Homeಅಂತಾರಾಷ್ಟ್ರೀಯಅಮೆರಿಕದಲ್ಲಿ ತಾಯಿ ಹಾಗೂ ಸಹೋದರನ ಹತ್ಯೆ ಮಾಡಿದ್ದ ಭಾರತೀಯ ಮೂಲದ ಬಾಲಕನ ಬಂಧನ

ಅಮೆರಿಕದಲ್ಲಿ ತಾಯಿ ಹಾಗೂ ಸಹೋದರನ ಹತ್ಯೆ ಮಾಡಿದ್ದ ಭಾರತೀಯ ಮೂಲದ ಬಾಲಕನ ಬಂಧನ

Indian-origin teen charged with murdering mother, brother in US

ನ್ಯೂಯಾರ್ಕ್‌, ಆ.13- ಅಮೆರಿಕದ ಮ್ಯಾಸಚೂಸೆಟ್ಸ್ ನಲ್ಲಿ ಭಾರತೀಯ ಮೂಲದ 17 ವರ್ಷದ ಬಾಲಕನೊಬ್ಬ ತನ್ನ ತಾಯಿ ಹಾಗೂ ಕಿರಿಯ ಸಹೋದರನನ್ನು ಹತ್ಯೆ ಮಾಡಿದ್ದಾನೆ.ಆಕ್ಟನ್‌ ನಿವಾಸಿ ಅರ್ಜುನ್‌ ಅರವಿಂದ್‌ ವಿರುದ್ಧ ಎರಡು ಕೊಲೆ ಪ್ರಕರಣಗಳು ದಾಖಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಮೃತಪಟ್ಟವರನ್ನು ಸಿದ್ಧಾಥ್‌ ಅರವಿಂದ್‌ (14)ಮತ್ತು 45 ವರ್ಷದ ತಾಯಿ ಸುಧಾ ವೆಂಕಟೇಶನ್‌ಎಂದು ಗುರುತಿಸಲಾಗಿದೆ.ಮಂಗಳವಾರ ಮನೆಯೊಳಗೆ ಅರ್ಜುನ್‌ ತನ್ನ ತಾಯಿ ಮತ್ತು ಸಹೋದರನ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿ ಬಳಿಕ ಸ್ಥಳದಿಂದ ಪರಾರಿಯಾಗಿದ್ದಾನೆ ಎಂದು ಆರೋಪಿಸಲಾಗಿದೆ.

ಇಬ್ಬರ ದೇಹಗಳ ಮೇಲೆ ಗಾಯದ ಗುರುತುಗಳು ಕಂಡುಬಂದಿವೆ. ಆದರೆ ಸಾವಿಗೆ ನಿಖರ ಕಾರಣ ಮತ್ತು ಸಾವಿನ ಸ್ವರೂಪದ ಬಗ್ಗೆ ಮುಖ್ಯ ವೈದ್ಯಕೀಯ ಪರೀಕ್ಷಾಧಿಕಾರಿ ಇನ್ನೂ ಮಾಹಿತಿ ಬಿಡುಗಡೆ ಮಾಡಿಲ್ಲ. ಹತ್ಯೆಗೆ ಬಳಸಲಾದ ಆಯುಧದ ಬಗ್ಗೆಯೂ ತನಿಖೆ ಮುಂದುವರಿದಿದೆ ಎಂದು ಕಾನೂನು ಅಧಿಕಾರಿಗಳು ತಿಳಿಸಿದ್ದಾರೆ.

ಬೋಸ್ಟನ್‌ನಿಂದ ಸುಮಾರು 48 ಕಿ.ಮೀ ದೂರದಲ್ಲಿರುವ ಆಕ್ಟನ್‌ನ ಮಾರ್ಥಾ ಲೇನ್‌ನಲ್ಲಿರುವ ಮನೆಯಲ್ಲಿ ಮಂಗಳವಾರ ಈ ಘಟನೆ ನಡೆದಿದೆ ಎಂದು ತಿಳಿಸಿದ್ದಾರೆ.ಆಗಸ್ಟ್‌ 11ರಂದು ಸಂಜೆ 6.37ರ ಸುಮಾರಿಗೆ ಅರ್ಜುನ್‌ನ ತಂದೆ ಪೊಲೀಸರಿಗೆ ಕರೆ ಮಾಡಿದ್ದರು. ಕುಟುಂಬದ ಸದಸ್ಯರನ್ನು ಸಂಪರ್ಕಿಸಲು ಸಾಧ್ಯವಾಗದ ಹಿನ್ನೆಲೆಯಲ್ಲಿ ಅವರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಮನೆಗೆ ಬರಬೇಕಿದ್ದ ಟ್ಯೂಟರ್‌ಗೂ ಮನೆಯಲ್ಲಿದ್ದವರನ್ನು ಸಂಪರ್ಕಿಸಲು ಸಾಧ್ಯವಾಗಿರಲಿಲ್ಲ.

