ವಾಷಿಂಗ್ಟನ್,ಏ.9 : ಅಂತರಾಷ್ಟ್ರೀಯ ಹಣಕಾಸು ಸಂಸ್ಥೆ , ವಿಶ್ವ ಬ್ಯಾಂಕ್, ಮತ್ತುವಿಶ್ವ ಆಹಾರ ಯೋಜನಾ ಸಂಸ್ಥೆಗಳು ಮಧ್ಯಪ್ರಾಚ್ಯದ ಯುದ್ಧವು ಜಾಗತಿಕ ಇಂಧನ ಮಾರುಕಟ್ಟೆಯಲ್ಲಿ ಭಾರೀ ಅಸ್ಥಿರತೆ ಉಂಟುಮಾಡಿದ್ದು, ಇದರಿಂದ ಆಹಾರ ಬೆಲೆಗಳು ಏರಿಕೆಯಾಗುವ ಮತ್ತು ಆಹಾರ ಭದ್ರತೆ ಕುಂಠಿತವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಕೆ ನೀಡಿವೆ.
ಮೂರು ಸಂಸ್ಥೆಗಳ ಮುಖ್ಯಸ್ಥರು ಬಿಡುಗಡೆ ಮಾಡಿದ ಸಂಯುಕ್ತ ಪ್ರಕಟಣೆಯಲ್ಲಿ, ಆಹಾರ ಬೆಲೆ ಏರಿಕೆಯ ಭಾರವು ವಿಶ್ವದ ಅತಿ ದುರ್ಬಲ ಜನಸಮುದಾಯಗಳ ಮೇಲೆ ಹೆಚ್ಚು ಬೀಳಲಿದೆ ಎಂದು ತಿಳಿಸಿದ್ದಾರೆ.
ಮಧ್ಯಪ್ರಾಚ್ಯದ ಯುದ್ಧವು ಆ ಪ್ರದೇಶದಲ್ಲಿಯೂ ಹಾಗು ಅದರ ಹೊರಗೂ ಜನರ ಜೀವನ ಮತ್ತು ಜೀವನೋಪಾಯಗಳನ್ನು ಅಸ್ತವ್ಯಸ್ತಗೊಳಿಸುತ್ತಿದೆ. ಇದು ಈಗಾಗಲೇ ಆಧುನಿಕ ಇತಿಹಾಸದಲ್ಲೇ ಅತಿದೊಡ್ಡ ಇಂಧನ ಮಾರುಕಟ್ಟೆ ಅಸ್ತವ್ಯಸ್ತತೆಯೊಂದನ್ನು ಉಂಟುಮಾಡಿದೆ.ತೈಲ, ಅನಿಲ ಮತ್ತು ರಸಗೊಬ್ಬರಗಳ ಬೆಲೆಗಳಲ್ಲಿ ತೀವ್ರ ಏರಿಕೆ, ಜೊತೆಗೆ ಸಾರಿಗೆ (ತಡೆಗಳು), ಅನಿವಾರ್ಯವಾಗಿ ಆಹಾರ ಬೆಲೆ ಏರಿಕೆಗೆ ಹಾಗೂ ಆಹಾರ ಭದ್ರತೆಯ ಸಮಸ್ಯೆಗಳಿಗೆ ಕಾರಣವಾಗಲಿವೆ ಎಂದು ಆತಂಕ ವ್ಯಕ್ತಪಡಿಸಿದೆ.
ಮೂರು ಸಂಸ್ಥೆಗಳು ಪರಿಸ್ಥಿತಿಯನ್ನು ನಿಕಟವಾಗಿ ಗಮನಿಸುತ್ತಿದ್ದು, ಸಂಕಷ್ಟದಿಂದ ಪ್ರಭಾವಿತವಾಗಿರುವವರಿಗೆ ಸಹಾಯ ಮಾಡಲು ಲಭ್ಯವಿರುವ ಎಲ್ಲಾ ಸಾಧನಗಳನ್ನು ಸಂಯೋಜಿತವಾಗಿ ಬಳಸುವುದಾಗಿ ತಿಳಿಸಿವೆ.
ಈ ಪರಿಸ್ಥಿತಿಯ ಭಾರವು ವಿಶೇಷವಾಗಿ ಕಡಿಮೆ ಆದಾಯದ, ಆಮದು ಅವಲಂಬಿತ ಆರ್ಥಿಕತೆಗಳಲ್ಲಿರುವ ಜನರ ಮೇಲೆ ಹೆಚ್ಚು ಬೀಳಲಿದೆ. ಇಂಧನದ ಬೆಲೆ ಏರಿಕೆ ಮತ್ತು ಆಹಾರ ಬೆಲೆಗಳಲ್ಲಿ ಸಂಭವನೀಯ ಏರಿಕೆ ಸರ್ಕಾರಗಳಿಗೆ ಹೆಚ್ಚಿನ ಒತ್ತಡ ಉಂಟುಮಾಡುತ್ತದೆ, ವಿಶೇಷವಾಗಿ ಈಗಾಗಲೇ ಸಾಲದ ಭಾರ ಹೆಚ್ಚಿರುವ ಮತ್ತು ಹಣಕಾಸಿನ ಅವಕಾಶಗಳು ಕಡಿಮೆ ಇರುವ ದೇಶಗಳಲ್ಲಿ ದುರ್ಬಲ ಕುಟುಂಬಗಳನ್ನು ರಕ್ಷಿಸುವ ಸಾಮರ್ಥ್ಯ ಕುಂದುತ್ತದೆ ಎಂದು ತಿಳಿಸಿದೆ.
ತಮ ತಮ್ಮ ಕರ್ತವ್ಯಗಳ ಅನ್ವಯ, ಈಗಿರುವ ಪ್ರತಿಕ್ರಿಯಾ ವ್ಯವಸ್ಥೆಗಳನ್ನು ಆಧರಿಸಿ, ಜೀವಗಳು ಮತ್ತು ಜೀವನೋಪಾಯಗಳನ್ನು ರಕ್ಷಿಸಲು ಹಾಗೂ ಸ್ಥಿರತೆ, ಬೆಳವಣಿಗೆ ಮತ್ತು ಉದ್ಯೋಗಗಳನ್ನು ಒದಗಿಸುವ ಶಕ್ತಿಯುತ ಪುನಶ್ಚೇತನಕ್ಕೆ ಬೆಂಬಲ ನೀಡುವುದಾಗಿ ಸಂಸ್ಥೆಗಳು ತಿಳಿಸಿವೆ. ಯುದ್ಧ ವಿರಾಮಕ್ಕೆ ಒಪ್ಪಂದವಾದ ಒಂದು ದಿನದ ಬಳಿಕ ಈ ಪ್ರಕಟಣೆ ಬಂದಿದೆ.
