Homeಅಂತಾರಾಷ್ಟ್ರೀಯಟೇಕ್‌ಆಫ್‌‍ ಆದ ಕೆಲವೇ ಕ್ಷಣಗಳಲ್ಲಿ ಅಮೆರಿಕದ ಬಿ-52 ಬಾಂಬರ್‌ ಯುದ್ದ ವಿಮಾನ ಪತನ, 8 ಸಿಬ್ಬಂದಿ...

ಟೇಕ್‌ಆಫ್‌‍ ಆದ ಕೆಲವೇ ಕ್ಷಣಗಳಲ್ಲಿ ಅಮೆರಿಕದ ಬಿ-52 ಬಾಂಬರ್‌ ಯುದ್ದ ವಿಮಾನ ಪತನ, 8 ಸಿಬ್ಬಂದಿ ಸಾವು

8 dead after US Air Force B-52 bomber crashes in California

ಲಾಸ್‌‍ ಏಂಜಲೀಸ್‌‍, ಜೂನ್‌ 16-ಅಮೆರಿಕದ ದಕ್ಷಿಣ ಕ್ಯಾಲಿಫೋರ್ನಿಯಾದ ಮೊಜಾವೆ ಮರುಭೂಮಿಯಲ್ಲಿರುವ ಎಡ್ವರ್ಡ್ಸ್ ವಾಯುಪಡೆ ನೆಲೆಯಿಂದ ಹಾರಾಟ ಆರಂಭಿಸಿದ ಕೆಲವೇ ಕ್ಷಣಗಳಲ್ಲಿ ಬಿ-52 ಬಾಂಬರ್‌ ವಿಮಾನ ಪತನಗೊಂಡು ಬೆಂಕಿಗೆ ಆಹುತಿಯಾಗಿದ್ದು, ಅದರಲ್ಲಿದ್ದ ಎಲ್ಲ ಎಂಟು ಮಂದಿ ಮೃತಪಟ್ಟಿದ್ದಾರೆ ಎಂದು ಸೇನಾ ಅಧಿಕಾರಿಗಳು ತಿಳಿಸಿದ್ದಾರೆ.

ಲಾಸ್‌‍ ಏಂಜಲೀಸ್‌‍ನ ಉತ್ತರ ಭಾಗದಲ್ಲಿರುವ ಎಡ್ವರ್ಡ್ಸ್ ವಾಯುಪಡೆ ನೆಲೆಯಲ್ಲಿ ಸೋಮವಾರ ಬೆಳಿಗ್ಗೆ ಸುಮಾರು 11.20ಕ್ಕೆ ನಿಯಮಿತ ಪರೀಕ್ಷಾ ಹಾರಾಟದ ವೇಳೆ ಈ ದುರ್ಘಟನೆ ಸಂಭವಿಸಿದೆ.
ಘಟನಾ ಸ್ಥಳದ ವೈಮಾನಿಕ ದೃಶ್ಯಾವಳಿಗಳಲ್ಲಿ ವಿಮಾನದ ಅವಶೇಷಗಳು ಬಹುತೇಕ ಸಂಪೂರ್ಣವಾಗಿ ನಾಶವಾಗಿರುವುದು ಕಂಡುಬಂದಿದೆ. ವಾಯುನೆಲೆಯ ರನ್‌ವೇ ಸಮೀಪದ ವಿಶಾಲ ಮರುಭೂಮಿ ಪ್ರದೇಶ ಬೆಂಕಿಯಿಂದ ಕರಕಲಾಗಿದ್ದು, ಅಲ್ಲಿಂದ ದಟ್ಟ ಕಪ್ಪು ಹೊಗೆ ಆವರಿಸಿರುವುದು ಹಾಗೂ ತುರ್ತು ರಕ್ಷಣಾ ವಾಹನಗಳು ಕಾರ್ಯಾಚರಣೆಯಲ್ಲಿ ತೊಡಗಿರುವುದು ಗೋಚರಿಸಿದೆ.

ವಿಮಾನದಲ್ಲಿದ್ದವರಲ್ಲಿ ಸರ್ಕಾರದ ಗುತ್ತಿಗೆ ಆಧಾರಿತ ಸಿಬ್ಬಂದಿ ಹಾಗೂ ಸಮವಸ್ತ್ರಧಾರಿ ಸೇನಾ ಸಿಬ್ಬಂದಿಯೂ ಸೇರಿದ್ದರು ಎಂದು ಅಧಿಕಾರಿಗಳು ತಿಳಿಸಿದ್ದಾರೆ.ಅಪಘಾತದ ದೃಶ್ಯಾವಳಿಗಳನ್ನು ಪರಿಶೀಲಿಸಿದ ಬಳಿಕ ಯಾರೊಬ್ಬರೂ ಬದುಕುಳಿಯುವ ಸಾಧ್ಯತೆ ಇರಲಿಲ್ಲ ಎಂಬುದು ಸ್ಪಷ್ಟವಾಗಿದೆ ಎಂದು ಎಡ್ವರ್ಡ್ಸ್ ವಾಯುಪಡೆ ನೆಲೆಯ 412ನೇ ಟೆಸ್ಟ್‌ ವಿಂಗ್‌ನ ಉಪ ಕಮಾಂಡರ್‌ ಕರ್ನಲ್‌ ಜೇಮ್ಸೌ ಹೇಯ್‌್ಸ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ.

