Saturday, April 11, 2026
Homeರಾಜ್ಯನಿಮ್ಮ ಕಾರು ಚಾಲಕರ ಮೇಲೆ ಒಂದು ಕಣ್ಣಿಡಿ, ಮನೆಯೊಳಗೆ ಬಿಟ್ಟುಕೊಳ್ಳುವ ಮುನ್ನ ಜೋಕೆ..!

ನಿಮ್ಮ ಕಾರು ಚಾಲಕರ ಮೇಲೆ ಒಂದು ಕಣ್ಣಿಡಿ, ಮನೆಯೊಳಗೆ ಬಿಟ್ಟುಕೊಳ್ಳುವ ಮುನ್ನ ಜೋಕೆ..!

Keep an eye on your car drivers, before you let them inside your house

ಬೆಂಗಳೂರು,ಮಾ.11-ಕಾರು ಚಾಲಕರನ್ನು ಮನೆಯೊಳಗೆ ಬಿಟ್ಟುಕೊಳ್ಳಬೇಡಿ, ಏಕೆಂದರೆ ನೀವು ಇಟ್ಟಿರುವಂತಹ ಹಣ, ಆಭರಣಗಳನ್ನು ನೋಡಿ ದೋಚಿಕೊಂಡು ಹೋಗಬಹುದು ಜೋಕೆ….! ಇಂತಹದೊಂದು ಘಟನೆ ಅಮೃತಹಳ್ಳಿ ಪೊಲೀಸ್‌‍ ಠಾಣೆ ವ್ಯಾಪ್ತಿಯಲ್ಲಿ ನಡೆದಿದ್ದು, ರಿಯಲ್‌ ಎಸ್ಟೇಟ್‌ ಉದ್ಯಮಿ ಮನೆಯಲ್ಲಿ ಕಾರು ಚಾಲಕನಾಗಿ ಕೆಲಸ ಮಾಡುತ್ತಾ ಆಭರಣಗಳನ್ನು ಕಳ್ಳತನ ಮಾಡಿ ಇದೀಗ ಪೊಲೀಸರ ಕೈಗೆ ಸಿಕ್ಕಿ ಬಿದ್ದಿದ್ದಾನೆ.ಜಕ್ಕೂರಿನ ನಿವಾಸಿ ಅಭಿಲಾಶ್‌ ಗೌಡ (30) ಬಂಧಿತ ಕಾರು ಚಾಲಕ.

ಅಮೃತಹಳ್ಳಿಯಲ್ಲಿ ರಿಯಲ್‌ ಎಸ್ಟೇಟ್‌ ಉದ್ಯಮಿ ಪ್ರತೀಕ್‌,ಪತ್ನಿ ಭುವನಾ ಹಾಗೂ ಅವರ ತಾಯಿ ವಾಸವಾಗಿದ್ದು,ಅಭಿಲಾಶ್‌ ಸುಮಾರು 10 ವರ್ಷಗಳಿಂದ ಕಾರು ಚಾಲಕನಾಗಿ ಕೆಲಸ ಮಾಡಿಕೊಂಡಿದ್ದು, 2 ವರ್ಷಗಳಿಂದ ಇವರ ಮನೆ ಹಾಗೂ ಸಂಬಂಧಿಕರ ಮನೆಯಲ್ಲಿ ಮದುವೆ ಹಾಗೂ ಇನ್ನಿತರ ಸಮಾರಂಭಗಳಲ್ಲಿ ಅವರು ಧರಿಸುತ್ತಿದ್ದ ಚಿನ್ನ ಹಾಗೂ ವಜ್ರದ ಒಡವೆಗಳನ್ನು ನೋಡಿಕೊಂಡಿದ್ದನು.

ನಂತರದ ದಿನಗಳಲ್ಲಿ ಯಾರೂ ಇಲ್ಲದ ಸಮಯದಲ್ಲಿ, ಯಾರಿಗೂ ಗೊತ್ತಾಗದ ಹಾಗೆ ಮನೆಯ ಇತರೆ ಸ್ಥಳಗಳಲ್ಲಿ ಇಟ್ಟಿರುವುದನ್ನು ನೋಡಿಕೊಂಡು ಚಿನ್ನ ಹಾಗೂ ವಜ್ರದ ಆಭರಣಗಳನ್ನು ಕಳ್ಳತನ ಮಾಡಿಕೊಂಡು ಹೋಗಿದ್ದಾನೆ.

