕ್‌ ವಾಗ್ದಾಳಿ ನಡೆಸಿದ್ದಾರೆ.

ಈ ಕುರಿತು ಎಕ್‌್ಸನಲ್ಲಿ ಪೋಸ್ಟ್‌ ಮಾಡಿರುವ ಅವರು, ಕಮಿಷನ್‌ ಮಾಸ್ಟರ್‌ ಡಿ.ಕೆ.ಶಿವಕುಮಾರ್‌ ಅವರ ಹೊಸ ಅರ್ಜಿಯ ಹಿಂದೆ ಇರುವುದು ಅರ್ಹತೆಯ ಅಳತೆಗೋಲಲ್ಲ, ಫಲಾನುಭವಿಗಳಿಗೆ ಕತ್ತರಿ ಹಾಕುವ ಒಳಸಂಚು ಎಂದು ಆರೋಪಿಸಿದ್ದಾರೆ.

ಕಮಿಷನ್‌ ಮಾಸ್ಟರ್‌ ಡಿ.ಕೆ.ಶಿವಕುಮಾರ್‌ ಅವರೇ, ಸತ್ತವರ ಹೆಸರನ್ನು ಫಲಾನುಭವಿಗಳ ಪಟ್ಟಿಯಿಂದ ತೆಗೆಯಲು ಇಡೀ ಗ್ಯಾರೆಂಟಿ ಯೋಜನೆಗೆ ಹೊಸ ಅರ್ಜಿ ಸಲ್ಲಿಸಬೇಕೇ? ಇದಾವ ಸೀಮೆಯ ತುಘಲಕ್‌ ದರ್ಬಾರ್‌ ಸ್ವಾಮಿ? ಅನರ್ಹರನ್ನು ತಡೆಯುವ ನೆಪದಲ್ಲಿ, ಈಗಾಗಲೇ ಸೌಲಭ್ಯ ಪಡೆಯುತ್ತಿರುವ ಲಕ್ಷಾಂತರ ಸ್ವಾಭಿಮಾನಿ ತಾಯಂದಿರು ಮತ್ತು ಶ್ರೀಸಾಮಾನ್ಯರನ್ನು ಮತ್ತೆ ಕಚೇರಿಗಳ ಮುಂದೆ, ಸೈಬರ್‌ ಸೆಂಟರ್ಗಳ ಮುಂದೆ ಸಾಲಿನಲ್ಲಿ ನಿಲ್ಲಿಸಲು ನಿಮಗೆ ನಾಚಿಕೆಯಾಗುವುದಿಲ್ಲವೇ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.

ನಿಮ ಸರ್ಕಾರದ ಕಮಿಷನ್‌ ದಂಧೆ ಹಾಗೂ ದುರಾಡಳಿತದಿಂದಾಗಿ ರಾಜ್ಯದ ಬೊಕ್ಕಸ ಸಂಪೂರ್ಣ ದಿವಾಳಿಯಾಗಿದೆ. ಗ್ಯಾರಂಟಿ ನೀಡಲು ಹಣವಿಲ್ಲದೆ, ಈಗ ಜನರಿಗೆ ತೊಂದರೆ ಕೊಟ್ಟು ಫಲಾನುಭವಿಗಳ ಸಂಖ್ಯೆಯನ್ನು ಕಡಿತಗೊಳಿಸುವುದೇ ನಿಮ ಅಸಲಿ ಅಜೆಂಡಾ ಎನ್ನುವ ಸತ್ಯವನ್ನು ಅರಿಯದಷ್ಟು ಅಮಾಯಕರಲ್ಲ ನಮ ಸ್ವಾಭಿಮಾನಿ ಕನ್ನಡಿಗರು. ಮನೆಗೆ ತಲುಪಲಿದೆ ನಮೂನೆ ಎಂಬ ನಿಮ ಹೊಸ ನಾಟಕ ಯಾರಿಗಾಗಿ? ಎಂದು ಪ್ರಶ್ನಿಸಿದ್ದಾರೆ.