ನಾವು ಎಂಟು ಶ್ರೇಷ್ಠ ಅಮೆರಿಕನ್ನರನ್ನು ಕಳೆದುಕೊಂಡಿದ್ದೇವೆ, ಎಂದು ದುಃಖ ವ್ಯಕ್ತಪಡಿಸಿದ ಅವರು, ಮೃತರ ಕುಟುಂಬಗಳಿಗೆ ಮಾಹಿತಿ ನೀಡುವ ಪ್ರಕ್ರಿಯೆ ನಡೆಯುತ್ತಿದೆ ಎಂದು ಹೇಳಿದರು.
ಬೋಯಿಂಗ್‌ ಸಂಸ್ಥೆ ನಿರ್ಮಿಸಿರುವ ಬಿ-52 ಸ್ಟ್ರಾಟೋಫೋರ್ಟ್ರೆಸ್‌‍ ದೀರ್ಘ ವ್ಯಾಪ್ತಿಯ ಬಾಂಬರ್‌ ವಿಮಾನವಾಗಿದ್ದು, ಅಮೆರಿಕ ವಾಯುಪಡೆಯ ಪ್ರಮುಖ ಯುದ್ಧ ವಿಮಾನಗಳಲ್ಲಿ ಒಂದಾಗಿದೆ. ಅಪಘಾತದ ನಿಖರ ಕಾರಣವನ್ನು ಪತ್ತೆಹಚ್ಚಲು ತನಿಖೆ ಆರಂಭಿಸಲಾಗಿದೆ.

ಸ್ಥಳೀಯ ಕಾಲಮಾನ ಬೆಳಿಗ್ಗೆ ಸುಮಾರು 11.20ಕ್ಕೆ ಎಡ್ವರ್ಡ್ಸ್ ವಾಯುಪಡೆ ನೆಲೆಯ ವ್ಯಾಪ್ತಿಯಲ್ಲಿ ವಿಮಾನ ಪತನಗೊಂಡಿದ್ದು, ತುರ್ತು ರಕ್ಷಣಾ ಸಿಬ್ಬಂದಿ ಕೂಡಲೇ ಸ್ಥಳಕ್ಕೆ ಧಾವಿಸಿ ಕಾರ್ಯಾಚರಣೆ ಆರಂಭಿಸಿದರು ಎಂದು ಅಮೆರಿಕ ಸೇನೆ ಸಾಮಾಜಿಕ ಜಾಲತಾಣ ಎಕ್ಸ್‌‍ೞನಲ್ಲಿ ದೃಢಪಡಿಸಿದೆ. ವಿಯೆಟ್ನಾಂ ಯುದ್ಧದಿಂದ ಹಿಡಿದು ಮಧ್ಯಪ್ರಾಚ್ಯದ ಇತ್ತೀಚಿನ ಸೇನಾ ಕಾರ್ಯಾಚರಣೆಗಳವರೆಗೆ ಹಲವು ಸಂಘರ್ಷಗಳಲ್ಲಿ ಈ ಬಾಂಬರ್‌ ವಿಮಾನವನ್ನು ಬಳಸಲಾಗಿದೆ.

ಲಾಸ್‌‍ ಏಂಜಲೀಸ್‌‍ನಿಂದ ಸುಮಾರು 161 ಕಿಲೋಮೀಟರ್‌ ಉತ್ತರದಲ್ಲಿರುವ ಎಡ್ವರ್ಡ್ಸ್ ವಾಯುಪಡೆ ನೆಲೆ, ಅಮೆರಿಕ ವಾಯುಪಡೆಯ ವಿಮಾನಗಳ ಪರೀಕ್ಷೆ ಮತ್ತು ಅಭಿವೃದ್ಧಿ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿದೆ.

ಈ ನೆಲೆಯ ಕಾರ್ಯಾಚರಣೆಯನ್ನು ನಿರ್ವಹಿಸುವ 412ನೇ ಟೆಸ್ಟ್‌ ವಿಂಗ್‌‍, ಅಮೆರಿಕ ವಾಯುಪಡೆಯ ಎಲ್ಲಾ ವಿಮಾನಗಳು, ಶಸ್ತ್ರಾಸ್ತ್ರ ವ್ಯವಸ್ಥೆಗಳು, ಸಾಫ್‌್ಟವೇರ್‌ ಹಾಗೂ ಇತರ ಘಟಕಗಳನ್ನು ಖರೀದಿಗೆ ಮುನ್ನ ಮತ್ತು ಅವುಗಳ ಸೇವಾ ಅವಧಿಯುದ್ದಕ್ಕೂ ಅಭಿವೃದ್ಧಿ ಪರೀಕ್ಷೆಗೆ ಒಳಪಡಿಸುವ ಜವಾಬ್ದಾರಿಯನ್ನು ಹೊಂದಿದೆ.

RELATED ARTICLES

Latest News