Thursday, May 14, 2026
Homeಅಂತಾರಾಷ್ಟ್ರೀಯಹದಗೆಡುತ್ತಿದೆಯಾ ಟ್ರಂಪ್‌ ಆರೋಗ್ಯ..?

ಹದಗೆಡುತ್ತಿದೆಯಾ ಟ್ರಂಪ್‌ ಆರೋಗ್ಯ..?

ವಾಷಿಂಗ್ಟನ್‌,ಮೇ.12-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್‌ ಅವರು ಮೇ ತಿಂಗಳ ಕೊನೆಯಲ್ಲಿ ಮತ್ತೊಮೆ ವೈದ್ಯಕೀಯ ಹಾಗೂ ದಂತ ತಪಾಸಣೆಗೆ ಒಳಗಾಗಲಿದ್ದಾರೆ ಎಂದು ಶ್ವೇತಭವನ ತಿಳಿಸಿದೆ. ಮುಂದಿನ ತಿಂಗಳು 80ನೇ ವರ್ಷಕ್ಕೆ ಕಾಲಿಡಲಿರುವ ಟ್ರಂಪ್‌ ಅವರು ಮೇ 26ರಂದು ವಾಲ್ಟರ್‌ ರೀಡ್‌ ರಾಷ್ಟ್ರೀಯ ಮಿಲಿಟರಿ ವೈದ್ಯಕೀಯ ಕೇಂದ್ರದಲ್ಲಿ ವೈದ್ಯರನ್ನು ಭೇಟಿಯಾಗಲಿದ್ದಾರೆ ಎಂದು ಶ್ವೇತಭವನ ಸಂಕ್ಷಿಪ್ತ ಪ್ರಕಟಣೆಯಲ್ಲಿ ತಿಳಿಸಿದೆ.

ಇದು ಟ್ರಂಪ್‌ ಅವರು ಅಧಿಕಾರಕ್ಕೆ ಬಂದ ನಂತರ ವೈದ್ಯಕೀಯ ತಜ್ಞರನ್ನು ಸಾರ್ವಜನಿಕವಾಗಿ ಭೇಟಿಯಾಗುತ್ತಿರುವುದು ನಾಲ್ಕನೇ ಭಾರಿಯಾಗಿದೆ.ಶ್ವೇತಭವನ ಇದನ್ನು ವಾರ್ಷಿಕ ಆರೋಗ್ಯ ತಪಾಸಣೆ ಹಾಗೂ ನಿಯಮಿತ ಮುನ್ನೆಚ್ಚರಿಕಾ ಆರೈಕೆಯ ಭಾಗವೆಂದು ವಿವರಿಸಿದೆ.

ಅಧ್ಯಕ್ಷರ ಆರೋಗ್ಯದ ವಿಚಾರವು ಅಮೆರಿಕದಲ್ಲಿ ಸಾಕಷ್ಟು ಚರ್ಚೆಗೆ ಗ್ರಾಸವಾಗಿದ್ದು, ಕಳೆದ ವರ್ಷ ಹೃದಯ ಮತ್ತು ಹೊಟ್ಟೆಯ ಸ್ಕ್ಯಾನ್‌ ಮಾಡಿಸಿಕೊಂಡ ನಂತರ ಸಾರ್ವಜನಿಕರಲ್ಲಿ ಆರೋಗ್ಯದ ಬಗ್ಗೆ ಪ್ರಶ್ನೆಗಳು ಹೆಚ್ಚಾಗಿದ್ದರಿಂದ ಅದಕ್ಕೆ ಪಶ್ಚಾತ್ತಾಪಪಟ್ಟಿದ್ದಾಗಿ ಟ್ರಂಪ್‌ ಹೇಳಿದ್ದರು.

ಹಿಂದಿನ ಅಧ್ಯಕ್ಷ ಬಿಡನ್‌ ಅವರ ವಯೋಸಹಜ ಆರೋಗ್ಯ ಸಮಸ್ಯೆಗಳ ಕುರಿತು ಪದೇಪದೇ ಟೀಕಿಸುತ್ತಿದ್ದ ಟ್ರಂಪ್‌‍, ಇತ್ತೀಚೆಗೆ ತಮ್ಮ ಆರೋಗ್ಯ ಉತ್ತಮವಾಗಿದೆ ಎಂದು ಹೇಳಿದ್ದಾರೆ.
ಓವಲ್‌ ಕಚೇರಿ ಕಾರ್ಯಕ್ರಮದಲ್ಲಿ ಮಾತನಾಡಿದ ಟ್ರಂಪ್‌,50 ವರ್ಷಗಳ ಹಿಂದೆ ಹೇಗಿದ್ದೆನೋ ಈಗಲೂ ಹಾಗೆಯೇ ಇದ್ದೇನೆ. ನಿಜಕ್ಕೂ ಅದೇ ರೀತಿಯ ಅನುಭವವಾಗುತ್ತಿದೆ. ಇದಕ್ಕೆ ನಾನು ಅತ್ಯುತ್ತಮ ಆಹಾರ ಸೇವಿಸುತ್ತೇನೆ ಎಂಬುದರಿಂದ ಅಲ್ಲ ಎಂದು ಹೇಳಿದ್ದಾರೆ.
ನಾನು ದಿನಕ್ಕೆ ಗರಿಷ್ಠ ಒಂದು ನಿಮಿಷ ಮಾತ್ರ ವ್ಯಾಯಾಮ ಮಾಡುತ್ತೇನೆ ಎಂದು ಕಳೆದ ವಾರ ಹಾಸ್ಯವಾಗಿ ಮಾತನಾಡುತ್ತಾ ಹೇಳಿದ್ದರು.