ಕಮಿಷನ್‌ ಮಾಸ್ಟರ್‌ ಸಿಎಂಗೆ ನಮ ನೇರ ಪ್ರಶ್ನೆಗಳು. ಕೇವಲ ತಾಂತ್ರಿಕ ವ್ಯವಸ್ಥೆಯನ್ನು ಸರಿಪಡಿಸಿ ಸತ್ತವರ ಹೆಸರನ್ನು ತೆಗೆಯಲು ಯೋಗ್ಯತೆ ಇಲ್ಲದ ಈ ಸರ್ಕಾರಕ್ಕೆ ಕಮಿಷನ್‌ ಮಾಸ್ಟರ್‌ ಎಂಬ ಬಿರುದು ಬಿಟ್ಟರೆ ಬೇರೇನು ನೀಡಲು ಸಾಧ್ಯ? ಇದು ಹೊಸ ಅರ್ಜಿಯ ಹೆಸರಿನಲ್ಲಿ ಬಡವರ ಹೊಟ್ಟೆಗೆ ಹೊಡೆದು, ಯೋಜನೆಗಳನ್ನು ಹಂತಹಂತವಾಗಿ ನಿಲ್ಲಿಸುವ ಒಳಸಂಚು ಅಲ್ಲದೆ ಮತ್ತೇನು?, ಅಧಿಕಾರಿಗಳ ಸಭೆ ನಡೆಸಿ ಹಿತವಚನ ನೀಡುವ ಮುನ್ನ, ನಿಮ ಗ್ಯಾರಂಟಿ ದುಡ್ಡಿನಲ್ಲಿ ಎಷ್ಟು ಭಾಗ ನಿಮ ಕುರ್ಚಿ ಉಳಿಸಿಕೊಳ್ಳಲು ಹೈಕಮಾಂಡ್‌ಗೆ ಎಷ್ಟು ಭಾಗ ಬೇರೆ ರಾಜ್ಯಗಳ ಚುನಾವಣಾ ಫಂಡಿಂಗ್‌ಗೆ ಹೋಗುತ್ತಿದೆ ಎಂಬುದನ್ನು ಸ್ಪಷ್ಟಪಡಿಸಿ ಎಂದು ಒತ್ತಾಯಿಸಿದ್ದಾರೆ.

ಬಡವರ, ಶೋಷಿತರ ಹಕ್ಕಿನ ದುಡ್ಡಿಗೆ ಕತ್ತರಿ ಹಾಕಲು ಹೊರಟಿರುವ ನಿಮ ಈ ಜನವಿರೋಧಿ ನೀತಿಯನ್ನು ಸ್ವಾಭಿಮಾನಿ ಕನ್ನಡಿಗರು ಸಹಿಸುವುದಿಲ್ಲ. ಗ್ಯಾರಂಟಿ ಯೋಜನೆಗಳ ಹೆಸರಿನಲ್ಲಿ ಜನರನ್ನು ಸಾಲಿನಲ್ಲಿ ನಿಲ್ಲಿಸಿ ಕಾಟ ಕೊಡುವುದನ್ನು ತಕ್ಷಣ ನಿಲ್ಲಿಸಿ. ಬೊಕ್ಕಸದ ದುಡ್ಡನ್ನು ಲೂಟಿ ಹೊಡೆಯುವುದನ್ನು ಬಿಟ್ಟು, ಜನರಿಗೆ ಕೊಟ್ಟ ಮಾತಿನಂತೆ ಗ್ಯಾರೆಂಟಿ ಸೌಲಭ್ಯಗಳನ್ನು ತಲುಪಿಸಿ. ಇಲ್ಲದಿದ್ದರೆ ಕರ್ನಾಟಕದ ಜನತೆ ಕಾಂಗ್ರೆಸ್‌‍ ಪಕ್ಷವನ್ನು ಗಂಟುಮೂಟೆ ಕಟ್ಟಿಸಿ ಶಾಶ್ವತವಾಗಿ ಮನೆಗೆ ಕಳುಹಿಸುವುದು ಗ್ಯಾರಂಟಿ ಎಂದು ಎಚ್ಚರಿಕೆ ಕೊಟ್ಟಿದ್ದಾರೆ.

