Homeಅಂತಾರಾಷ್ಟ್ರೀಯಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಶೋಷಣೆ : ಫ್ರಾನ್ಸ್‌ನಲ್ಲಿ ಭಾರತೀಯನಿಗೆ 20 ವರ್ಷ ಜೈಲು

ಅಪ್ರಾಪ್ತ ಬಾಲಕಿಯರಿಗೆ ಲೈಂಗಿಕ ಶೋಷಣೆ : ಫ್ರಾನ್ಸ್‌ನಲ್ಲಿ ಭಾರತೀಯನಿಗೆ 20 ವರ್ಷ ಜೈಲು

ಪ್ಯಾರಿಸ್‌‍,ಅ.10- ಅಪ್ರಾಪ್ತ ಯುವತಿಯರನ್ನು ಲೈಂಗಿಕ ಕೃತ್ಯಗಳಲ್ಲಿ ತೊಡಗುವಂತೆ ಹಿಂಸೆ ನೀಡುತ್ತಿದ್ದ ಪುರುಷ-ಕೇಂದ್ರಿತ ಗುಂಪೊಂದರ ನೇತೃತ್ವ ವಹಿಸಿದ್ದ ಭಾರತೀಯ ಮೂಲದ ಯುವಕನೊಬ್ಬನಿಗೆ ಪ್ಯಾರಿಸ್‌‍ ನ್ಯಾಯಾಲಯವೊಂದು 20 ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ.ರೋಹನ್‌ ರಾಣೆ ಶಿಕ್ಷೆಗೊಳಗಾದ ಅಪರಾಧಿ.

ಸಂಘಟಿತ ಗುಂಪಿನ ಭಾಗವಾಗಿ ಸುಲಿಗೆಯಂತಹ ಅಪರಾಧಗಳನ್ನು ಎಸಗಿದ್ದಲ್ಲದೆ, ಸಂತ್ರಸ್ತರ ಮೇಲೆ ಹಿಂಸೆ ಮತ್ತು ಕ್ರೌರ್ಯವನ್ನು ಮೆರೆದ ಗಂಭೀರ ಅಪರಾಧಗಳಿಗಾಗಿ ರೋಹನ್‌ ರಾಣೆ ಅವರನ್ನು ನ್ಯಾಯಾಲಯವು ತಪ್ಪಿತಸ್ಥರೆಂದು ಘೋಷಿಸಿದೆ. ಅಮೆರಿಕ, ಬ್ರಿಟನ್‌ ಮತ್ತು ಕೆನಡಾದಲ್ಲಿ ದುರ್ಬಲ ಮಕ್ಕಳನ್ನು ಗುರಿಯಾಗಿಸಿಕೊಂಡು, ಹಿಂಸಾತಕ ಮತ್ತು ಲೈಂಗಿಕ ವಿಡಿಯೋಗಳನ್ನು ತಯಾರಿಸಲು ಬಲವಂತಪಡಿಸುತ್ತಿದ್ದ ಅಂತಾರಾಷ್ಟ್ರೀಯ ಅಪರಾಧ ಜಾಲದಲ್ಲಿ ಭಾಗಿಯಾಗಿದ್ದ ಮತ್ತು ಪುರುಷ-ಕೇಂದ್ರಿತ ಗುಂಪೊಂದನ್ನು ಮುನ್ನಡೆಸುತ್ತಿದದ್ದು ಸಾಬೀತಾಗಿದೆ.

ರೋಹನ್‌ ರಾಣೆ ಅವರ ವಿಚಾರಣೆಯು ಸೋಮವಾರ (ಅಕ್ಟೋಬರ್‌ 5, 2026) ಪ್ಯಾರಿಸ್‌‍ನ ವಿಶೇಷ ಕ್ರಿಮಿನಲ್‌ ನ್ಯಾಯಾಲಯದಲ್ಲಿ ಪ್ರಾರಂಭವಾಯಿತು ಮತ್ತು ಇದನ್ನು ಮುಚ್ಚಿದ ಬಾಗಿಲಿನ ಹಿಂದೆ (ಗೌಪ್ಯವಾಗಿ) ನಡೆಸಲಾಗುತ್ತಿದೆ ಎಂದು ಸರ್ಕಾರಿ ಸ್ವಾಮ್ಯದ ಫ್ರಾನ್‌್ಸ 24 ದೂರದರ್ಶನ ಜಾಲವು ವರದಿ ಮಾಡಿದೆ.

ಸ್ಯಾಡಿಸಮ್‌ (ಇತರರಿಗೆ ನೋವು ನೀಡುವುದರಲ್ಲಿ ಆನಂದ ಪಡೆಯುವ ಪ್ರವೃತ್ತಿ) ಮತ್ತು ಭೀಕರ ಹಿಂಸೆಯನ್ನು ಇಷ್ಟಪಡುವ ನಿಯೋ-ನಾಜಿ (ನವ-ನಾಜಿ) ಎಂದು ಬಣ್ಣಿಸಲಾದ ರಾಣೆಗೆ 30 ವರ್ಷಗಳ ಜೈಲು ಶಿಕ್ಷೆ ವಿಧಿಸಬೇಕೆಂದು ಸರ್ಕಾರಿ ಅಭಿಯೋಜಕರು ಕೋರಿದ್ದರು.

ರಾಣೆ ನೇತೃತ್ವದ ಗುಂಪಿನಿಂದ ಸಂತ್ರಸ್ತರಾದವರಲ್ಲಿ ಹೆಚ್ಚಿನವರು ಅಮೆರಿಕದ ಬಾಲಕಿಯರಾಗಿದ್ದಾರೆ. ಅವರಲ್ಲಿ ಅನೇಕರು 15 ವರ್ಷಕ್ಕಿಂತ ಕಡಿಮೆ ವಯಸ್ಸಿನವರಾಗಿದ್ದರು. ಈ ಗುಂಪಿನ ಇತರ ಯುವ ಸದಸ್ಯರು ಅಮೆರಿಕ, ಭಾರತ, ಜರ್ಮನಿ ಮತ್ತು ನ್ಯೂಜಿಲೆಂಡ್‌ನವರಾಗಿದ್ದರು ಎಂದು ವರದಿಯಾಗಿದೆ. ಸಂತ್ರಸ್ತ ಬಾಲಕಿಯರಲ್ಲಿ ಆರು ಮಂದಿ, ಈಗ 18 ರಿಂದ 21 ವರ್ಷ ವಯಸ್ಸಿನವರು, ಅಧಿಕೃತ ದೂರುಗಳನ್ನು ನೀಡಿದ್ದಾರೆ. ಸುಮಾರು 20 ಸಂತ್ರಸ್ತರನ್ನು ಗುರುತಿಸಲಾಗಿದೆ. ಆದರೆ ಇತರರನ್ನು ಸಂಪರ್ಕಿಸಲು ಸಾಧ್ಯವಾಗಲಿಲ್ಲ ಎಂದು ಅಭಿಯೋಜಕರು ತಿಳಿಸಿದ್ದಾರೆ.

RELATED ARTICLES
spot_img

Latest News