ಅಧ್ಯಕ್ಷರು ತಮ ಆರೋಗ್ಯದ ಬಗ್ಗೆ ಮಾಹಿತಿಯನ್ನು ಸಾರ್ವಜನಿಕರಿಗೆ ಬಿಡುಗಡೆ ಮಾಡಬೇಕು ಎಂಬುದರಲ್ಲಿ ಹೆಚ್ಚಿನ ಸ್ವಾತಂತ್ರ್ಯ ಹೊಂದಿರುತ್ತಾರೆ. 2025ರ ಏಪ್ರಿಲ್‌ನಲ್ಲಿ ನಡೆದ ವಾರ್ಷಿಕ ಆರೋಗ್ಯ ತಪಾಸಣೆಯ ಬಳಿಕ ಟ್ರಂಪ್‌ ಅಧ್ಯಕ್ಷ ಹುದ್ದೆ ನಿರ್ವಹಿಸಲು ಸಂಪೂರ್ಣವಾಗಿ ಯೋಗ್ಯರಾಗಿದ್ದಾರೆ ಎಂದು ಅವರ ವೈದ್ಯರು ತಿಳಿಸಿದ್ದರು.

ಅವರ ವೈದ್ಯ ಪ್ರಕಾರ, 2020ರ ತಪಾಸಣೆಯ ನಂತರ ಟ್ರಂಪ್‌ ಸುಮಾರು 20 ಪೌಂಡ್‌ ತೂಕ ಇಳಿಸಿಕೊಂಡಿದ್ದಾರೆ.ಹೃದಯಾಘಾತ ಮತ್ತು ಸ್ಟ್ರೋಕ್‌ ಅಪಾಯ ಕಡಿಮೆ ಮಾಡಲು ಟ್ರಂಪ್‌ ಆಸ್ಪಿರಿನ್‌ ಸೇವಿಸುತ್ತಿದ್ದಾರೆ ಎಂದು ಹೇಳಲಾಗಿದೆ.

ಅಕ್ಟೋಬರ್‌ನಲ್ಲಿ ಟ್ರಂಪ್‌ ಅರ್ಧವಾರ್ಷಿಕ ಆರೋಗ್ಯ ತಪಾಸಣೆಗೂ ಒಳಗಾಗಿದ್ದು, ಆ ಸಂದರ್ಭದಲ್ಲಿ ಫ್ಲೂ ಲಸಿಕೆ ಹಾಗೂ ಕೋವಿಡ್‌‍-19 ಬೂಸ್ಟರ್‌ ಡೋಸ್‌‍ ಪಡೆದಿದ್ದರು. ಬಳಿಕ ಅವರು ಹೃದಯ ಮತ್ತು ಹೊಟ್ಟೆಯ ಸುಧಾರಿತ ಸ್ಕ್ಯಾನಿಂಗ್‌ ಪರೀಕ್ಷೆಗಳನ್ನೂ ಮುನ್ನೆಚ್ಚರಿಕಾ ಕ್ರಮವಾಗಿ ಮಾಡಿಸಿಕೊಂಡಿದ್ದಾಗಿ ತಿಳಿಸಿದ್ದಾರೆ.

ಈ ಆರೋಗ್ಯ ತಪಾಸಣೆ, ಚೀನಾ ಅಧ್ಯಕ್ಷ ಕ್ಸಿ ಜಿನ್‌ಪಿಂಗ್‌‍ ಅವರನ್ನು ಭೇಟಿಯಾಗಲು ಬೀಜಿಂಗ್‌ಗೆ ತರಳುತ್ತಿದ್ದಾರೆ.ಶೃಂಗಸಭೆಯಲ್ಲಿ ಬಾಗಿಯಾಗಿ ಟ್ರಂಪ್‌ ಅವರು ಮರಳಿದ ಸುಮಾರು 10 ದಿನಗಳ ಬಳಿಕ ಆರೋಗ್ಯ ತಪಾಸಣೆ ನಡೆಯಲಿದೆ.

RELATED ARTICLES

Latest News