Tuesday, April 14, 2026
Homeಅಂತಾರಾಷ್ಟ್ರೀಯಮೊಜ್ತಬಾ ಸುಪ್ರೀಂ ಲೀಡರ್ ಆಗುವುದು ಆಯತೊಲ್ಲಾ ಖಮೇನಿಗೆ ಇಷ್ಟವಿರಲಿಲ್ಲವಂತೆ

ಮೊಜ್ತಬಾ ಸುಪ್ರೀಂ ಲೀಡರ್ ಆಗುವುದು ಆಯತೊಲ್ಲಾ ಖಮೇನಿಗೆ ಇಷ್ಟವಿರಲಿಲ್ಲವಂತೆ

In Khamenei's Will, He Didn't Want Son To Be Iran's Supreme Leader: Report

ಟೆಹ್ರಾನ್‌, ಮಾ.11- ಇರಾನ್‌ ಸರ್ವೋಚ್ಚ ನಾಯಕರಾಗಿದ್ದ ಅಯತೊಲ್ಲಾ ಅಲಿ ಖಮೇನಿಯವರ ಹತ್ಯೆಯ ನಂತರ ಅವರ ಮಗ ಮೊಜ್ತಬಾ ಖಮೇನಿ ಅವರನ್ನು ಉತ್ತರಾಧಿಕಾರಿಯಾಗಿ ಆಯ್ಕೆ ಮಾಡಲಾಗಿದೆ. ಖಮೇನಿಗೆ ತಮ್ಮ ಮಗ ತನ್ನ ಉತ್ತರಾಧಿಕಾರಿಯಾಗಬೇಕೆಂದು ಎಂದಿಗೂ ಬಯಸಿರಲಿಲ್ಲ ಎಂಬ ಸುದ್ದಿ ಇದೀಗ ಬಹಿರಂಗವಾಗಿದೆ.

ಖಮೇನಿ ತಮ್ಮ ಜೀವಿತಾವಧಿಯಲ್ಲಿ ಹಲವಾರು ಬಾರಿ ವಿಶೇಷ ಸಭೆಯಲ್ಲಿ ಇದರ ಬಗ್ಗೆ ಮಾತನಾಡಿದ್ದರು. ಇದರ ಹಿಂದಿನ ಕಾರಣ ದಾಳಿಯ ಭಯ ಅಥವಾ ಅವರ ಮಗನ ಜೀವ ಹೋಗುತ್ತೆ ಎಂಬುದಲ್ಲ ಬೇರೆಯದೇ ಕಾರಣ ಇದೆ ಎಂಬ ವಿಚಾರವನ್ನು ತಜ್ಞರ ಸಭೆಯ ಹಿರಿಯ ಸದಸ್ಯ ಮಹಮೂದ್‌ ಮೊಹಮ್ಮದಿ ಇರಾಕಿ ಸುದ್ದಿ ಸಂಸ್ಥೆಗೆ ನೀಡಿದ ಸಂದರ್ಶನದಲ್ಲಿ ಈ ರಹಸ್ಯವನ್ನು ಬಹಿರಂಗಪಡಿಸಿದ್ದಾರೆ.

ಖಮೇನಿಯವರ ವಿರೋಧದ ಹಿಂದಿನ ನಿಜವಾದ ಕಾರಣವೆಂದರೆ ಅವರು ರಾಜವಂಶಸ್ಥರು ಎಂದು ಹಣೆಪಟ್ಟಿ ಕಟ್ಟಿಕೊಳ್ಳುವುದನ್ನು ಬಯಸಿರಲಿಲ್ಲ.ಅವರು ತಮ್ಮ ಮಗನಿಗೆ ಸಿಂಹಾಸನವನ್ನು ಹಸ್ತಾಂತರಿಸಿದ್ದಾರೆಂದು ಜನರು ಹೇಳಿಕೊಳ್ಳುವುದು ಇಷ್ಟವಿರಲಿಲ್ಲ. 1979 ರ ಇರಾನ್‌ನಲ್ಲಿ ನಡೆದ ಇಸ್ಲಾಮಿಕ್‌ ಕ್ರಾಂತಿಯು ರಾಜಪ್ರಭುತ್ವವನ್ನು ಕೊನೆಗೊಳಿಸುವ ಗುರಿಯನ್ನು ಹೊಂದಿತ್ತು.