ಮತ್ತೊಂದು ಪೋಸ್ಟ್‌ ನಲ್ಲಿ ಕೆಟ್ಟ ಮೇಲೂ ಬುದ್ಧಿ ಕಲಿಯದ ಲಜ್ಜೆಗೆಟ್ಟ ಕಾಂಗ್ರೆಸ್‌‍ ಧರ್ಮಸ್ಥಳದ ತಂಟೆಗೆ ಹೋಗಿ ಸರ್ವನಾಶವಾದ ಇತಿಹಾಸ ನೆನಪಿಲ್ಲವೇ? ಹಿಂದೆ ಇದೇ ಧರ್ಮಸ್ಥಳದ ವಿಷಯದಲ್ಲಿ ಸುಳ್ಳು ಬುರುಡೆ ಕೇಸ್‌‍ಗೆ ಕುಮಕ್ಕು ಕೊಟ್ಟಿದ್ದ ಸಿದ್ದರಾಮಯ್ಯನವರು ಮಂಜುನಾಥ ಸ್ವಾಮಿಯ ಶಾಪಕ್ಕೆ ಗುರಿಯಾಗಿ, ಅಧಿಕಾರ ಕಳೆದುಕೊಂಡು ಮೂಲೆ ಸೇರಿದರು.
ಈಗ ಇಡೀ ರಾಜ್ಯವನ್ನೇ ಕಮಿಷನ್‌ ದಂಧೆಯಿಂದ ಲೂಟಿ ಮಾಡಲು ಹೊರಟಿರುವ ಕಮಿಷನ್‌ ಮಾಸ್ಟರ್‌ ಅವರೂ ತಲೆ ಕೆಟ್ಟು ಅದೇ ವಿನಾಶದ ಹಾದಿ ಹಿಡಿದಿದ್ದಾರೆ. ವಿನಾಶಕಾಲೇ ವಿಪರೀತ ಬುದ್ಧಿ ಅಂದರೆ ಇದೇ ಎಂದು ಟೀಕಾ ಪ್ರಹಾರ ನಡೆಸಿದ್ದಾರೆ.

ಶ್ರೀಕ್ಷೇತ್ರ ಧರ್ಮಸ್ಥಳದ ಪಾವಿತ್ರ್ಯಕ್ಕೆ ಮಸಿ ಬಳಿಯಲು, ಕ್ಷೇತ್ರದ ವಿರುದ್ಧ ಷಡ್ಯಂತ್ರ ರೂಪಿಸಲು ಬರೋಬ್ಬರಿ 200 ಕೋಟಿ ರೂ.ಗಳ ಪಿತೂರಿ ನಡೆದಿದೆ ಎಂಬ ಗಂಭೀರ ಸತ್ಯ ಸ್ವತಃ ಆರೋಪಿ ಬುರುಡೆ ಚಿನಯ್ಯನ ಹೇಳಿಕೆಯಿಂದಲೇ ಬಯಲಾಗಿದೆ. ಸತ್ಯ ಮಾತಾಡಿದವರ ಧ್ವನಿ ಅಡಗಿಸಲು ಈಗ ಹೊಲಸು ರಾಜಕೀಯದ ಆಟ ಶುರುವಾಗಿದೆ. ನ್ಯಾಯಾಲಯ ವರದಿ ಕೇಳಿದ ತಕ್ಷಣವೇ ಎಸ್‌‍ಐಟಿ ಮುಖ್ಯಸ್ಥರು ರಹಸ್ಯ ದಾಖಲೆಗಳೊಂದಿಗೆ ಗೃಹಸಚಿವರ ಜೊತೆ ಗಂಟೆಗಟ್ಟಲೆ ಗುಪ್ತ ಆಲೋಚನೆ ನಡೆಸುತ್ತಿರುವುದರ ಹಿಂದಿನ ಅಸಲಿ ಒಳಸಂಚು ಏನು? ಎಂದು ಪ್ರಶ್ನೆ ಮಾಡಿದ್ದಾರೆ.