ಅರ್ಜುನ್‌ನ ತಂದೆ ಕೆಲಸಕ್ಕೆ ತೆರಳುವ ಮುನ್ನ ಮಂಗಳವಾರ ಬೆಳಗ್ಗೆ ಪತ್ನಿ ಸುಧಾ ಅವರೊಂದಿಗೆ ಕೊನೆಯ ಬಾರಿ ಮಾತನಾಡಿದ್ದರು. ಕಿರಿಯ ಮಗ ಸಿದ್ಧಾರ್ಥ್‌ ಮಧ್ಯಾಹ್ನದ ವೇಳೆಗೆ ಕೊನೆಯ ಬಾರಿ ಕಾಣಿಸಿಕೊಂಡಿದ್ದ.

ಮನೆಗೆ ತೆರಳಿದ ಪೊಲೀಸರು ಇಬ್ಬರೂ ಮೃತಪಟ್ಟಿರುವುದನ್ನು ಪತ್ತೆಹಚ್ಚಿದರು. ಸಿದ್ಧಾರ್ಥ್‌ ಮೊದಲ ಮಹಡಿಯಲ್ಲಿ ಹಾಗೂ ಸುಧಾ ನೆಲಮಾಳಿಗೆಯಲ್ಲಿ ಮೃತಪಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದರು.ಅರ್ಜುನ್‌ ಮನೆಯಲ್ಲಿ ಇರಲಿಲ್ಲ. ಆತ ತನ್ನ ತಾಯಿಯ ಕಾರಿನಲ್ಲಿ ಪರಾರಿಯಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ತನಿಖಾಧಿಕಾರಿಗಳು ಅರ್ಜುನ್‌ಗಾಗಿ ಹುಡುಕಾಟ ಆರಂಭಿಸಿದರೂ ಆರಂಭದಲ್ಲಿ ಆತನ ಪತ್ತೆಯಾಗಲಿಲ್ಲ. ಬಳಿಕ ವಿವಿಧ ಕಾನೂನು ಜಾರಿ ಸಂಸ್ಥೆಗಳಿಗೆ ಮಾಹಿತಿ ನೀಡಲಾಗಿದ್ದು, ಸಾರ್ವಜನಿಕರಿಗೂ ಆತನ ಬಗ್ಗೆ ಎಚ್ಚರಿಕೆ ನೀಡಲಾಗಿತ್ತು. ಮುಂಜಾನೆ
ಮ್ಯಾಸಚೂಸೆಟ್ಸ್ ನ ವೇಲ್ಯಾಂಡ್‌ನಲ್ಲಿ ಪಾರ್ಕಿಂಗ್‌ ಸ್ಥಳವೊಂದರಲ್ಲಿ ಅರ್ಜುನ್‌ ಕಾರಿನೊಳಗೆ ಇರುವುದು ಪತ್ತೆಯಾಗಿದೆ. ಯಾವುದೇ ಪ್ರತಿರೋಧವಿಲ್ಲದೆ ಆತನನ್ನು ವಶಕ್ಕೆ ಪಡೆಯಲಾಗಿದೆ.

ಅರ್ಜುನ್‌ನನ್ನು ಲೋವೆಲ್‌ ಜುವೆನೈಲ್‌ ಕೋರ್ಟ್‌ಗೆ ಹಾಜರುಪಡಿಸುವ ನಿರೀಕ್ಷೆಯಿತ್ತು. ಆದರೆ ಜುವೆನೈಲ್‌ ಕೋರ್ಟ್‌ಗೆ ಕೊಲೆ ಆರೋಪದ ವಿಚಾರಣೆ ನಡೆಸುವ ಅಧಿಕಾರವಿಲ್ಲದ ಕಾರಣ, ಕೊಲೆ ಹಾಗೂ ಸಂಬಂಧಿತ ಹಲ್ಲೆ ಆರೋಪಗಳ ವಿಚಾರಣೆಯನ್ನು ನಂತರ ಕಾನ್‌ಕಾರ್ಡ್‌ ಜಿಲ್ಲಾ ನ್ಯಾಯಾಲಯದಲ್ಲಿ ನಡೆಸಲಾಗುವುದು ಎಂದು ಅಧಿಕಾರಿ ತಿಳಿಸಿದ್ದಾರೆ.

RELATED ARTICLES
spot_img

Latest News