ತಮ್ಮ ಮಗ ತನ್ನ ಉತ್ತರಾಧಿಕಾರಿಯಾದರೆ, ಇರಾನ್‌ ಆನುವಂಶಿಕ ನಾಯಕತ್ವ ವ್ಯವಸ್ಥೆಗೆ, ಅಂದರೆ ರಾಜರು ಮತ್ತು ರಾಜಕುಮಾರರ ವ್ಯವಸ್ಥೆಗೆ ಮರಳಿದೆ ಎಂಬ ಸಂದೇಶವನ್ನು ಜಗತ್ತಿಗೆ ಮತ್ತು ಇರಾನಿನ ಜನರಿಗೆ ಕಳುಹಿಸುತ್ತದೆ ಎಂದು ಖಮೇನಿ ನಂಬಿದ್ದರು. 2009 ಕ್ಕಿಂತ ಮೊದಲು ಅವರು ಅಧಿಕೃತವಾಗಿ ಯಾವುದೇ ಸರ್ಕಾರಿ ಹುದ್ದೆಯನ್ನು ಹೊಂದಿರಲಿಲ್ಲ.

ಇದರ ಹೊರತಾಗಿಯೂ, ಅವರನ್ನು ಇರಾನ್‌ನ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರೆಂದು ಪರಿಗಣಿಸಲಾಗಿತ್ತು. ಯುಎಸ್‌‍ ಖಜಾನೆ ಇಲಾಖೆಯ ಪ್ರಕಾರ, ಮೊಜ್ತಬಾ ತನ್ನ ತಂದೆಯ ವಿಶ್ವಾಸವನ್ನು ಗಳಿಸುವುದಲ್ಲದೆ, ಇರಾನ್‌ನ ಅತ್ಯಂತ ಶಕ್ತಿಶಾಲಿ ಮಿಲಿಟರಿ ಪಡೆ, ಇಸ್ಲಾಮಿಕ್‌ ರೆವಲ್ಯೂಷನರಿ ಗಾರ್ಡ್‌ ಕಾರ್ಪ್ಸ್ (ನೊಂದಿಗೆ ಆಳವಾದ ಸಂಬಂಧವನ್ನು ಹೊಂದಿದ್ದರು.

ಇರಾನ್‌ನಲ್ಲಿ, ಸರ್ವೋಚ್ಚ ನಾಯಕನನ್ನು 88 ಧಾರ್ಮಿಕ ವಿದ್ವಾಂಸರ ಗುಂಪಾದ ತಜ್ಞರ ಸಭೆಯು ಆಯ್ಕೆ ಮಾಡುತ್ತದೆ. ದೇಶವನ್ನು ಯಾರು ಮುನ್ನಡೆಸಬೇಕೆಂದು ಈ ಸಂಸ್ಥೆ ನಿರ್ಧರಿಸುತ್ತದೆ. ಅಯತೊಲ್ಲಾ ಅಲಿ ಖಮೇನಿ 1989 ರಿಂದ ಈ ಹುದ್ದೆಯನ್ನು ಅಲಂಕರಿಸಿದ್ದಾರೆ. ಅಸೆಂಬ್ಲಿಯ ಕೆಲವು ಸದಸ್ಯರು ಮೊಜ್ತಬಾ ಅವರ ಹೆಸರನ್ನು ಪರಿಗಣಿಸಲು ಬಯಸಿದ್ದರೂ, ಇರಾನ್‌ನ ಪ್ರಜಾಪ್ರಭುತ್ವ ಮತ್ತು ಕ್ರಾಂತಿಕಾರಿ ಇಮೇಜ್‌ಗೆ ಹಾನಿಯಾಗದಂತೆ ಸರ್ವೋಚ್ಚ ನಾಯಕ ಸ್ವತಃ ಇದಕ್ಕೆ ಬ್ರೇಕ್‌ ಹಾಕಿದ್ದರು ಎನ್ನುವ ಮಾಹಿತಿ ಲಭ್ಯವಾಗಿದೆ.

RELATED ARTICLES

Latest News