ಈತನೊಂದಿಗೆ ಸ್ನೇಹಿತ ಮದನ್‌ಕುಮಾರ್‌ ಎಂಬಾತನೂ ಸಹ ಬಂದು ಕಳ್ಳತನಕ್ಕೆ ಸಹಕರಿಸಿದ್ದಾನೆ. ಕೆಲ ದಿನಗಳ ನಂತರ ಇಟ್ಟಿದ್ದ ಸ್ಥಳಗಳಲ್ಲಿ ಆಭರಣಗಳು ಕಾಣದಿದ್ದಾಗ ಕಾರು ಚಾಲಕ ಹಾಗೂ ಆತನ ಜೊತೆಯಲ್ಲಿ ಬಂದಿದ್ದ ಸ್ನೇಹಿತನ ಬಗ್ಗೆ ಅನುಮಾನಗೊಂಡು ಪೊಲೀಸರಿಗೆ ದೂರು ನೀಡಿದ್ದಾರೆ.

ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡ ಪೊಲೀಸರು ಪ್ರಕರಣ ದಾಖಲಾದ ಆರು ಗಂಟೆಯೊಳಗಾಗಿ ಆರೋಪಿ ಅಭಿಲಾಶ್‌ನನ್ನು ಬಂಧಿಸಿ, ವಿಚಾರಣೆಗೆ ಒಳಪಡಿಸಿದಾಗ ತನ್ನ ದುಶ್ಚಟಗಳಿಗಾಗಿ ಮತ್ತು ಐಷಾರಾಮಿ ಜೀವನ ನಡೆಸುವ ಸಲುವಾಗಿ ಹಣದ ಅವಶ್ಯಕತೆ ಇರುವುದರಿಂದ ಆಭರಣ ಕಳ್ಳತನ ಮಾಡಿದ್ದಾಗಿ ಹೇಳಿದ್ದಾನೆ.

ಸ್ನೇಹಿತ ಮದನ್‌ ಕುಮಾರ್‌ನೊಂದಿಗೆ ಸೇರಿಕೊಂಡು ಕಳ್ಳತನ ಮಾಡಿರುವ ಚಿನ್ನ ಹಾಗೂ ವಜ್ರದ ಒಡವೆಗಳನ್ನು ಗೋಲ್ಡ್ ಕಂಪನಿಗಳಲ್ಲಿ ಮತ್ತು ಸ್ನೇಹಿತರಿಗೆ ಮಾರಾಟ ಮಾಡಿರುವುದಾಗಿ ತಿಳಿಸಿದ್ದಾನೆ.

ತನಿಖೆ ಮುಂದುವರೆಸಿ 14.65 ಲಕ್ಷ ರೂ. ಮೌಲ್ಯದ 80 ಗ್ರಾಂ ಚಿನ್ನದ ಗಟ್ಟಿ ಪೀಸ್‌‍ಗಳು ಹಾಗೂ ಒಂದು ಸ್ವರೂಪ್‌ ಕೀ ಸ್ಟೋನ್‌ ಪೀಸ್‌‍ ವಡವೆಗಳನ್ನು ವಶಪಡಿಸಿಕೊಂಡಿದ್ದಾರೆ. ಈ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಆರೋಪಿಯ ಸ್ನೇಹಿತ ಮದನ್‌ಕುಮಾರ್‌ಗಾಗಿ ಶೋಧ ಕಾರ್ಯ ಮುಂದುವರೆಸಿದ್ದಾರೆ. ಈ ಕಾರ್ಯಾಚರಣೆಯನ್ನು ಇನ್‌್ಸಪೆಕ್ಟರ್‌ ಅಂಬರೀಶ್‌ ಹಾಗೂ ಎಎಸ್‌‍ಐ ಬಾಬು ಮತ್ತು ಸಿಬ್ಬಂದಿ ತಂಡ ಕೈಗೊಂಡಿತ್ತು.

RELATED ARTICLES

Latest News