Homeಅಂತಾರಾಷ್ಟ್ರೀಯರಷ್ಯಾ ಅಧ್ಯಕ್ಷ ಪುಟಿನ್ ಆಪ್ತನ ಹಣದಲ್ಲಿ ಮದುವೆಯಾಗಿದ್ದ ಟ್ರಂಪ್‌ ಜೂನಿಯರ್‌..!

ರಷ್ಯಾ ಅಧ್ಯಕ್ಷ ಪುಟಿನ್ ಆಪ್ತನ ಹಣದಲ್ಲಿ ಮದುವೆಯಾಗಿದ್ದ ಟ್ರಂಪ್‌ ಜೂನಿಯರ್‌..!

ನ್ಯೂಯಾರ್ಕ್‌, ಸೆ.15- ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಅವರ ಪುತ್ರ ಡೊನಾಲ್ಡ್‌ ಟ್ರಂಪ್‌ ಜೂನಿಯರ್‌ ಅವರ ಮೇ ತಿಂಗಳ ವಿವಾಹದ ನಂತರ ನಡೆದ ಸಂಭ್ರಮಾಚರಣೆಗೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ ಅವರೊಂದಿಗೆ ನಿಕಟ ಸಂಪರ್ಕ ಹೊಂದಿರುವ ಉದ್ಯಮಿ ಉಮರ್‌ ಕ್ರೆಮ್ಲೆವ್‌ ಭಾಗಶಃ ಹಣಕಾಸು ನೆರವು ನೀಡಿದ್ದರು ಎಂದು ಟ್ರಂಪ್‌ ಜೂನಿಯರ್‌ ಅವರ ಪತ್ನಿ ಬೆಟ್ಟಿನಾ ದೃಢಪಡಿಸಿದ್ದಾರೆ.

ಬೆಟ್ಟಿನಾ ಟ್ರಂಪ್‌ ಅವರು ಇನ್‌ಸ್ಟಾಗ್ರಾಂನಲ್ಲಿ ದಂಪತಿಯ ಹೆಸರಿನಲ್ಲಿ ಪ್ರಕಟಿಸಿದ ಹೇಳಿಕೆಯಲ್ಲಿ ಕ್ರೆಮ್ಲೆವ್‌ ಅವರನ್ನು ಆತ್ಮೀಯ ಸ್ನೇಹಿತ ಎಂದು ಕರೆದಿದ್ದು, ವಿವಾಹದ ಬಳಿಕ ನಡೆದ ಎರಡು ಅದ್ಧೂರಿ ರಾತ್ರಿ ಸಂಭ್ರಮಾಚರಣೆಗಳನ್ನು ಅವರು ಉದಾರವಾಗಿ ಆಯೋಜಿಸಿದ್ದರು ಎಂದು ತಿಳಿಸಿದ್ದಾರೆ.

ಸುದ್ದಿವಾಹಿನಿ ಪ್ರೊಪಬ್ಲಿಕಾ ವರದಿ ಪ್ರಕಾರ, ಬಹಾಮಾಸ್‌ನಲ್ಲಿ ನಡೆದ ಮೂರು ದಿನಗಳ ಸಂಭ್ರಮಾಚರಣೆಗೆ ಕ್ರೆಮ್ಲೆವ್‌ ನೂರಾರು ಸಾವಿರ ಡಾಲರ್‌ ವೆಚ್ಚ ಭರಿಸಿದ್ದರು. ಎರಡು ಖಾಸಗಿ ದ್ವೀಪಗಳ ಪೈಕಿ ಒಂದನ್ನು ಬಾಡಿಗೆಗೆ ಪಡೆಯುವ ವೆಚ್ಚ ಹಾಗೂ ಪಟಾಕಿ ಪ್ರದರ್ಶನದ ಖರ್ಚನ್ನೂ ಅವರು ಪಾವತಿಸಿದ್ದರು ಎಂದು ವರದಿಯಾಗಿದೆ. ಕ್ರೆಮ್ಲೆವ್‌ ಇಂಟರ್‌ನ್ಯಾಷನಲ್‌ ಬಾಕ್ಸಿಂಗ್‌ ಅಸೋಸಿಯೇಷನ್‌ನ ಮುಖ್ಯಸ್ಥರಾಗಿದ್ದಾರೆ.

ವಿವಾಹ ಸಮಾರಂಭವನ್ನು ಕುಟುಂಬದ ಸದಸ್ಯರ ಸಮ್ಮುಖದಲ್ಲಿ ಖಾಸಗಿಯಾಗಿ ನಡೆಸಲಾಗಿತ್ತು. ಬಳಿಕ ಸ್ನೇಹಿತರೊಂದಿಗೆ ನಡೆಯಬೇಕಿದ್ದ ಕಾರ್ಯಕ್ರಮವನ್ನು ಮೊದಲೇ ಯೋಜಿಸಲಾಗಿತ್ತು. ವಿವಾಹ ಯೋಜನೆ ಬದಲಾದ ಹಿನ್ನೆಲೆಯಲ್ಲಿ ಅದರ ಮುನ್ನವೇ ವಿವಾಹವಾಗಿ, ನಂತರದ ಕಾರ್ಯಕ್ರಮದಲ್ಲಿ ನವದಂಪತಿಯಾಗಿ ಭಾಗವಹಿಸಿದ್ದಾಗಿ ಬೆಟ್ಟಿನಾ ಹೇಳಿದ್ದಾರೆ.

ರಷ್ಯಾ-ಉಕ್ರೇನ್‌ ಯುದ್ಧ ಮುಂದುವರಿದಿರುವ ಸಂದರ್ಭದಲ್ಲಿ ಈ ಉಡುಗೊರೆ ಬಂದಿರುವುದು ಗಮನ ಸೆಳೆದಿದೆ. ಪುಟಿನ್‌ ಇತ್ತೀಚೆಗೆ ಕ್ರೆಮ್ಲೆವ್‌ ಅವರಿಗೆ ಆರ್ಡರ್‌ ಆಫ್‌ ಫ್ರೆಂಡ್‌ಶಿಪ್‌ ಗೌರವ ನೀಡಿದ್ದರು. ಅಲ್ಲದೆ, ಚೀನಾಕ್ಕೆ ತೆರಳಿದ್ದ ರಷ್ಯಾ ನಿಯೋಗದೊಂದಿಗೆ ಕ್ರೆಮ್ಲೆವ್‌ ಪುಟಿನ್‌ ಅವರನ್ನು ಭೇಟಿ ಮಾಡಿದ್ದರು ಎಂದು ವರದಿಯಾಗಿದೆ.

RELATED ARTICLES
spot_img

Latest News