ಕಮಿಷನ್‌ ಮಾಸ್ಟರ್‌ ಡಿ.ಕೆ.ಶಿವಕುಮಾರ್‌ ಸರ್ಕಾರಕ್ಕೆ ನಮ ನೇರ ಪ್ರಶ್ನೆಗಳು. ತನಿಖಾ ಸಂಸ್ಥೆ ಇಷ್ಟೊಂದು ಆತುರವಾಗಿ ಗೃಹ ಸಚಿವರ ಜೊತೆ ರಹಸ್ಯ ಸಭೆ ನಡೆಸುತ್ತಿರುವುದು ಯಾರನ್ನು ರಕ್ಷಿಸಲು? ಯಾರ ವಿರುದ್ಧ ಹೊಸದಾಗಿ ಸುಳ್ಳು ಕೇಸ್‌‍ ಹೆಣೆಯಲು?. ಧರ್ಮಸ್ಥಳದ ಹೆಸರಿಗೆ ಮಸಿ ಬಳಿಯಲು ?200 ಕೋಟಿ ಫಂಡಿಂಗ್‌ ಮಾಡಿದ ಆ ಮಹಾ ನಾಯಕ ಯಾರು? ಕಮಿಷನ್‌ ಮಾಸ್ಟರ್‌ ಸರ್ಕಾರದ ಪ್ರಭಾವಿ ಹಸ್ತ ಇದರ ಹಿಂದೆ ಇದೆಯೇ?, ಆರೋಪಿಗಳ ಬ್ರೇನ್‌ ಮ್ಯಾಪಿಂಗ್‌ ನೆಪದಲ್ಲಿ ಮತ್ತೊಮೆ ಕನ್ನಡಿಗರ ಧಾರ್ಮಿಕ ಭಾವನೆಗಳ ಮೇಲೆ ಸವಾರಿ ಮಾಡಲು ಕಾಂಗ್ರೆಸ್‌‍ ಸರ್ಕಾರ ಸಂಚು ರೂಪಿಸಿದೆಯೇ? ಎಂದು ಪ್ರಶ್ನೆಗಳ ವಾಗ್ಬಾಣ ಬಿಟ್ಟಿದ್ದಾರೆ.

ಕೋಟಿ ಕೋಟಿ ಭಕ್ತರ ಆರಾಧ್ಯ ದೈವ ಶ್ರೀ ಮಂಜುನಾಥ ಸ್ವಾಮಿಯ ಪವಿತ್ರ ಕ್ಷೇತ್ರಕ್ಕೆ ಧಕ್ಕೆ ತರಲು ಹೊರಟರೆ ಕನ್ನಡಿಗರು ಯಾರನ್ನೂ ಸುಮನೆ ಬಿಡುವುದಿಲ್ಲ. ರಾಜಕೀಯ ದ್ವೇಷಕ್ಕಾಗಿ ಧಾರ್ಮಿಕ ಕ್ಷೇತ್ರಗಳನ್ನು ಬಳಸಿಕೊಳ್ಳುವ ನಿಮ ಈ ತುಘಲಕ್‌ ದರ್ಬಾರ್‌ ಮುಗಿಯುವ ಕಾಲ ಹತ್ತಿರ ಬಂದಿದೆ. ಧರ್ಮಸ್ಥಳದ ತಂಟೆಗೆ ಬಂದರೆ ಇಡೀ ಕಾಂಗ್ರೆಸ್‌‍ ಪಕ್ಷ ಶಾಶ್ವತವಾಗಿ ನಾಮಾವಶೇಷವಾಗುವುದು ಗ್ಯಾರಂಟಿ ಎಂದು ಅಶೋಕ್‌ ಸರ್ಕಾರದ ವಿರುದ್ದ ಗುಡುಗಿದ್ದಾರೆ.

RELATED ARTICLES

Latest News